ರಾಜಕೀಯ ಸುದ್ದಿ

21 ಗಂಟೆ ಮೊದಲೇ ಅಜಿತ್ ಪವಾರ್ ಸಾವು ದಾಖಲಿಸಿತ್ತಾ ವಿಕಿಪೀಡಿಯಾ?

Share It

ಬೆಂಗಳೂರು:ಮಹಾರಾಷ್ಟ್ರದ ಡಿಸಿಎಂ ಅಜಿತ್ ಪವಾರ್ ಅವರು ವಿಮಾನ ಅಪಘಾತದಲ್ಲಿ ಬುಧವಾರ ಬೆಳಗ್ಗೆ 9 ಗಂಟೆ ಸುಮಾರಿಗೆ ಸಾವನ್ನಪ್ಪಿದ್ದು, ಅದಕ್ಕೆ ಮೊದಲೇ ವಿಕಿಪೀಡಿಯಾ ಅವರ ಸಾವನ್ನು ಪ್ರಕಟಿಸಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟರ್‌ವೊಂದು ಹರಿದಾಡುತ್ತಿದ್ದು, ಘಟನೆ ನಡೆಯುವ ೨೧ ಗಂಟೆ ಮೊದಲೇ ವಿಕಿಪೀಡಿಯಾ ಇಂತಹ ಪೋಸ್ಟ್ ಪ್ರಕಟಿಸಿದೆ ಎಂದು ಹೇಳಲಾಗುತ್ತಿದೆ. ಇದು ವಿಕಿಪೀಡಿಯಾ ಮಾಡಿದ ಯಡವಟ್ಟಾ? ಅಥವಾ ಯಾರಾದರೂ ಕಿಡಿಗೇಡಿಗಳು ಮಾಡಿದ ಯಡವಟ್ಟಾ ಎಂಬ ಗೊಂದಲವಿದೆ.

ವೈರಲ್ ಆಗಿರುವ ಪೋಸ್ಟ್ ನಲ್ಲಿ ವಿಕಿಪೀಡಿಯಾ ಅಜಿತ್ ಅವರ ಸಾವನ್ನು ಜ.27 ಎಂದು ಪ್ರಕಟಿಸಿದೆ. ಹೀಗಾಗಿ, ಇದೊಂದು ಫೇಕ್ ಪೋಸ್ಟ್ ಇರಬಹುದು ಎಂದು ಹೇಳಲಾಗುತ್ತಿದೆ. ಅಥವಾ ವಿಕಿಪೀಡಿಯಾ ಎಡಿಟ್‌ಗೆ ಇರುವ ಅವಕಾಶದ ದುರುಪಯೋಗವಾಗಿರಬಹುದು ಎನ್ನಲಾಗುತ್ತಿದೆ.

ಒಟ್ಟಾರೆ, ಇಂತಹದ್ದೊAದು ಪೋಸ್ಟರ್ ಅಂತು ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆ ಹುಟ್ಟುಹಾಕಿದ್ದು, ಅನುಮಾನಗಳನ್ನು ಹುಟ್ಟುಹಾಕಿದೆ. ಈ ನಡುವೆ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರು ಮಾಡಿರುವ ಆರೋಪ ಅಜಿತ್ ಪವಾರ್ ಅವರ ಸಾವಿನ ಕುರಿತು ಅನುಮಾನಗಳನ್ನು ಮೂಡಿಸುವಂತೆ ಮಾಡಿದೆ.


Share It

You cannot copy content of this page