ಆರೋಗ್ಯ ರಾಜಕೀಯ ಸುದ್ದಿ

ದಿನೇ ದಿನೇ ಹೆಚ್ಚುತ್ತಿದೆ ಡೆಂಗ್ಯು ಹಾವಳಿ!

Share It

ಬೆಂಗಳೂರು: ರಾಜ್ಯದಲ್ಲಿ ಅಪಾಯಕಾರಿ ಡೆಂಗ್ಯು ಜ್ವರ ತನ್ನ ವ್ಯಾಪ್ತಿಯನ್ನು ದಿನೇ ದಿನೇ ಹೆಚ್ಚಿಸಿಕೊಳ್ಳುತ್ತಿದೆ. ಕಳೆದ 24 ಗಂಟೆಯ ಅವಧಿಯಲ್ಲಿ ರಾಜ್ಯದಲ್ಲಿ ಒಟ್ಟು 159 ಜನರಿಗೆ ಡೆಂಗ್ಯು ಜ್ವರ ಕಾಣಿಸಿಕೊಂಡಿದೆ‌. ಈ ಪೈಕಿ ಬೆಂಗಳೂರಿನಲ್ಲೇ ಬರೋಬ್ಬರಿ 80 ಮಂದಿಗೆ ಡೆಂಗ್ಯು ಜ್ವರ ಬಂದಿದೆ.

ರಾಜ್ಯದಲ್ಲಿ ಈವರೆಗೆ ಒಟ್ಟು 7 ಜನರು ಡೆಂಗ್ಯು ಜ್ವರದಿಂದ ಪ್ರಾಣ ಕಳೆದುಕೊಂಡಿದ್ದಾರೆ‌. ಆದಾಗ್ಯೂ ರಾಜ್ಯದಲ್ಲಿ ಈವರೆಗೆ ಒಟ್ಟಾರೆ 301 ಮಂದಿ ಡೆಂಗ್ಯು ಜ್ವರದಿಂದ ಬಳಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಗಬ್ಬೆದ್ದು ನಾರುತ್ತಿರುವ ಕೆ‌.ಆರ್.ಮಾರ್ಕೆಟ್!: ಹೌದು, ಬೆಂಗಳೂರಿನ ಕೆ.ಆರ್.ಮಾರ್ಕೆಟ್ ಸ್ವಚ್ಛತೆಯಿಲ್ಲದೆ ಗಬ್ಬೆದ್ದು ನಾರುತ್ತಿದೆ‌. ಅದರಲ್ಲೂ ಕೆ.ಆರ್.ಮಾರ್ಕೆಟ್ ನ ಹೆಬ್ಬಾಗಿಲು ಕನಿಷ್ಠ ಸ್ವಚ್ಛತೆಯಿಲ್ಲದೆ ಗಬ್ಬೆದ್ದು ಕೊಳೆತು ನಾರುತ್ತಿದೆ. ಪರಿಣಾಮ ಪಕ್ಕದಲ್ಲೇ ಇರುವ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಬಡರೋಗಿಗಳಿಗೆ ಡೆಂಗ್ಯು ಜ್ವರ ಬರುವ ಭೀತಿ ಸೃಷ್ಟಿಯಾಗಿದೆ.

ಆದರೆ ಈ ಬಗ್ಗೆ ಸನಿಹದಲ್ಲೇ ಬಿಬಿಎಂಪಿ ಮುಖ್ಯ ಕಚೇರಿ ಮತ್ತು ಒಂದು ಕಿಲೋಮೀಟರ್ ದೂರದಲ್ಲಿರುವ ವಿಧಾನಸೌಧ ಇದ್ದರೂ ರಾಜ್ಯ ಸರ್ಕಾರವಾಗಲಿ, ಬಿಬಿಎಂಪಿಯಾಗಲಿ ಡೆಂಗ್ಯು ಜ್ವರದ ಬಗ್ಗೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಯಾವುದೇ ಪ್ರಯತ್ನ ನಡೆಸಿಲ್ಲ.


Share It

You cannot copy content of this page