ವರದಕ್ಷಿಣಿ ಕಿರುಕುಳ : ಮನೆಯಲ್ಲಿ ಕೂಡಿಹಾಕಿ ಪತ್ನಿಗೆ ಕಿರುಕುಳ
ಚಿಕ್ಕಮಗಳೂರು: ವರದಕ್ಷಿಣಿ ತರುವಂತೆ ಪತ್ನಿಯನ್ನು ಪೀಡಿಸಿ ಮನೆಯಲ್ಲಿ ಕೂಡಿಹಾಕಿ ಚಿತ್ರೆಹಿಂಸೆ ಮಾಡುತ್ತಿದ್ದ ಪತಿಯನ್ನು ತರೀಕೆರೆ ಪೊಲೀಸರು ಬಂಧಿಸಿದ್ದಾರೆ.
ಜಿಲ್ಲೆಯ ತರೀಕೆರೆ ತಾಲೂಕಿನ ನಂದಿಹೊಸಳ್ಳಿ ಗ್ರಾಮದಲ್ಲಿ ತಾರಾ ಎಂಬ ಮಹಿಳೆಯನ್ನು ಬಟ್ಟೆಬಿಚ್ಚಿ ಮನೆಯಲ್ಲಿ ಕೂಡಿಹಾಕಿ ಆಕೆಯ ಪತಿಯೇ ಥಳಿಸಿದ್ದ ಎಂಬ ಆರೋಪ ಕೇಳಿಬಂದಿದೆ. ಮನೆಯಿಂದ ತಪ್ಪಿಸಿಕೊಂಡು ಹಿಂದಿನ ಬಾಗಿಲಿನಿಂದ ಓಡಿಬಂದ ಮಹಿಳೆ ಲಿಂಗದಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಪೊಲೀಸರು, ತಾರಾ ಪತಿ ತಿಮ್ಮಪ್ಪ ಸೇರಿದಂತೆ ಆತನ ಕುಟುಂಬದ ಹತ್ತು ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ದೂರಿನಲ್ಲಿ ತಿಮ್ಮಪ್ಪ ತವರಿಗೆ ಹೋಗಿ ಹಣ ತರುವಂತೆ ಪೀಡಿಸುತ್ತಿದ್ದ, ಮನೆಯಲ್ಲಿ ಕೂಡಿಹಾಕಿದ್ದ ಹಾಗೂ ಅಪ್ಪ ಮತ್ತು ಅಣ್ಣನ ಮಾತು ಕೇಳಿಕೊಂಡು ನಿತ್ಯವು ಕಿರುಕುಳ ನೀಡಿದ್ದ ಎಂದು ತಾರಾ ವಿವರಿಸಿದ್ದಾರೆ.


