ಸುದ್ದಿ

ಬಿಜೆಪಿ-ಜೆಡಿಎಸ್ ನಡುವೆ ಆಗಲೇ ಶುರುವಾಯ್ತು ಜಿಬಿಎ ಮೈತ್ರಿ ಚರ್ಚೆ

Share It

ಬೆಂಗಳೂರು: ಜಿಬಿಎ ಮತ್ತು ಜೆಡಿಎಸ್ ನಡುವೆ ಈಗಾಗಲೇ ಜಿಬಿಎ ಚುನಾವಣೆ ಮೈತ್ರಿ ಸಂಬAಧ ಚರ್ಚೆ ಆರಂಭವಾಗಿದೆ.

ಜೂನ್ ೩೦ರೊಳಗೆ ಚುನಾವಣೆ ನಡೆಸುವಂತೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದ ಬೆನ್ನಲ್ಲೇ ಮೈತ್ರಿ ಚರ್ಚೆ ಆರಂಭವಾಗಿದೆ. ಪ್ರತಿಪಕ್ಷ ನಾಯಕ ಆರ್.ಅಶೋಕ್ ಮಾತನಾಡಿ, ಮೈತ್ರಿ ಕುರಿತು ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎನ್ನುವ ಮೂಲಕ ಚರ್ಚೆ ಹುಟ್ಟುಹಾಕಿದ್ದಾರೆ.

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಲೋಕಸಭೆ ಮತ್ತು ವಿಧಾನ ಸಭೆ ಚುನಾವಣಗಳಿಗಷ್ಟೇ ಮೈತ್ರಿ ಮಾಡಿಕೊಂಡಿದ್ದೇವೆ. ಸ್ಥಳೀಯ ಸಂಸ್ಥೆ ಚುನಾವಣೆಗೆ ಮೈತ್ರಿಯಿಲ್ಲ ಎಂದು ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಜಿಬಿಎ ಚುನಾವಣೆ ಮೈತ್ರಿ ಬೇಕೋ ಬೇಡವೋ ಎಂಬ ಚರ್ಚೆ ಇದೀಗ ಆರಂಭವಾಗಿದೆ ಎನ್ನಬಹುದು.


Share It

You cannot copy content of this page