ಬೆಂಗಳೂರು : ಬೆಂಗಳೂರು ನಗರದಲ್ಲಿ ಮತ್ತೇ ಬೌ ಬೌ ಬಿರಿಯಾನಿ ಸದ್ದು ಮಾಡುತ್ತಿದ್ದು, ನಾಯಿ ಮಾಂಸ ಮಾರಾಟ ಮಾಡುತ್ತಿದ್ದಾರೆ ಎಂಬ ಆರೋಪದಡಿ, ಜಟಾಪಟಿ ನಡೆದಿದೆ.
ಜೈಪುರದಿಂದ ಬಂದ ಮಾಂಸದ ಬಾಕ್ಸ್ ಗಳಲ್ಲಿ ನಾಯಿ ಮಾಂಸ ಸರಬರಾಜಾಗುತ್ತಿದೆ ಎಂದು ಆರೋಪಿಸಿ ಕೆಲ ಹಿಂದೂ ಕಾರ್ಯಕರ್ತರು ತಡೆದು ಗಲಾಟೆ ಮಾಡಿದರು. ಆದರೆ, ಮಾಂಸ ಮಾರಾಟಗಾರ ಮುಸ್ಲಿಂ ಎಂಬ ಕಾರಣಕ್ಕೆ ಈ ಆರೋಪ ಎಂದು ಮಾಂಸ ಮಾರಾಟಗಾರರು ಪ್ರತ್ಯಾರೋಪ ಮಾಡಿದ್ದಾರೆ.
ಸ್ಥಳಕ್ಕೆಆಗಮಿಸಿದ ಬಿಬಿಎಂಪಿ ಅಧಿಕಾರಿಗಳು ಎಲ್ಲ ಬಾಕ್ಸ್ ಗಳಲ್ಲಿ ಸ್ಯಾಂಪಲ್ ಪಡೆದು ಪರೀಕ್ಷೆಗೆ ಕಳುಹಿಸಿದ್ದಾರೆ. ವ್ಯಾಪಾರಿಗಳು ಕುರಿಯ ಮಾಂಸ ಎಂದು ವಾದ ಮಾಡಿದರೆ, ನಾಯಿ ಮಾಂಸ ಎಂಬುದು ಕಾರ್ಯಕರ್ತರ ಆರೋಪವಾಗಿದೆ.
