ಬೆಂಗಳೂರು: ಜಯನಗರ ಶಾಸಕ ಸಿ.ಕೆ.ರಾಮಮೂರ್ತಿ ಅವರ ಹೆಸರಿನಲ್ಲಿ Instagram ಅಕೌಂಟ್ನಿAದ ಯುವತಿಗೆ ಅಶ್ಲೀಲ ಮೆಸೇಜ್ ಮಾಡುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ.
ಶಾಸಕ ರಾಮಮೂರ್ತಿ ಹೆಸರಿನಲ್ಲಿರುವ ಅಕೌಂಟ್ನಿAದ ಯುವತಿಗೆ ನೈಸ್ ರೀಲ್ಸ್, ಗುಡ್ ಮಾರ್ನಿಂಗ್ ಎಂಬಿತ್ಯಾದಿ ಮೆಸೇಜ್ ಬರುತ್ತಿತ್ತು. ಇದು ಸೋಷಿಯಲ್ ಮೀಡಿಯಾದಲ್ಲಿವೈರಲ್ ಆಗುತ್ತಿದ್ದಂತೆ ಶಾಸಕ ರಾಮಮೂರ್ತಿ ಇದನ್ನು ನಿರಾಕರಿಸಿದ್ದಾರೆ.
ನನ್ನ ವಿರುದ್ಧ ಷಡ್ಯಂತ್ರ ನಡೆದಿದೆ. ನಾನು ಈವರೆಗೆ ಯಾವುದೇ ಇಂತಹ ಪ್ರಕರಣದಲ್ಲಿ ಸಿಲುಕಿಲ್ಲ. ನನ್ನನ್ನು ಕೆಟ್ಟದಾಗಿ ಬಿಂಬಿಸಲು ನಡೆಯುತ್ತಿರುವ ಸಂಚು ಇದು. ಇದರ ವಿರುದ್ಧ ನಾನು ಕಾನೂನು ಹೋರಾಟ ಮಾಡುತ್ತೇನೆ ಎಂದು ತಿಳಿಸಿದ್ದಾರೆ.

