ಭಾರತೀಯ ಅನೇಕ ಸಿನಿಮಾಗಳು ತೆರೆಯಲ್ಲಿ ಅತಿ ಹೆಚ್ಚು ಹಣ ಸಂಪಾದಿಸಿರುವ ಪಟ್ಟಿಯಲ್ಲಿ ಇವೆ. ಅದರಲ್ಲಿ ಹೆಚ್ಚು ಗಳಿಕೆ ಮಾಡಿ ದಾಖಲೆ ಬರೆದ ಟಾಪ್ ಹತ್ತು ಚಿತ್ರಗಳು ಯಾವುವು ಎಂದು ನಿಮಗೆ ಗೊತ್ತಾ. ಹಾಗಿದ್ರೆ ನೋಡೋಣ ಬನ್ನಿ.
- ದಂಗಲ್ : ಗೀತಾ ಫೋಗಟ್ ಮತ್ತು ಬಬಿತಾ ಫೋಗಟ್ ಅವರ ಜೀವನದ ಕತೆಯನ್ನು ಆಧಾರಿಸಿ ಈ ಸಿನಿಮಾ ಮಾಡಲಾಗಿದೆ. ಆಮೀರ್ ಖಾನ್ ಹಾಗೂ ಮಹಾವೀರ್ ಸಿಂಗ್ ಮುಖ್ಯ ಪಾತ್ರದಲ್ಲಿ ಅಭಿನಯ ಮಾಡಿದ್ದಾರೆ. 30ಕೋಟಿಯ ಬಜೆಟ್ ಸಿನಿಮವಾದ ದಂಗಲ್ ಸುಮಾರು 2,024 ಕೋಟಿ ಗಳಿಸಿ ಭಾರತೀಯ ಚಿತ್ರರಂಗದಲ್ಲಿ ಹೆಚ್ಚು ಆದಾಯ ಗಳಿಸಿದ ಸಿನಿಮಾ ಎಂಬ ಕೀರ್ತಿ ಪಡೆದಿದೆ. ಹೆಚ್ಚು ಆದಾಯ ಪಡೆದ ಅನ್ಯ ಭಾಷೆಯ 3 ನೆಯ ಚಿತ್ರ ಎಂತಲೂ ಗುರುತಿಸಿಕೊಂಡಿದೆ. ಚೀನಾದಲ್ಲಿ ಹೆಚ್ಚು ಮನ್ನಣೆ ಗಳಿಸಿದ ಸಿನಿಮಾ ಇದು.
- ಬಾಹುಬಲಿ 2: 2012 ರಲ್ಲಿ ನಿರ್ಮಾಣವಾದ ಈ ಸಿನಿಮಾವನ್ನು ಎಸ್.ಎಸ್. ರಾಜಮೌಳಿ ಹಾಗೂ ವಿ. ವಿಜಯೇಂದ್ರ ಪ್ರಸಾದ್ ನಿರ್ದೇಶಿಸಿದ್ದಾರೆ. ಇದರ ನಾಯಕನಾಗಿ ಪ್ರಭಾಸ್ ನಟಿಸಿದ್ದಾರೆ. 250 ಕೋಟಿಯ ಬಜೆಟ್ ಸಿನಿಮಾವದ ಬಾಹುಬಲಿ 2 ಸಿನಿಮಾ ಸುಮಾರು 1,810.60 ಕೋಟಿ ರೂ ರಷ್ಟು ಆದಾಯವನ್ನು ಗಳಿಕೆ ಮಾಡಿದೆ. ಕಡಿಮೆ ಸಮಯದಲ್ಲೇ ಹೆಚ್ಚು ಆದಾಯವನ್ನು ಗಳಿಕೆ ಮಾಡಿದ ಚಿತ್ರ ಎಂಬ ಖ್ಯಾತಿಗೆ ಪಾತ್ರವಾಗಿದೆ. 10 ದಿನಗಳಲ್ಲಿ 1 ಸಾವಿರ ಕೋಟಿ ಗಳಿಸಿ ದಾಖಲೆ ಬರೆದಿದೆ.
- ಆರ್ ಆರ್ ಆರ್: 2022 ರಲ್ಲಿ ತೆರೆ ಕಂಡ ಈ ಚಿತ್ರವು 550 ಕೋಟಿ ಬಜೆಟ್ ಸಿನಿಮವಾಗಿತ್ತು. ಇದರಲ್ಲಿ ಜೂನಿಯರ್ ಎನ್ಟಿಆರ್ ಹಾಗೂ ರಾಮ್ ಚರಣ್ ನಟನೆ ಮಾಡಿದ್ದಾರೆ. ಸುಮಾರು 1,387.26 ಕೋಟಿ ರೂ ಆದಾಯ ಗಳಿಸಿ ಮೂರನೇ ಸಿನಿಮಾವಾಗಿ ಮೂಡಿ ಬಂದಿದೆ. ಅದರಲ್ಲೂ ತೆಲುಗಿನಲ್ಲಿ ಹೆಚ್ಚು ಆದಾಯವನ್ನು ಪಡೆಯ ಎರಡನೇ ಸಿನಿಮಾ ವಾಗಿ ಗುರುತಿಸಿಕೊಂಡಿದೆ.
- ಕೆಜಿಎಫ್ ಚಾಪ್ಟರ್ 2: ಪ್ರಶಾಂತ್ ನೀಲ್ ರವರ ಈ ಸಿನಿಮಾ 2022 ರಲ್ಲಿ ತೆರೆ ಕಂಡಿತು. ಯಶ್ ಅಭಿನಯದ ಸಿನಿಮಾದಲ್ಲಿ 100 ಕೋಟಿಯನ್ನು ಬಳಸಲಾಗಿತ್ತು. ಈ ಸಿನಿಮಾವು 1,250 ಕೋಟಿ ರೂ ಆದಾಯವನ್ನು ಗಳಿಸಿದೆ. ವಿಶ್ವದಲ್ಲಿ ಹೆಚ್ಚು ಆದಾಯ ಗಳಿಸಿದ 4 ನೆಯ ಚಿತ್ರ ಹಾಗೂ ಭಾರತದಲ್ಲಿ 2 ನೆಯ ಚಿತ್ರವಾಗಿದೆ.
- ಜವಾನ್: 300 ಕೋಟಿ ರೂ ಬಜೆಟ್ ನ ಈ ಸಿನಿಮಾ 2023 ರಲ್ಲಿ ನಿರ್ಮಾಣವಾಗಿತ್ತು. 300 ಕೋಟಿಯ ಸಿನಿಮಾ ಗಳಿಸಿದ್ದು ಸುಮಾರು 1,148.32 ಕೋಟಿ ರೂ. ಚಿತ್ರದಲ್ಲಿ ಶಾರು ಖಾನ್, ಸೇತುಪತಿ, ದೀಪಿಕಾ ಪಡುಕೋಣೆ ನಟಿಸಿದ್ದಾರೆ. ಹೆಚ್ಚು ಆದಾಯ ಪಡೆದ ಹಿಂದಿಯ 2ನೆಯ ಸಿನಿಮಾ ಆಗಿದೆ. ಪಠಾಣ್, ಬಜರಂಗಿ ಭಾಯಿಜಾನ್, ಸೀಕ್ರೆಟ್ ಸೂಪರ್‌ಸ್ಟಾರ್, ಪಿಕೆ ಚಿತ್ರಗಳು ಟಾಪ್ 10 ರಲ್ಲಿ ಸ್ಥಾನ ಪಡೆದಿವೆ.