ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ ನಟ ದರ್ಶನ್ ಮತ್ತು ಅವರ ಗ್ಯಾಂಗ್ ನ ಸದಸ್ಯರಿಗೆ ಪೊಲೀಸರು ಡಿಎನ್ಎ ಪರೀಕ್ಷೆ ಮಾಡಿಸಿದ್ದಾರೆ. ಆ ಮೂಲಕ ಬಯೋಲಾಜಿಕಲ್ ಸಾಕ್ಷ್ಯಗಳ ಮೂಲಕ ದರ್ಶನ್ ಗ್ಯಾಂಗ್ ಗೆ ಮತ್ತಷ್ಟು ಕಠಿಣ ಬಲೆ ಹೆಣೆದಿದ್ದಾರೆ.
ದರ್ಶನ್ ತಮ್ಮ ಆಪ್ತ ಪ್ರಭಾವಿಗಳ ಮೂಲಕ ತಮ್ಮನ್ನು ಪ್ರಕರಣದಿಂದ ಹೊರಗಿಡುವಂತೆ ಮಾಡುವ ಪ್ರಯತ್ನ ನಡೆಸುತ್ತಿದ್ದರೆ, ಪೊಲೀಸರು ಅಂತಹ ಪ್ರಯತ್ನಗಳಿಗೆ ಕೌಂಟರ್ ಎನ್ನುವಂತೆ ಒಂದೆಜ್ಜೆ ಮುಂದಿಟ್ಟು ಸಾಕ್ಷಿ ಸಂಗ್ರಹ ಮಾಡುತ್ತಿದ್ದಾರೆ. ಯಾವುದೇ ಕಾರಣಕ್ಕೂ ಸಾಕ್ಷಿಗಳಿಂದ ತಪ್ಪಿಸಿಕೊಳ್ಳುವ ಸ್ಥಿತಿ ಪ್ರಕರಣದಲ್ಲಿ ಬರಬಾರದು ಎಂಬ ರೀತಿಯಲ್ಲಿ ಪೊಲೀಸರು ಕಾರ್ಯನಿರ್ವಹಿಸುತ್ತಿದ್ದಾರೆ.
ರೇಣುಕಾ ಸ್ವಾಮಿ ಮೇಲೆ ನಡೆದಿರುವ ಹಲ್ಲೆಗೆ ಸಂಬಂದಿಸಿ ಆರೋಪಿಗಳ ರಕ್ತ, ಉಗುರು, ಬೆವರಿನ ಸ್ಯಾಂಪಲ್ ಸಂಗ್ರಹಿಸಲಾಗಿದೆ. ಈ ಸಾಕ್ಷ್ಯಗಳ ಜತೆಗೆ ಎಲ್ಲ ಆರೋಪಿಗಳ ರಕ್ತ, ಉರುಗು ಕೂದಲು ಹೋಲಿಕೆಯಾಗುತ್ತದೆ ಎಂಬುದನ್ನು ಸಾಭೀತು ಮಾಡಲು ಡಿಎನ್ಎ ಅಗತ್ಯ. ಹೀಗಾಗಿ, ಆ ಪರೀಕ್ಷೆಯ ನ್ನು ನಡೆಸುವ ಮೂಲಕ ಕಾಣಿಕೆಯನ್ನು ಮತ್ತಷ್ಟು ಬಿಗಿಯಾಗಿಸಿದ್ದಾರೆ.
ರಂಗೋಲಿ- ಚಾಪೆ ಆಟ: ಆರೋಪಿಗಳನ್ನು, ಅದರಲ್ಲೂ ದರ್ಶನ್ ರಕ್ಷಣೆಗೆ ಕೆಲ ರಾಜಕಾರಣಿಗಳು ಪ್ರಯತ್ನ ಮಾಡುತ್ತಿದ್ದಾರೆ ಎಂಬ ಆರೋಪವಿದೆ. ಆರೋಪಿಗಳು ಮತ್ತು ಆಪ್ತರು ಚಾಪೆ ಕೆಳಗೆ ನುಸುಳುವ ಪ್ರಯತ್ನ ನಡೆಸಿದರೆ, ಪೊಲೀಸರು ರಂಗೋಲಿ ಕದಳಗೆ ನುಸುಳುವ ಪ್ರಯತ್ನ ನಡೆಸಿದ್ದಾರೆ. ಸಾಕ್ಷ್ಯ ನಾಶಕ್ಕೆ ಆರೋಪಿ ಕೇಯವರು ಪ್ರಯತ್ನ ಮಾಡುತ್ತಿದ್ದರೆ, ಪೊಲೀಸರು ಡಿಜಿಟಲ್, ಸಾಕ್ಷ್ಯ, ಜೈವಿಕ ಸಾಕ್ಷ್ಯ ಮತ್ತು ತಾಂತ್ರಿಕ ಸಾಕ್ಷ್ಯಗಳನ್ನು ಹೆಚ್ಚಾಗಿ ಸಂಗ್ರಹಿಸಿ ಆರೋಪಿಗಳನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿದ್ದಾರೆ.
ಒಂಬತ್ತು ಆರೋಪಿಗಳಿಗೆ ಡಿಎನ್ಎ ಪರೀಕ್ಷೆ: ಪ್ರಕರಣದಲ್ಲಿ 17 ಆರೋಪಿಗಳಿದ್ದು, ಕೊಲೆ ನಡೆದ ಸ್ಥಳದಲ್ಲಿದ್ದವರು ಒಂಬತ್ತು ಜನ ಎನ್ನಲಾಗಿದೆ. ಶರಣಾದ ನಾಲ್ವರು ಹಾಗೂ ಕಿಡ್ನಾಪ್ ಮಾಡಿದವರ ಪೈಕಿ ಮೂವರು, ಕೊಲೆ ನಡೆದ ಜಾಗದಲ್ಲಿ ಇರಲಿಲ್ಲ. ಹೀಗಾಗಿ, ಕೊಲೆ ನಡೆದ ಸ್ಥಳದಲ್ಲಿದ್ದ ಎಲ್ಲ ಆರೋಪಿಗಳ ಡಿಎನ್ಎ ಪರೀಕ್ಷೆ ನಡೆಸಲಾಗಿದೆ. ಕೊಲೆಯಾದ ಜಾಗದಲ್ಲಿ ಅಇಕ್ಕಿರುವ ಕೂದಲು, ರಕ್ತ ಮತ್ತು ಬೆವರಿನ ಸ್ಯಾಂಪಲ್ ಯಾರದ್ದು ಎಂದು ಕಂಡುಹಿಡಿಯಲು ಈ ಪರೀಕ್ಷೆ ಬಹಳ ಮುಖ್ಯವಾದ ಸಾಕ್ಷ್ಯವಾಗಲಿದೆ.

