ಬೆಂಗಳೂರು: ಕನ್ನಡ ಚಿತ್ರರಂಗ ದಿನದಿಂದ ದಿನಕೆಕ ಕಳೆಗುಂದುತ್ತಿದೆ. ಸ್ಯಾಂಡಲ್‌ವುಡ್‌ನ ಗತವೈಭವವನ್ನು ಮರಳಿ ತರೋಕೆ ಏನ್ ಮಾಡಬೇಕು? ಅದಕ್ಕೆ ಮುಂದಾಗಿದ್ದಾರೆ ಯುವ ನಟ ದ್ರುವ ಸರ್ಜಾ.
ಕನ್ನಡ ಚಿತ್ರರಂಗದ ಮುಂದೆ ತಮಿಳು, ತೆಲುಗು, ಮಲೆಯಾಳಿ ಸಿನಿಮಾ ರಂಗ ಶರವೇಗದಲ್ಲಿ ಓಡುತ್ತಿದೆ. ಅಲ್ಲೊಂದು ಇಲ್ಲೊಂದು ಕನ್ನಡ ಸಿನಿಮಾಗಳು ಹಿಟ್ ಆಗಿದ್ದು, ಬಿಟ್ಟರೆ, ಇಡೀ ವರ್ಷದಲ್ಲಿ ಸಿನಿಮಾರಂಗದ್ದು ಶೂನ್ಯ ಸಾಧನೆ. ಇದಕ್ಕೆಲ್ಲ ಕಾರಣವೇನು ಎಂದು ಹುಡುಕುತ್ತಾ ಹೊರಟರೆ ಸಿಗುವ ಉತ್ತರ, ಸ್ಟಾರ್ ನಟರೆನಿಸಿಕೊಂಡವರು, ಎರಡು ವರ್ಷಕ್ಕೆ, ಮೂರು ವರ್ಷಕ್ಕೊಂದು ಸಿನಿಮಾ ಮಾಡುವುದು.
ಮಲೆಯಾಳಂ, ತಮಿಳು, ತೆಲುಗು ಚಿತ್ರರಂಗದಲ್ಲಿ ಸ್ಟಾರ್ ನಟರು, ವರ್ಷಕ್ಕೆರಡು ಸಿನಿಮಾ ಮಾಡಿಯೇ ಮಾಡುತ್ತಾರೆ. ಹೀಗಾಗಿಯೇ, ಅಲ್ಲಿ ಬಿಡುಗಡೆಯಾದ ಎಲ್ಲ ಸಿನಿಮಾಗಳು ಹಿಟ್ ಆಗುತ್ತವೆ. ಕನ್ನಡದಲ್ಲಿ ಸ್ಟಾರ್ ಸಿನಿಮಾಗಳು ಬಂದಾಗಷ್ಟೇ ಜನ ಥೆಯಟರ್‌ಗೆ ಬರ್ತಾರೆ, ಉಳಿದಂತೆ ತಮಿಳು, ತೆಲುಗು ಸಿನಿಮಾಗಳತ್ತ ಮುಖ ಮಾಡ್ತಾರೆ.
ಇದಕ್ಕೆ ಪರಿಹಾರ ಕಂಡುಹಿಡಿಯಲು ಮೊನ್ನೆ ತಾನೇ ಕನ್ನಡ ಸಿನಿಮಾರಂಗ ದೊಡ್ಡ ದೊಡ್ಡ ನಿರ್ಮಾಪಕರೆಲ್ಲ ಆತಂಕ ತೋಡಿಕೊಂಡಿದ್ರು, ಸಭೆ ನಡೆಸಿ, ಮುಂದೇನ್ ಮಾಡಬೇಕು ಎಂಬ ಬಗ್ಗೆ ಚರ್ಚೆ ನಡೆಸಿದ್ರು. ಈ ವೇಳೆ ಹೆಚ್ಚು ಹೆಚ್ಚು ಸಿನಿಮಾ ಮಾಡುವಂತೆ ಸ್ಟಾರ್ ನಟರನ್ನು ಕೇಳಿಕೊಳ್ಳುವುದಾಗಿ ತೀರ್ಮಾನಿಸಿದ್ದರು.
ಈ ವಿಚಾರಕ್ಕೆ ಸಂಬ0ಧಿಸಿದ0ತೆ ನಟ ಧ್ರುವ ಸರ್ಜಾ ಮಾತನಾಡಿ, ಮಾರ್ಟಿನ್ ಸಿನಿಮಾಗೆ ಎರಡೂವರೆ ವರ್ಷ ನಾನು ಕೆಲಸ ಮಾಡಿದ್ದೇನೆ. ನೂರಕ್ಕೆ ನೂರರಷ್ಟು ಶ್ರದ್ಧೆಯಿಂದ ಕೆಲಸ ಮಾಡಿದ್ದೇವೆ. ನನ್ನ ಎಲ್ಲಾ ಸಿನಿಮಾಗಳನ್ನು ಕೈ ಹಿಡಿದಿದ್ದೀರ. ನಾವು ಬಂದ ದಾರಿಯನ್ನು ಎಂದಿಗೂ ಮರೆಯಬಾರದು. ಚಿತ್ರಮಂದಿರಗಳಿಗೆ ಜನ ಬರುತ್ತಿಲ್ಲವೆಂಬ ದೂರಿದೆ. ಅದಕ್ಕೆ ನಾನು ಇನ್ಮುಂದೆ ವರ್ಷಕ್ಕೆ ಎರಡು ಅಥವಾ ಮೂರು ಸಿನಿಮಾ ಮಾಡುತ್ತೇನೆಂದು ಅಭಿಮಾನಿಗಳಿಗೆ ಭರವಸೆ ನೀಡಿದರು.
ಧ್ರುವ ಸರ್ಜಾ ಅಭಿನಯದ ಮಾರ್ಟಿನ್ ಸಿನಿಮಾವನ್ನು ಎರಡೂವರೆ ವರ್ಷದಿಂದ ಬಿಡುಗಡೆ ಮಾಡಿಲ್ಲ. ಇದೇ ರೀತಿಯಾದರೆ, ಕನ್ನಡ ಸಿನಿಮಾ ಬೆಳವಣಿಗೆ ಹೇಗೆ ಸಾಧ್ಯ ಎಂಬ ಮಾತುಗಳು ಕೇಳಿಬಂದಿದ್ದವು. ಸ್ಟಾರ್ ನಟರು, ಮೂರು ವರ್ಷಕ್ಕೊಂದು ಸಿನಿಮಾ ಮಾಡಿದರೆ, ಚಿತ್ರರಂಗದ ಏಳಿಗೆ ಸಾಧ್ಯವಿಲ್ಲ ಎಂಬುದು ಆರೋಪ. ಈ ಹಿನ್ನೆಲೆಯಲ್ಲಿ ಧ್ರುವ ಸರ್ಜಾ ಅವರ ನಿರ್ಧಾರ ಬದಲಾಗಿದೆ.
ಇದೀಗ ಮಾರ್ಟಿನ್ ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಅ.11 ಕ್ಕೆ ಮಾರ್ಟಿನ್ ಸಿನಿಮಾ ಬಿಡುಗಡೆ ಮಾಡಲು ಚಿತ್ರತಂಡ ತೀರ್ಮಾನಿಸಿದೆ. ಕಂಪ್ಯೂಟರ್ ಗ್ರಾಫಿಕ್ಸ್ ಕೆಲಸ ಭಾಯಿಯಿದ್ದ ಕಾರಣಕ್ಕೆ ಸಿನಿಮಾ ಬಿಡುಗಡೆಗೆ ತಡವಾಗಿತ್ತು. ಇದೀಗ ಬಹುತೇಕ ಎಲ್ಲ ಕೆಲಸಗಳು ಪೂರ್ಣಗೊಂಡಿದ್ದು, ಅಕ್ಟೋಬರ್ 11 ಕ್ಕೆ ಸಿನಿಮಾ ಬಿಡುಗಡೆಯಾಗುವುದು ಫಿಕ್ಸ್ ಎಂದು ನಿರ್ಮಾಪಕ ಉದಯ್ ಮೆಹ್ತಾ ಘೋಷಣೆ ಮಾಡಿದ್ದಾರೆ.