ಧಾರವಾಡ: ಜಿಲ್ಲಾ ಕೇಂದ್ರ ಕಾರಾಗೃಹದ ಜೈಲು ಅಧಿಕಾರಿಗಳೇ ಮಾದಕ ವಸ್ತುಗಳ ಪೂರೈಕೆ ಮಾಡಿ ಇದೀಗ ಪೊಲೀಸರ ಅತಿಥಿಯಾಗಿದ್ದಾರೆ.
ಜೈಲಿನ ವಾರ್ಡನ್ ಆಗಿರುವ ರಾಜು ಸೋಲಬಣ್ಣವರ ಹಾಗೂ ಅಲ್ತಾಪ್ ಶೇಕಸನದಿ ಬಂಧಿತ ವಾರ್ಡನ್ಗಳಾಗಿದ್ದು, ಅವರ ಜೊತೆಗೆ ಆಟೋ ಚಾಲಕ ಮುನೀರ ಅಹ್ಮದ್ ಬೆಟಗೇರಿಯನ್ನು ಕೂಡಾ ಬಂಧಿಸಲಾಗಿದೆ. ಇವರು ಒಳಗಿರುವ ಕೈದಿಗಳಿಗೆ ಮಾದಕ ವಸ್ತುಗಳ ಮಾರಾಟ ಮಾಡುತ್ತಿದ್ದರು.
ಬಳಿಕ ಧಾರವಾಡದ ಉಪನಗರ ಪೊಲೀಸರು ಕಾರ್ಯಾಚರಣೆ ನಡೆಸಿ, ಬೆಳಗ್ಗೆ 3.30 ಗಂಟೆಗೆ ಆಟೋ ಮೂಲಕ ಮಾದಕ ವಸ್ತುಗಗಳ ಪೂರೈಕೆ ಮಾಡುವ ವೇಳೆಯಲ್ಲಿ 3 ಜನರನ್ನು ವಶಕ್ಕೆ ಪಡೆದಿದ್ದಾರೆ. ಅದರಲ್ಲಿ ಇಬ್ಬರು ಜೈಲಾಧಿಕಾರಿಗಳು ಹಾಗೂ ಓರ್ವ ಆಟೋ ಚಾಲಕನನ್ನು ವಶಕ್ಕೆ ಬಂಧಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಮಾಹಿತಿ ನೀಡಿದರು.

