ಬೆಂಗಳೂರು: ಕಡಿಮೆ ಬೆಲೆಗೆ ತಿಂಡಿ-ಊಟ ಪೂರೈಸುವ ಕನಸಿನೊಂದಿಗೆ ರಾಜ್ಯಸರ್ಕಾರ ಆರಂಭಿಸಿರುವ ಇಂದಿರಾ ಕ್ಯಾಂಟೀನ್ಗೆ ಇದೀಗ ಡಿಜಿಟಲ್ ಟಚ್ ನೀಡಲು ಪಾಲಿಕೆ ಸಜ್ಜಾಗಿದೆ. ಇಂದಿರಾ ಕ್ಯಾಂಟೀನ್ಗಳಲ್ಲಿ ಹೋಟೆಲ್, ರೆಸ್ಟೋರೆಂಟ್ಗಳ ರೀತಿ ಡಿಜಿಟಲ್ನಲ್ಲಿ ಆರ್ಡರ್ ಪಡೆಯೋ ವ್ಯವಸ್ಥೆ ಜಾರಿಗೆ ತರಲು ಬಿಬಿಎಂಪಿ (BBMP) ಪ್ಲಾನ್ ಮಾಡುತ್ತಿದೆ. ಆಹಾರದ ಗುಣಮಟ್ಟ, ಗ್ರಾಹಕರ ಬೇಡಿಕೆ, ಕುಂದು ಕೊರತೆಗಳನ್ನ ಡಿಜಿಟಲ್ ವ್ಯವಸ್ಥೆಯ ಮೂಲಕ ಕಲೆ ಹಾಕೋಕೆ ಚಿಂತನೆ ನಡೆಸಿದೆ.
ಬೆಂಗಳೂರಿನ 169 ಇಂದಿರಾ ಕ್ಯಾಂಟೀನ್ಗಳಲ್ಲಿ ಡಿಜಿಟಲ್ ವ್ಯವಸ್ಥೆ ಅಳವಡಿಕೆಗೆ ಸಜ್ಜಾಗಿರೋ ಪಾಲಿಕೆ, ಇದೀಗ ಆರ್.ಆರ್.ನಗರ ವ್ಯಾಪ್ತಿಯಲ್ಲಿ ಟ್ರಯಲ್ ನಡೆಸಿ ಸಾಧಕ-ಬಾಧಕಗಳ ಬಗ್ಗೆ ಮಾಹಿತಿ ಕಲೆ ಹಾಕುತ್ತಿದೆ. ಬೆಂಗಳೂರಿನ ಇಂದಿರಾ ಕ್ಯಾಂಟೀನ್ ಗಳಲ್ಲಿ ಡಿಜಿಟಲ್ ವ್ಯವಸ್ಥೆ ಅಳವಡಿಕೆಗೆ ಶೀಘ್ರದಲ್ಲೇ ಟೆಂಡರ್ ಕರೆಯೋಕೆ ಸಜ್ಜಾಗಿದೆ. ಸದ್ಯ ಇರುವ ಇಂದಿರಾ ಕ್ಯಾಂಟೀನ್ಗಳಲ್ಲಿ ಆಹಾರದ ಗುಣಮಟ್ಟ, ಗುತ್ತಿಗೆದಾರರ ಸಮಸ್ಯೆಗಳು, ಶುಚಿತ್ವ, ಬೇಡಿಕೆ ಕುರಿತು ದೂರುಗಳು ಬಂದ ಬೆನ್ನಲ್ಲೇ ಡಿಜಿಟಲ್ ತಂತ್ರಜ್ಞಾನದ ಮೊರೆ ಹೋಗಲು ಬಿಬಿಎಂಪಿ ಪ್ಲಾನ್ ಮಾಡಿದೆ.
ಡಿಜಿಟಲ್ ಟಚ್ ಪ್ರಯೋಜನಗಳೇನು?
1.ಇಂದಿರಾ ಕ್ಯಾಂಟೀನ್ಗಳ ಕಾರ್ಯನಿರ್ವಹಣೆ ಮಾಹಿತಿ ಸಂಗ್ರಹ
2.ಗ್ರಾಹಕರು ಆರ್ಡರ್ ಮಾಡಿದ್ರೆ ಪ್ರಧಾನ ಕಚೇರಿಗೂ ಆರ್ಡರ್ ಮಾಹಿತಿ ರವಾನೆ
3.ಡಿಜಿಟಲ್ ಟೆಕ್ನಾಲಜಿ ಮೂಲಕ ಆರ್ಡರ್ ಗೆ ಅವಕಾಶ
4.ಆಹಾರದ ಬೇಡಿಕೆ, ಗುಣಮಟ್ಟ, ಗ್ರಾಹಕರ ಅನಿಸಿಕೆ ಸಂಗ್ರಹಕ್ಕೆ ಸಹಾಯ
5.ಕುಂದು-ಕೊರತೆಗಳ ಬಗ್ಗೆ ಮಾಹಿತಿ ಕಲೆಗೆ ಸಹಾಯ
ಒಟ್ಟಿನಲ್ಲಿ ಬೆಂಗಳೂರಿನ ಇಂದಿರಾ ಕ್ಯಾಂಟೀನ್ಗಳ ಬಗ್ಗೆ ಅಲ್ಲಲ್ಲಿ ಅಪಸ್ವರ ಕೇಳಿಬರ್ತಿದ್ದು, ಸದ್ಯ ಈ ಸಮಸ್ಯೆಗಳನ್ನ ಬಗೆಹರಿಸೋಕೆ ಪಾಲಿಕೆ ಡಿಜಿಟಲ್ ತಂತ್ರಜ್ಞಾನ ಅಳವಡಿಕೆಗೆ ಸಜ್ಜಾಗ್ತಿದೆ. ಸದ್ಯ ಇರೋ ಕ್ಯಾಂಟೀನ್ ಗಳ ನಿರ್ವಹಣೆ ವಿಚಾರದಲ್ಲೇ ಹಲವು ಆರೋಪ ಎದುರಿಸ್ತಿರೋ ಪಾಲಿಕೆ, ಡಿಜಿಟಲ್ ತಂತ್ರಜ್ಞಾನದ ಅಳವಡಿಕೆಯಿಂದ ಇಂದಿರಾ ಕ್ಯಾಂಟೀನ್ ಗಳ ಗುಣಮಟ್ಟವನ್ನ ಎಷ್ಟರಮಟ್ಟಿಗೆ ಸುಧಾರಿಸುತ್ತೆ? ಅನ್ನೋದನ್ನ ಕಾದುನೋಡಬೇಕಿದೆ.

