ರಾಜಕೀಯ ಸುದ್ದಿ

ಕಲಬುರಗಿ ಅಭಿವೃದ್ಧಿಯೆ ನಮ್ಮ ಗುರಿ:ಸಚಿವ ಪ್ರಿಯಾಂಕ್ ಖರ್ಗೆ

Share It

ಕಲಬುರಗಿ: ಕಲಬುರಗಿ ಜನ ಅಭಿವೃದ್ಧಿಗೆ ಮತ ಹಾಕಿದ್ದಾರೆ. ಮತ್ತೊಮ್ಮೆ ಕಲಬುರಗಿ ಅಭಿವೃದ್ಧಿ ಕಾಣಬೇಕು ಎಂಬ ದೃಷ್ಟಿಯಿಂದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿದ್ದಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಅವರು ಹೇಳಿದರು.

ಕಲಬುರಗಿಯಲ್ಲಿ ಮಾಧ್ಯಮದವರೊಂದಿಗೆ ‌ಮಾತನಾಡಿದ ಅವರು, ಕಲಬುರಗಿಯಲ್ಲಿ ಒಳ್ಳೆಯ ರೀತಿಯಲ್ಲಿ ಚುನಾವಣೆಯಾಗಿದೆ. ಜನರು ನಮಗೆ ಆರ್ಶಿವಾದ ಮಾಡಿದ್ದಾರೆ. ಕಲಬುರಗಿ ಜನರಿಗೆ ನಾನು ಅಭಿನಂದನೆ ಸಲ್ಲಸುವೆ ಎಂದರು.

ಉಮೇಶ ಜಾಧವದ ಅವರು ಚಿಂಚೋಳಿ ಎಮ್ ಪಿ ಯಾಗಿರುವುದು ನಿಜ ಆದ್ರೆ ಅದರ ಬಗ್ಗೆ ಇವಾಗ ಚರ್ಚೆ ಮಾಡುವುದಿಲ್ಲ. ಜನ ನಮಗೆ ಆರ್ಶಿವಾದ ಮಾಡಿದ್ದಾರೆ. ಮುಂದಿಮ ಐದು ವರ್ಷ ಅಭಿವೃದ್ಧಿ ಮಾಡುವುದೆ ನಮ್ಮ ಸಂಕಲ್ಪ.ಕಲಬುರಗಿ ಅಭಿವೃದ್ಧಿಗಾಗಿ ಕಲಬುರಗಿ ನೆಕ್ಸ್ ಕಾನಸೆಪ್ಟ್ ಹೊಂದಿದ್ದೆ. ಅದನ್ನು ಹಂತ ಹಂತವಾಗಿ ಅನುಷ್ ತರುತ್ತೆವೆ.

ನಿರೀಕ್ಷೆಗೆ ತಕ್ಕ ಫಲಿತಾಂಶ ಬಂದಿಲ್ಲ: ಇದೆ ವೇಳೆ ಮಾತನಾಡಿದ ಅವರು, ರಾಜ್ಯದಲ್ಲಿ‌ 12 ರಿಂದ 14ಸ್ಥಾನ ಗೆಲ್ಲುವ ನಿರೀಕ್ಷೆ ಇತ್ತು ಆದ್ರೆ ನಿರೀಕ್ಷೆಗೆ ತಕ್ಕ ಫಲಿತಾಂಶ ಬಂದಿಲ್ಲ. ಅಬ್ ಕಿ ಬಾರ್ 400 ಪಾರ ಬಗ್ಗೆ ಚರ್ಚೆ ಅವಶ್ಯಕತೆ ಇರಲಿಲ್ಲ. ಪ್ರಾರಂಭದಲ್ಲಿ ಮೋದಿ ಪ್ರಧಾನ ಸೇವಕರಾದ್ರು. ಅದಾದ ನಂತರ ಚೌಕಿದಾರ್, ಮೂರನೆ ಟಮ್೯ ನಲ್ಲಿ ದೇವರೆ ಆದರು. ಅವರಲ್ಲಿನ ಸರ್ವಾಧಿಕಾರದಿಂದಲೆ ಹೀಗಾಯಿತು, ಅವರಿಗೆ 400ಸ್ಥಾನ ಸಂವಿಧಾನ ಬದಲಿಸಲಿಕೆ ಬೇಕಿತ್ತು. ಜನ ಅದನ್ನ ತಿರಸ್ಕರಿಸಿದ್ದಾರೆ ಎಂದರು.


Share It

You cannot copy content of this page