ವಿರಾಟ್ ಕೊಹ್ಲಿ ಟಿ-20 ಗೆ ನಿವೃತ್ತಿ ಹೇಳಲು ಅಸಲಿ ಕಾರಣವೇನು ಗೊತ್ತಾ?
ಕಿಂಗ್ ಕೊಹ್ಲಿ ಕ್ರಿಕೆಟ್ ಜಗತ್ತು ಕಂಡ ಶ್ರೇಷ್ಠ ಆಟಗಾರ, ವಿಶ್ವ ಕ್ರಿಕೆಟ್ ನ ಸ್ಟಾರ್ ಬ್ಯಾಟರ್. ತನ್ನ ಆಟದ ಮೂಲಕವೇ ಕ್ರಿಕೆಟನ್ನೇ ಮತ್ತೊಂದು ಹಂತಕ್ಕೆ ಕೊಂಡೋಯ್ದ ಮಹಾನ್ ವ್ಯಕ್ತಿ. ಮೈದಾನದಲ್ಲಿ ಕೊಹ್ಲಿ ಯನ್ನು ಕೆಣಕಿ ಉಳಿದವರಿಲ್ಲ, ಕೆಣಕಿದವರಿಗೆ ಬ್ಯಾಟ್ ಮೂಲಕ ಮೈದಾನದಲ್ಲೇ ತಕ್ಕ ಉತ್ತರ ನೀಡುವ ವ್ಯಕ್ತಿ ಈತ.
ಈ ವರ್ಷದ ವಿಶ್ವ ಕಪ್ ನ ಮೊದಲ 7 ಪಂದ್ಯದಲ್ಲಿ ಕೊಹ್ಲಿಯ ಫಾರ್ಮ್ ಎದುರಾಳಿಗಳಿಗೆ ಆಸ್ಟೇನು ಭಯ ಹುಟ್ಟಿಸಲಿಲ್ಲ. ಈ ವರ್ಷದ ವಿಶ್ವ ಕಪ್ ನಲ್ಲಿ ಕ್ಯಾಪ್ಟನ್ ರೋಹಿತ್ ಶರ್ಮಾನ ಜೊತೆಗೆ ಆರಂಭಿಕ ಆಟಗಾರಣಾಗಿ ಕಣಕ್ಕಿಳಿದ ವಿರಾಟ್ ಕೊಹ್ಲಿ ಏಳು ಪಂದ್ಯಗಳಲ್ಲಿ ಕಲೆ ಹಾಕಿದ್ದು ಕೇವಲ 75 ರನ್ ಗಳು. ಫೈನಲ್ ನಲ್ಲಿ ವಿರಾಟ್ ಕೊಹ್ಲಿ ಭಾರತದ ಗೆಲುವಿಗೆ ಮುಖ್ಯ ಪಾತ್ರವಹಿಸುತ್ತಾರೆ ಎಂದು ನಂಬಿದ್ದ ಕ್ಯಾಪ್ಟನ್ ರೋಹಿತ್ ನ ನಿರೀಕ್ಷೆಯನ್ನು ಕೊಹ್ಲಿ ನಿಜವೆಂದು ಸಾಬೀತು ಪಡಿಸಿದರು.
ಸೌತ್ ಆಫ್ರಿಕಾ ವಿರುದ್ಧದ ಫೈನಲ್ ಪಂದ್ಯದಲ್ಲಿ ಭಾರತ ಸಂಕಷ್ಟಕ್ಕೆ ಸಿಲುಕಿದ್ದ ಸಮಯದಲ್ಲಿ ಬರೋಬ್ಬರಿ 76 ರನ್ ಭಾರಿಸುವ ಮೂಲಕ ಭಾರತಾಂಬೆಯ ಮಡಿಲಿಗೆ ಮತ್ತೊಂದು ವಿಶ್ವ ಕಪ್ ಸೇರಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ತಮ್ಮದಾಗಿಸಿಕೊಳ್ಳುತ್ತಾರೆ. ಇದೆ ಖುಷಿಯಲ್ಲಿ ಸಂಭ್ರಮಿಸುತ್ತಿದ್ದ ಕೋಟ್ಯಂತರ ಭಾರತೀಯರಿಗೆ ಕೊಹ್ಲಿ ತನ್ನ ಟಿ 20 ಕ್ರಿಕೆಟ್ ಗೆ ನಿವೃತ್ತಿ ಘೋಶಿಸುವುದರ ಮೂಲಕ ಶಾಕಿಂಗ್ ಹೇಳಿಕೆ ನೀಡುತ್ತಾರೆ.
ವಿರಾಟ್ ಕೊಹ್ಲಿಯ ಈ ನಡೆಗೆ ಅಸಲಿ ಕಾರಣವೇನೆಂದರೆ, ವಿಶ್ವ ಕಪ್ ಗೂ ಮುನ್ನ ವಿರಾಟ್ ಕೊಹ್ಲಿಯನ್ನು ವಿಶ್ವ ಕಪ್ ನ 15 ಜನರ ತಂಡದಿಂದ ಕೈ ಬಿಡಲಿದ್ದಾರೆ ಎಂಬ ಒಂದಿಷ್ಟು ಸುದ್ದಿಗಳು ಹರಿದಾಡುತ್ತಿದ್ದವು. ಇದಕ್ಕೆ ಪ್ರಮುಖ ಕಾರಣವೆಂದರೆ ಕೊಹ್ಲಿಯ ಸ್ಟ್ರೈಕ್ ರೇಟ್. ವೆಸ್ಟ್ ಇಂಡಿಸ್ ನಂತಹ ಸ್ಲೋ ಪಿಚ್ ಗಳಿಗೆ ವಿರಾಟ್ ಕೊಹ್ಲಿಯ ಬ್ಯಾಟಿಂಗ್ ಶೈಲಿ ಸರಿ ಹೊಂಡುವುದಿಲ್ಲ ಎಂದು ಹೇಳಲಾಗುತ್ತಿತ್ತು.
ಇದರಿಂದಾಗಿ ಬಿಸಿಸಿಐನ ಅಧ್ಯಕ್ಷ ಜೈ ಶಾ ವಿರಾಟ್ ಕೊಹ್ಲಿಯ ಬದಲಿಗೆ ತಂಡದಲ್ಲಿ ಮತ್ತೊಬ್ಬ ಯುವ ಆಟಗಾರನಿಗೆ ಸ್ಥಾನ ಕೊಡುವ ನಿರೀಕ್ಷೆಯಲ್ಲಿದ್ದರು. ಇದಕ್ಕೆ ತಲೆಕೊಡದ ಟೀಮ್ ಇಂಡಿಯಾದ ಹೆಡ್ ಕೋಚ್ ರಾಹುಲ್ ದ್ರಾವಿಡ್ ಹಾಗೂ ನಾಯಕ ರೋಹಿತ್ ಶರ್ಮ ವಿರಾಟ್ ಕೊಹ್ಲಿಯಂತಹ ಅನುಭವಿ ಆಟಗಾರ ನಮ್ಮ ತಂಡಲ್ಲಿರಬೇಕು ಎಂದರು. ಇದು ಕೂಡ ವಿರಾಟ್ ಕೊಹ್ಲಿಯ ನಿವೃತ್ತಿಗೆ ಒಂದು ಕಾರಣವಾಗಿರಬಹುದು.
ಮತ್ತೊಂದು ಕಾರಣವೇನೆಂದರೆ ಕೊಹ್ಲಿಯೇ ಹೇಳಿದಂತೆ ಭಾರತೀಯ ತಂಡದಲ್ಲಿ ಯುವ ಪ್ರತಿಭೆಗಳಿಗೆ ಅವಕಾಶ ಸಿಗಬೇಕು. ಇವರು ಟೀಮ್ ಇಂಡಿಯಾವನ್ನು ಇನ್ನೊಂದು ಹಂತಕ್ಕೆ ಕೊಂಡೋಯ್ಯುವೆರೆಂಬ ನಿರೀಕ್ಷೆಯಲ್ಲಿ ಅಂತಾರಾಷ್ಟ್ರೀಯ ಟಿ 20 ಅವೃತ್ತಿಗೆ ವಿದಾಯ ಘೋಷಿಸುತ್ತಿರುವೆ ಎಂದರು.


