ಅಂಚೆ ಇಲಾಖೆಯಿಂದ 44,228 ಹುದ್ದೆಗಳಿಗೆ ಅರ್ಜಿ ಆಹ್ವಾನ
ನವ ದೆಹಲಿ : ಸರ್ಕಾರಿ ಕೆಲಸವನ್ನು ಹುಡುಕುತ್ತಿರುವವರಿಗೆ ಅದರಲ್ಲೂ ಕೇಂದ್ರ ಸರ್ಕಾರದ ಹುದ್ದೆಗಳಲ್ಲಿ ಆಸಕ್ತಿ ಇರುವವರಿಗೆ ಭಾರತೀಯ ಅಂಚೆ ಇಲಾಖೆ ಗುಡ್ ನ್ಯೂಸ್ ನೀಡಿದೆ. ಒಟ್ಟಾರೆ ದೇಶದೆಲ್ಲೆಡೆ ಒಟ್ಟು 44,228 ಖಾಲಿ ಇರುವ ಹುದ್ದೆಯನ್ನು ತುಂಬಲು ಅಧಿಸೂಚಿ ಹೊರಡಿಸಿದೆ. ಖಾಲಿ ಹುದ್ದೆಗಳ ಪೈಕಿ ಗ್ರಾಮೀಣ ಡಾಕ ಸೇವಕ,ಬ್ರ‍್ಯಾಂಚ್ ಪೋಸ್ಟ್ ಮಾಸ್ಟರ್ ಮತ್ತು ಅಸಿಸ್ಟಂಟ್ ಬ್ರ‍್ಯಾಂಚ್ ಪೋಸ್ಟ್ ಮಾಸ್ಟರ್ ಹುದ್ದೆಗಳಾಗಿವೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಪಾಸಾದವರು ಅರ್ಜಿಯನ್ನು ಆಗಸ್ಟ್ 5 ರೊಳಗೆ ಸಲ್ಲಿಸಬೇಕು.
ವಿದ್ಯಾರ್ಹತೆ ಹಾಗೂ ವಯೋಮಿತಿ :
10ನೆಯ ತರಗತಿ ತೇರ್ಗಡೆ ಹೊದಿರಬೇಕು. ಮುಖ್ಯವಾಗಿ ಇಂಗ್ಲಿಷ್ ಮತ್ತು ಗಣಿತ ವಿಷಯಗಳನ್ನು ಓದಿರಬೇಕು. ಕನಿಷ್ಠ 18 ಹಾಗೂ ಗರಿಷ್ಠ 40 ವರ್ಷಗಳ ವಯೋಮಿತಿಯ ಒಳಗಿರಬೇಕು. ಒಬಿಸಿ ಗೆ 3 ವರ್ಷ , ಎಸ್ ಟಿ ಮತ್ತು ಎಸ್ ಇ ಗೆ 5 ವರ್ಷ, ಪಿಡಬ್ಲ್ಯುಡಿ ಗೆ 10 ವರ್ಷ ವಯಸ್ಸಿನ ಸಡಿಲಿಕೆಯನ್ನು ನೀಡಲಾಗಿದೆ.
ಕರ್ನಾಟಕದಲ್ಲೂ ಹುದ್ದೆ ಲಭ್ಯ
ಕರ್ನಾಟಕದಲ್ಲಿ ಒಟ್ಟು 1940 ಹುದ್ದೆಗಳಿವೆ. ಜೊತೆಗೆ ದೇಶದ ಆಂಧ್ರಪ್ರದೇಶ, ಅಸ್ಸಾಂ, ಬಿಹಾರ, ಛತ್ತೀಸ್‌ಗಢ, ದೆಹಲಿ, ಗುಜರಾತ್, ಹರಿಯಾಣ, ಹಿಮಾಚಲ ಪ್ರದೇಶ, ಜಮ್ಮು ಕಾಶ್ಮೀರ, ಜಾರ್ಖಂಡ್, ಕೇರಳ, ಮಧ್ಯಪ್ರದೇಶ, ಮಹಾರಾಷ್ಟ್ರ, ಈಶಾನ್ಯ, ಒಡಿಶಾ, ಪಂಜಾಬ್, ರಾಜಸ್ಥಾನ, ತಮಿಳುನಾಡು, ತೆಲಂಗಾಣ, ಉತ್ತರ ಪ್ರದೇಶ, ಉತ್ತರಾಖಂಡ ಮತ್ತು ಪಶ್ಚಿಮ ಬಂಗಾಳಗಳಲ್ಲಿ ಈ ನೇಮಕಾತಿಗೆ ಅವಕಾಶವಿದೆ.
ಅರ್ಜಿ ಶುಲ್ಕ :
ಒಬಿಸಿ ಮತ್ತು ಸಾಮಾನ್ಯ ವರ್ಗದವರಿಗೆ 100 ರೂಗಳು ಹಾಗೂ ಎಸ್ ಸಿ, ಎಸ್ ಟಿ ಅಂಗವಿಕಲರಿಗೆ ಮಹಿಳೆಯರಿಗೆ ಉಚಿತ .
ಆಯ್ಕೆಯ ವಿಧಾನ:
ಎಸ್‌ಎಸ್‌ಎಲ್‌ಸಿ ಅಂಕಗಳ ಮೇಲೆ ಆಯ್ಕೆ ಮಾಡಲಾಗುತ್ತದೆ. ಆಯ್ಕೆ ಯಾದವರಿಗೆ 10,000 ದಿಂದ 25,380 ರೂ ಸಂಬಳವನ್ನು ನಿಗದಿ ಪಡಿಸಲಾಗಿದೆ.
ಆರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.
https://indiapostgdsonline.cept.gov.in/Notifications/Model_Notification.pdf
ಹೆಚ್ಚಿನ ಮಾಹಿತಿಗೆ ವೈಬ್ ಸೈಟ್ ಗೆ ಭೇಟಿ ನೀಡಿ.
https://indiapostgdsonline.gov.in


