2024 ರಲ್ಲಿ ಭಾರತದ ನೂತನ ಪ್ರಧಾನಿಯಾಗಲು ಇಬ್ಬರಿಗೆ ಆಫರ್!
ಬೆಳಗ್ಗೆ 8 ಗಂಟೆಯಿಂದ ಆರಂಭವಾದ ಲೋಕಸಭಾ ಚುನಾವಣೆಯ ಮತ ಎಣಿಕೆ ಕಾರ್ಯ ಇಂದು ಜೂನ್ 4 ರಂದು ಸಂಜೆಯವರೆಗೂ ನಡೆದೇ ಇತ್ತು. ಈಗಾಗಲೇ ಬಹುತೇಕ ಲೋಕಸಭಾ ಕ್ಷೇತ್ರಗಳ ಮತ ಎಣಿಕೆ ಮುಕ್ತಾಯವಾಗಿ ಫಲಿತಾಂಶ ಘೋಷಣೆಯಾಗಿದ್ದರೂ ಇನ್ನೂ ಅನೇಕ ಕ್ಷೇತ್ರಗಳ ಫಲಿತಾಂಶ ಇನ್ನೂ ಪ್ರಕಟವಾಗಿಲ್ಲ.
ಇದರ ಬೆನ್ನಲ್ಲೇ ದೇಶದ ಅಧಿಕಾರದ ಚುಕ್ಕಾಣಿ ಯಾರ ಪಾಲಾಗಲಿದೆ? ಎಂಬ ಪಕ್ಕಾ ನ್ಯೂಸ್ ಇನ್ನೂ ಖಚಿತವಾಗಿಲ್ಲ. ಇದಕ್ಕೆ ಕಾರಣ ಆಡಳಿತ ಪಕ್ಷ ಬಿಜೆಪಿ ಈ ಬಾರಿ ಕೊಂಚ ಆಡಳಿತ ವಿರೋಧಿ ಅಲೆಯ ಪರಿಣಾಮ 243 ಸ್ಥಾನಗಳಿಗೆ ಸೀಮಿತವಾಗುವ ಆತಂಕದಲ್ಲಿದೆ. ಬಹುಮತಕ್ಕೆ ಬೇಕಿರುವ 273 ಮ್ಯಾಜಿಕ್ ನಂಬರ್ ತಲುಪಲು ಇನ್ನೂ ಎನ್.ಡಿ.ಎ ಮತ್ತು ಇಂಡಿಯಾ ಮೈತ್ರಿಕೂಟ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ.
ಇದಕ್ಕೆ ಕಾರಣ ಇಂಡಿಯಾ ಮೈತ್ರಿಕೂಟ ಸಹ 228 ಸ್ಥಾನ ಗೆದ್ದು ಕೆಲವು ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಎನ್.ಡಿ.ಎ 290 ಸ್ಥಾನ ಗಳಿಸಬಹುದಾದರೂ ಬಿಜೆಪಿ ಈ ಬಾರಿ 243 ಸ್ಥಾನಕ್ಕೆ ಸೀಮಿತವಾಗುವ ಸ್ಥಿತಿಯಲ್ಲಿದೆ. ಹೀಗಾಗಿ ಈ ಬಾರಿ ಇಂಡಿಯಾ ಮೈತ್ರಿಕೂಟ ತ್ಯಜಿಸಿ ಎನ್.ಡಿ.ಎ ಮೈತ್ರಿಕೂಟ ಸೇರಿದ್ದ ತೆಲುಗು ದೇಶಂ ಪಕ್ಷ ಮತ್ತು ಬಿಹಾರದ ಸಂಯುಕ್ತ ಜನತಾದಳ ಪಕ್ಷ ಕಿಂಗ್ ಮೇಕರ್ ಗಳಾಗಿವೆ.
ಆಂಧ್ರಪ್ರದೇಶ ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿ ಮತ್ತೆ ಮುಖ್ಯಮಂತ್ರಿಯಾಗುವ ಅವಕಾಶ ಪಡೆದಿರುವ ಚಂದ್ರಬಾಬು ನಾಯ್ಡು ಮತ್ತು ಬಿಹಾರ ರಾಜ್ಯದಲ್ಲಿ 12 ಸಂಸದರನ್ನು ಗೆಲ್ಲಿಸಿಕೊಂಡು ಬರುವಲ್ಲಿ ಯಶಸ್ವಿಯಾಗಿರುವ ಬಿಹಾರದ ಹಾಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಮತ್ತೆ ಇಂಡಿಯಾ ಮೈತ್ರಿಕೂಟ ಸೇರಿದರೆ ಪ್ರಧಾನಿ ಹುದ್ದೆ ಕೊಡುವುದಾಗಿ ಆಫರ್ ನೀಡಲಾಗಿದೆ.
ಈ ಬಗ್ಗೆ ರಾಹುಲ್ ಗಾಂಧಿ ಬಹಳ ಮುತುವರ್ಜಿಯಿಂದ ಮೇಲ್ಕಂಡ ಇಬ್ಬರು ಕಿಂಗ್ ಮೇಕರ್ ಆಗಬಹುದಾದ ನಾಯಕರಿಗೆ ಪ್ರಧಾನಿ ಹುದ್ದೆ ಆಫರ್ ನೀಡಿ ರಹಸ್ಯ ಸಂಧಾನಕಾರರನ್ನು ಮಾತುಕತೆಗೆ ಕಳುಹಿಸಿದ್ದಾರೆ.
ಇನ್ನೊಂದೆಡೆ ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರು ಎನ್.ಡಿ.ಎ ಪ್ರಧಾನಿಯಾಗಲು ನಿಮಗೆ ಮಹತ್ವಾಕಾಂಕ್ಷೆ ಇದ್ದರೆ ನೀವೇ ಎನ್.ಡಿ.ಎ ಪ್ರಧಾನಿಯಾಗಿ ಎಂದು ಚಂದ್ರಬಾಬು ನಾಯ್ಡು ಮತ್ತು ನಿತೀಶ್ ಕುಮಾರ್ ಅವರಿಗೆ ನೇರವಾಗಿ ಫೋನ್ ಮೂಲಕ ಹೇಳಿದ್ದಾರೆ ಎನ್ನಲಾಗಿದೆ. ಹೀಗಾಗಿ ನಾಳೆ ಅಥವಾ ನಾಡಿದ್ದು ಮಾತ್ರವೇ ದೇಶದ ನೂತನ ಪ್ರಧಾನಿ ಯಾರೆಂಬುದು ಅಧಿಕೃತವಾಗಿ ಬಹಿರಂಗಗೊಳ್ಳಲಿದೆ.

