ಬಿರಿಯಾನಿ ಎಂಬ ಪದ ಕೇಳಿದ ತಕ್ಷಣವೇ ಅನೇಕರ ಬಾಯಲ್ಲಿ ನೀರು ಬರುತ್ತದೆ. ಬಿರಿಯಾನಿ ಎಲ್ಲರ ಮೆಚ್ಚುಗೆಯ ಆಹಾರ ಪದಾರ್ಥವಾಗಿದೆ. ಕೆಲವರಂತೂ ವಾರಕ್ಕೆ ಎರಡು ಮೂರು ಬಾರಿ ಬಿರಿಯಾನಿಯನ್ನು ತಿನ್ನಲೆ ಬೇಕು ಎಂಬ ವ್ರತವನ್ನು ಪಾಲಿಸುತ್ತಿರುತ್ತಾರೆ.
ಒಂದು ಅಧ್ಯಾಯನದ ಪ್ರಕಾರ ಪ್ರತಿ ಸೆಕೆಂಡಿಗೆ 2.5 ಬಿರಿಯಾನಿಗಳು ಆನ್ಲೈನ್ ಮೂಲಕ ಆಲ್ಡರ್ ಮಾಡಲಾಗುತ್ತಿದೆ. 2023 ರ ವರದಿಯ ಪ್ರಕಾರ 10.09 ಕೋಟಿ ಬಿರಿಯಾನಿ ಆನ್ಲೈನ್ ಮೂಲಕ ಪಡೆಯಲಾಗಿದೆ ಎಂದು ಅಂಕಿ ಅಂಶಗಳು ಹೇಳುತ್ತವೆ.
ಬಿರಿಯಾನಿಯು ಅನೇಕ ವರ್ಷಗಳ ಇತಿಹಾಸವನ್ನು ಹೊಂದಿದೆ. ಬೇರೆ ಬೇರೆ ಸ್ಥಳಗಳಲ್ಲಿ ಬೇರೆ ಬೇರೆ ರೀತಿಯ ಬಿರಿಯಾನಿಯನ್ನು ಮಾಡಲಾಗುತ್ತದೆ. ಆದರೆ ಅವುಗಳ ರುಚಿ ಹಾಗೂ ಸುವಾಸನೆ ವಿಭಿನ್ನ ವಾಗಿರುತ್ತದೆ. ಮುಖ್ಯವಾಗಿ ಕೊಲ್ಕತ್ತಾ ಹಾಗೂ ಹೈದರಬಾದ್ ಬಿರಿಯಾನಿಗಳು ಹೆಚ್ಚು ಜನಪ್ರಿಯತೆಯನ್ನು ಪಡೆದ ಎರಡು ಬಿರಿಯಾನಿ ವಿಧಗಳಾಗಿವೆ.
ಕೊಲ್ಕತ್ತಾ ಬಿರಿಯಾನಿ

ಕೊಲ್ಕತ್ತಾ ಬಿರಿಯನಿಯು ತನ್ನ ಸ್ವಾಧ ಹಾಗೂ ಸುವಾಸನೆ ಇಂದ ಜನಪ್ರಿಯತೆ ಪಡೆದಿದೆ. ಕಡಿಮೆ ಮಸಾಲೆ ಪದಾರ್ಥಗಳನ್ನು ಹಾಗೂ ಆಲೂಗಡ್ಡೆ ಗಳ ಮಿಶ್ರಣವಾಗಿ ಈ ಬಿರಿಯಾನಿ ಇರುತ್ತದೆ. ಅವಧ್‌ನ ಕೊನೆಯ ನವಾಬ್ ವಾಜಿದ್ ಅಲಿ ಷಾ ಈ ಬಿರಿಯಾನಿಯನ್ನು ಪರಿಚಯಿಸಿದರು. ಬಳಿಕ 1857 ರಲ್ಲಿ ಇದು ಕೋಲ್ಕತ್ತಾದ ಮುಖ್ಯ ಭೋಜನವಾಗಿ ರೂಪ ಪಡೆಯಿತು. ಭಾರತಕ್ಕೆ ಪೋರ್ಚುಗೀಸ್ ಬಂದ ತರುವಾಯ ಬಿರಿಯಾನಿಯಲ್ಲಿ ಮಾಂಸದ ತುಂಡುಗಳ ಜೊತೆ ಆಲೂಗಡ್ಡೆಯನ್ನು ಸೇರಿಸಲಾಯಿತು ಎಂದು ಇತಿಹಾಸ ಹೇಳುತ್ತದೆ.
ಹೈದರಬಾದ್ ಬಿರಿಯಾನಿ
ಬಿರಿಯಾನಿ ಎಂಬ ಪದವು ಪರ್ಷಿಯನ್ ಭಾಷೆಯಿಂದ ಬಂದಿದೆ. ಆದರೆ ಕೆಲವರ ಪ್ರಕಾರ ಹೈದರಬಾದ್ ಬಿರಿಯಾನಿಯ ಮೂಲ ಎಂದು ಹೇಳುತ್ತಾರೆ. ಹೈದರಬಾದ್ ಎಂದರೆ ತಕ್ಷಣ ಬಿರಿಯಾನಿ ಎಂದು ಹೇಳುವ ಮಟ್ಟಿಗೆ ಪ್ರಸಿದ್ಧಿಯನ್ನು ಪಡೆದುಕೊಂಡಿದೆ. ಮಮ್ತಾಜ್ ಮಹಲ್ ಸೈನಿಕರ ಅಪೌಷ್ಟಿಕತೆ ಯನ್ನು ನೋಡಿ ಗರ್ಭಿಣಿಯರ ಸಹಾಯ ಪಡೆದು ಈ ಆಹಾರವನ್ನು ತಯಾರಿಸಿದಳು ಎಂದು ಇತಿಹಾಸದ ಕಥೆ ಹೇಳುತ್ತದೆ. ಇದರಲ್ಲಿ ಕೇಸರಿಯನ್ನು ಹಾಗೂ ಮಸಾಲೆಯನ್ನು ಸೇರಿಸಿ ಕಟ್ಟಿಗೆಯಲ್ಲಿ ಉರಿಯಾಲಾಗುತ್ತದೆ.

ಬಿರಿಯಾನಿ ಬಗ್ಗೆ ಹಲವಾರು ಕತೆಗಳಿವೆ . ಅದರಲ್ಲಿ ಟರ್ಕ್-ಮಂಗೋಲ್ ವಿಜಯಿ ತೈಮೂರ್‌ಗೆ ಎಂಬುವವರು 1398ರಲ್ಲಿ ಭಾರತಕ್ಕೆ ಬಿರಿಯಾನಿ ಪರಿಚಯಿಸಿದರು ಎಂದು ಹೇಳುತ್ತಾರೆ. ಹೈದರಬಾದ್ ನಿಜಾಮರು ಹಾಗೂ ನವಾಬರ ನಡುವೆ ಬಿರಿಯಾನಿ ಹುಟ್ಟಿತು ಎಂದು ಹೇಳುವರು. ಮೊಘಲ್ ಯುದ್ಧದಲ್ಲಿ ಸೈನಿಕರಿಗೆ ಆಹಾರವಾಗಿ ಬಿರಿಯಾನಿ ಮುಖ್ಯ ಪಾತ್ರ ವಹಿಸಿತು ಎಂದು ಹೇಳುತ್ತಾರೆ. ಔರಂಗಜೇಬ್ ನ ಆಡಳಿತ ಅವಧಿಯಲ್ಲಿ ನಿಜಾಮ್-ಉಲ್-ಮುಲ್ಕ್ ನು ಬಿರಿಯಾನಿ ಜನಪ್ರಿಯತೆ ಗೊಳ್ಳಲು ಹೆಚ್ಚು ಪ್ರಭಾವವನ್ನು ಬೀರಿದನು. ಬಿರಿಯಾನಿ ಎಂದರೆ ಹೈದರಾಬಾದಿನ ಅವಿಭಾಜ್ಯ ಅಂಗವಾಗಿ ಗುರುತಿಸಿ ಕೊಂಡಿದೆ.
