ಬೆಂಗಳೂರು: ಬಜೆಟ್ ಪೂರ್ವಭಾವಿ ಸಭೆಯನ್ನು ಬಿಟ್ಟು ನಾಳೆ ದೆಹಲಿಗೆ ತೆರಳು ಡಿಸಿಎಂ ಡಿ.ಕೆ.ಶಿವಕುಮಾರ್ ನಿರ್ಧರಿಸಿದ್ದು, ಸಿಎಂ ಬಜೆಟ್‌ಗೆ ಸೆಡ್ಡು ಹೊಡೆದ್ರಾ ಎಂಬೊಂದು ಅನುಮಾನ ರಾಜಕೀಯ ವಲಯದಲ್ಲಿ ಮೂಡಿದೆ.
ಬೆಂಗಳೂರಿನಲ್ಲಿ ದೆಹಲಿ ಪ್ರವಾಸದ ಬಗ್ಗೆ ಮಾತನಾಡಿರುವ ಡಿಕೆಶಿ, ನಾನು ನಾಳೆ ದೆಹಲಿಗೆ ಹೋಗುತ್ತಿದ್ದೇನೆ. ನಮ್ಮದೇನೋ ರಾಜಕಾರಣ, ಕೇಂದ್ರ ಸಚಿವರು, ಹೈಕಮಾಂಡ್ ನಾಯಕರು ಕರೆದಿದ್ದಾರೆ. ಹೀಗಾಗಿ, ದೆಹಲಿಗೆ ಹೋಗುತ್ತಿದ್ದೇನೆ ಎಂದಿದ್ದಾರೆ.
ಬಜೆಟ್ ಸಭೆಯ ಗೈರಿನ ಬಗ್ಗೆ ಮಾತನಾಡಿದ ಅವರು ಸಿಎಂಗೆ ಏನು ಹೇಳಬೇಕೋ ಅದೆಲ್ಲವನ್ನೂ ಹೇಳಿದ್ದೇನೆ. ಅವರ ನುಮತಿ ಪಡೆದುಕೊಂಡಿದ್ದೇನೆ. ಹೀಗಾಗಿ, ನಾನು ದೆಹಲಿಗೆ ಹೋಗುವುದರಿಂದ ಬಜೆಟ್ ಪೂರ್ವಭಾವಿ ಸಭೆಗೆ ಯಾವುದೇ ತೊಂದರೆಯಿಲ್ಲ ಎಂದು ಡಿಕೆಶಿ ತಿಳಿಸಿದ್ದಾರೆ.

