ಚಿಕ್ಕಬಳ್ಳಾಪುರದ ನಾಲ್ವರು ಯುವಕರ ಸಾವು: ಸರಕಾರದಿಂದ 5 ಲಕ್ಷ ರು. ಪರಿಹಾರ
ಬೆಂಗಳೂರು: ಚಿಕ್ಕಬಳ್ಳಾಪುರದ ಒಂದೇ ಗ್ರಾಮದ ನಾಲ್ವರು ಯುವಕರ ಸಾವಿನ ಪ್ರಕರಣಕ್ಕೆ ಸಂಬAಧಿಸಿದAತೆ ಮೃತರ ಕುಟುಂಬಗಳಿಗೆ ೫ ಲಕ್ಷ ರು ಪರಿಹಾರ ಘೋಷಣೆ ಮಾಡಲಾಗಿದೆ.
ಚಿಕ್ಕಬಳ್ಳಾಪುರದ ಬಳಿ ಬೈಕ್‌ನಲ್ಲಿದ್ದ ಒಂದೇ ಗ್ರಾಮದ ನಾಲ್ವರು ಯುವಕರಿಗೆ ಟಿಪ್ಪರ್ ಗುದ್ದಿದ್ದು, ನಾಲ್ವರು ಯುವಕರು ಸ್ಥಳದಲ್ಲೇ ಮೃತಪಟ್ಟಿದ್ದರು. ಘಟನೆಯಲ್ಲಿ ಒಂದೇ ಕುಟುಂಬದ ಇಬ್ಬರು ಸಹೋದರರು ಮೃತಪಟ್ಟಿದ್ದರು. ಇದು ಕುಟುಂಬಸ್ಥರ ನೋವಿಗೆ ಕಾರಣವಾಗಿತ್ತು.
ಘಟನೆಗೆ ಸಂಬAಧಿಸಿ ಸಂತಾಪ ವ್ಯಕ್ತಪಡಿಸಿರುವ ಸಿಎಂ ಸಿದ್ದರಾಮಯ್ಯ ಅವರು, ಮೃತ ಯುವಕರ ಕುಟುಂಬಗಳಿಗೆ ತಲಾ ೫ ಲಕ್ಷ ಪರಿಹಾರ ಘೋಷಣೆ ಮಾಡಿದ್ದಾರೆ. ಆಮೂಲಕ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.


