ಸಿನಿಮಾ ಸುದ್ದಿ

Dolly Dhananjay : ಬಹು ಭಾಷಾ ಚಿತ್ರ “ಹಲಗಲಿ”ಯ ನಾಯಕನಾಗಿ ಡಾಲಿ ಧನಂಜಯ್

Share It

ಬೆಂಗಳೂರು: ಬಹು ನಿರೀಕ್ಷಿತ ಹಾಗೂ ಹೆಚ್ಚು ಬಜೆಟ್ ನಲ್ಲಿ ನಿರ್ಮಾಣವಾಗುತ್ತಿರುವ ಹಲಗಲಿ ಚಿತ್ರದ ನಾಯಕನಾಗಿ ಡಾಲಿ ಧನಂಜಯ್ ನಟಿಸಲಿದ್ದಾರೆ. ಸುಕೇಶ್ ಡಿ ಕೆ ರವರ ನಿರ್ದೇಶನದಲ್ಲಿ ಚಿತ್ರ ಮೂಡಿ ಬರಲಿದ್ದು , ಮತ್ತೊಂದು ಐತಿಹಾಸಿಕ ಸಿನಿಮಾದಲ್ಲಿ ಡಾಲಿ ಧನಂಜಯ್ ನಟನೆ ಮಾಡಲಿದ್ದಾರೆ. ಈ ಸಿನಿಮಾವು ಸುಮಾರು 80 ಕೋಟಿ ಬಜೆಟ್ ನದ್ದಾಗಿದ್ದು, ಕನ್ನಡ, ತೆಲುಗು, ಹಿಂದಿ , ಮಲೆಯಾಳಂ, ತಮಿಳಿನಲ್ಲಿ ತೆರೆ ಕಾಣಲಿದೆ. ಲಲಿತ್ ಮಹಲ್ ಗೆ ಪೂಜೆಯನ್ನು ಮಾಡುವ ಮೂಲಕ ಹಡಗಲಿ ಚಿತ್ರಕ್ಕೆ ಚಾಲನೆಯನ್ನು ನೀಡಲಾಗಿದೆ.

ಧನಂಜಯ್ ರವರು ಐತಿಹಾಸಿಕ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹಲಗಲಿ ಬೇಡರು ಬ್ರಿಟಿಷರ ವಿರುದ್ಧ ಹೋರಾಟ ನಡೆಸಿದವರು. ಹಲಗಲಿ ಬೇಡರ ಜೀವನ ಹಾಗೂ ಅವರ ಸಾಂಸ್ಕೃತಿಯ ಕುರಿತು ಸಿನಿಮಾವಿದು. ಧನಂಜಯ್ ವಾರಿಯರ್ ಪಾತ್ರದಲ್ಲಿ ನಟನೆ ಮಾಡಲಿದ್ದಾರೆ. ನಿರ್ಮಾಪಕರಾಗಿ ಉದ್ಯಮಿ ಬಳ್ಳಾರಿಯ ಕಲ್ಯಾಣ್ ಚಕ್ರವರ್ತಿ ಧೂಳಿಪಾಳ್ಳ ಹೊಣೆ ಹೊತ್ತಿದ್ದಾರೆ. ಈ ಸಿನಿಮಾವು ದುಹರ ಮೂವೀಸ್ ಬ್ಯಾನರ್ ನಡಿ ನಿರ್ಮಾಣವಾಗುತ್ತಿದೆ. ಈ ಬ್ಯಾನರ್ ನಡಿ 20 ಕ್ಕೂ ಹೆಚ್ಚು ಕನ್ನಡ ಹಾಗೂ ತೆಲುಗು ಚಿತ್ರಗಳನ್ನು ನಿರ್ಮಾಣವಾಗಿವೆ.

ಛಾಯಾಗ್ರಹಣದಲ್ಲಿ ಸಾಯಿ ಶ್ರೀರಾಮ್ ಹಾಗೂ ಸಂಗೀತದಲ್ಲಿ ವಾಸುಕಿ ವೈಭವ್ ತಮ್ಮ ಕೈ ಚಳಕ ತೋರಿಸಿಲಿದ್ದಾರೆ. ವಿಕ್ರಮ್ ಮೋರ್ ರವರ ಸಾಹಸ ನಿರೀಕ್ಷೆಯನ್ನು ಹುಟ್ಟು ಹಾಕಿದೆ. ಈ ಚಿತ್ರಕ್ಕೆ ಮೊದಲು ಡಾರ್ಲಿಂಗ್ ಕೃಷ್ಣ ನಾಯಕ ಎಂಬ ಹೆಸರು ಕೇಳಿ ಬಂದಿತ್ತು. ಅವರು ಬಿಡುವಿಲ್ಲದ ಕಾರಣ ಹಾಗೂ ಬಹು ಭಾಷೆಗೆ ಧನಂಜಯ್ ಸೂಕ್ತ ಎಂದು ಅರಿತು ಇವರಿಗೆ ಚಾನ್ಸ್ ನೀಡಲಾಗಿದೆ.


Share It

You cannot copy content of this page