ಶಿವಮೊಗ್ಗ : ಮೊಬೈಲ್ ಫೋನ್ ಸಮಸ್ಯೆಗೆ ಸಂಬAಧಿಸಿದAತೆ ಅರ್ಜಿದಾರರಿಗೆ ಸೂಕ್ತ ಪರಿಹಾರ ಕೊಡಬೇಕೆಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಎದುರುದಾರರಿಗೆ ಆದೇಶಿಸಿದೆ.
ಅರ್ಜಿದಾರರಾದ ಶಶಿಕುಮಾರ್ ಸಿ.ಎಸ್. ಎಂಬುವವರು ನ್ಯಾಷನಲ್ ಡಿಜಿಟಲ್, ನ್ಯಾಷನಲ್ ಎನ್ಕ್ಲೇವ್- ತೀರ್ಥಹಳ್ಳಿ, ಶಿವಮೊಗ್ಗ ಮತ್ತು ಕ್ಸಿಯಾಮಿ ಟೆಕ್ನಾಲಜಿ ಪ್ರೈ.ಲಿ., ಬೆಂಗಳೂರು ಹಾಗೂ ಕ್ಸಿಯಾಮಿ ಪೋನಿನ ಆಥರೈಸ್ಡ್ ಸರ್ವಿಸ್ ಸೆಂಟರ್, ಉಡುಪಿ ಇವರುಗಳ ವಿರುದ್ದ ಸೇವಾನ್ಯೂನ್ಯತೆ ಕುರಿತು ದಾಖಲಿಸಿದ್ದ ಪ್ರಕರಣದಲ್ಲಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಅರ್ಜಿದಾರರಿಗೆ ಪರಿಹಾರ ಪಾವತಿಸುವಂತೆ ಎದುರುದಾರರಿಗೆ ಆದೇಶಿಸಿದೆ.
ಶಶಿಕುಮಾರ್ ಸಿ.ಎಸ್. ಎಂಬುವವರು ಕ್ಸಿಯಾಮಿ ಕಂಪನಿಯ ಫೋನನ್ನು ೨೦೨೨ರಲ್ಲಿ ರೂ. ೪೦,೦೦೦ ಗಳಿಗೆ ಖರೀದಿಸಿದ್ದರು.. ಖರೀದಿಯ ವಾರಂಟಿ ಅವಧಿಯಲ್ಲಿ ಫೋನಿನ ಮೈಕ್ ಸರಿಯಾಗಿ ಕಾರ್ಯನಿರ್ವಹಿಸ ದಿರುವುದರಿಂದ ಎದುರುದಾರರಲ್ಲಿ ರಿಪೇರಿಗೆ ನೀಡಿದಾಗ ಮದರ್ ಬೋರ್ಡ್ ಸಮಸ್ಯೆಯೆಂದು ಮದರ್ ಬೋರ್ಡ್ ಬದಲಾಯಿಸಿ ಕೊಟ್ಟಿದ್ದರು. ನಂತರವೂ ಅದೇ ಸಮಸ್ಯೆ ಮುಂದುವರೆದಾಗ ಮತ್ತೆ ರಿಪೇರಿಗಾಗಿ ಕೊಟ್ಟಿದ್ದರು. ಆದರೆ ಎದುರುದಾರರು ಫೋನನ್ನು ರಿಪೇರಿ ಮಾಡಿ ವಾಪಸ್ಸು ಮಾಡುವುದಾಗಲಿ, ಅದರ ಬದಲು ಹೊಸ ಫೋನ್ ನೀಡುವುದಾಗಲಿ ಮಾಡಿಲ್ಲವೆಂದು ಆಪಾದಿಸಿದ್ದರು.
ಆಯೋಗವು ಪ್ರಕರಣದ ಅಂಶಗಳು, ಪಿರ್ಯಾದಿದಾರರು ಹಾಜರುಪಡಿಸಿದ ದಾಖಲೆಗಳನ್ನು ಕೂಲಂಕಷವಾಗಿ ಪರಿಶೀಲಿಸಿ, ಎದುರುದಾರರ ಫೋನಿನಲ್ಲಿರುವ ದೋಷವನ್ನು ಸರಿಪಡಿಸುವಲ್ಲಿ ವಿಫಲರಾಗಿರುತ್ತಾರೆಂದು ಹಾಗೂ ಅರ್ಜಿದಾರರು ಖರೀದಿಸಿದ ಫೋನ್ ಉತ್ಪಾದನ ದೋಷವನ್ನು ಹೊಂದಿದ್ದು, ಎದುರುದಾರರಿಂದ ಸೇವಾ ನ್ಯೂನ್ಯತೆಯಾಗಿದೆ ಎಂದು ಪರಿಗಣಿಸಿ ಪ್ರಕರಣವನ್ನು ಭಾಗಶಃ ಪುರಸ್ಕರಿಸಿದೆ.
ಈ ಪ್ರಕಾರ ಫೋನ್ ಮಾರಾಟಗಾರರಾದ ನ್ಯಾಷನಲ್ ಡಿಜಿಟಲ್, ನ್ಯಾಷನಲ್ ಎನ್ಕ್ಲೇವ್ ತೀರ್ಥಹಳ್ಳಿ ಇವರು ಅರ್ಜಿದಾರರಿಗೆ ಪೋನ್ ಖರೀದಿಯ ಮೊತ್ತ ರೂ. 40,000 ಗಳಲ್ಲಿ ಜಿ.ಎಸ್.ಟಿ. ಯನ್ನು ಕಡಿತಗೊಳಿಸಿ ರೂ. 33,867/-ಗಳನ್ನು ಶೇ.9% ವಾರ್ಷಿಕ ಬಡ್ಡಿಯೊಂದಿಗೆ ಲೀಗಲ್ ನೋಟೀಸ್ ನೀಡಿದ ದಿನಾಂಕದಿಂದ ಪಾವತಿಸಬೇಕು. ಹಾಗೂ ತಮ್ಮ ಸೇವಾ ನ್ಯೂನತೆಯಿಂದಾಗಿ ಉಂಟಾದ ಮಾನಸಿಕ ಹಿಂಸೆ ಮತ್ತು ಹಾನಿಗಳಿಗೆ ಸಂಬಂಧಿಸಿದಂತೆ ಪರಿಹಾರ ರೂ.15,000 ಗಳನ್ನು ಮತ್ತು ವ್ಯಾಜ್ಯದ ಖರ್ಚು-ವೆಚ್ಚಗಳ ಬಾಬ್ತಾಗಿ ರೂ. 10,000 ಗಳನ್ನು ಪಾವತಿಸಬೇಕೆಂದು ನಿರ್ದೇಶಿಸಿ ಆಯೋಗದ ಅಧ್ಯಕ್ಷರಾದ ಟಿ.ಶಿವಣ್ಣ, ಸದಸ್ಯರಾದ ಸವಿತಾ ಬಿ.ಪಟ್ಟಣಶೆಟ್ಟಿ, ಬಿ.ಡಿ.ಯೋಗಾನಂದ ಬಾಂಡ್ಯ ಇವರ ಪೀಠವು ಆದೇಶಿಸಿದೆ.

