ಆನೇಕಲ್: ಸಂವಿಧಾನ ಶಿಲ್ಪಿ ಡಾಕ್ಟರ್ ಬಿಆರ್ ಅಂಬೇಡ್ಕರ್ ಅವರ 134 ಜನ್ಮದಿನಾಚರಣೆಯನ್ನು ಸಡಗರ ಸಂಭ್ರಮದಿಂದ ಆಚರಣೆ ಮಾಡಲಾಯಿತು ಆನೇಕಲ್ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಅಂಬೇಡ್ಕರ್ ಪ್ರತಿಮೆಗೆ ಶಾಸಕ ಶಿವಣ್ಣ ಮಾಲಾರ್ಪಣೆ ಮಾಡುವುದರ ಮೂಲಕ ಚಾಲನೆ ನೀಡಿದರು.
ದೇಶಾದ್ಯಂತ ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿಯನ್ನು ಸಮಾನತೆ ದಿನವನ್ನಾಗಿ ಆಚರಣೆ ಮಾಡಲಾಗುತ್ತಿದೆ ನ್ಯಾಯ, ಸ್ವಾಸಂತ್ರ, ಸಮಾನತೆ ಮತ್ತು ಭ್ರಾತೃತ್ವದ ತತ್ವಗಳ ಸಂವಿಧಾನ ರೂಪಿಸುವಲ್ಲಿ ಅಂಬೇಡ್ಕರ್ ಪಾತ್ರ ಮಹತ್ತರವಾದದ್ದು. ಇಡೀ ವಿಶ್ವವೇ ಗೌರವ ಕೊಡುವಂತಹ ವ್ಯಕ್ತಿಯನ್ನು ಸ್ಮರಣೆ ಮಾಡೋದು ನಮ್ಮ ಕರ್ತವ್ಯ ಎಂದು ಶಿವಣ್ಣ ತಿಳಿಸಿದರು.
ಪ್ರಗತಿಪರ ಸಂಘಟನೆ ಒಕ್ಕೂಟದ ಅಧ್ಯಕ್ಷ ರಾವಣ ಮಾತನಾಡಿ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸ್ಥಾಪನೆ ಮಾಡಿದ್ದು ಬಾಬಾ ಸಾಹೇಬ್ ಅಂಬೇಡ್ಕರ್ ಗೆ ಸಲ್ಲಿಬೇಕು. ಆದರೆ ನೋಟ್ನಲ್ಲಿ ಗಾಂಧೀಜಿ ಇಟ್ಟಿರೋದು ಅವರಿಗೂ ಅದಕ್ಕೂ ಸಂಬಂಧ ಇಲ್ಲ. ಇಡೀ ವಿಶ್ವದಲ್ಲೇ 395 ಅನುಚ್ಛೇದಗಳಿದ್ದರೆ ಅದು ಭಾರತ ಸಂವಿಧಾನ ಮಾತ್ರ ಎಂದರು.
ಗಿಡಗಳಿಗೂ ಮತ್ತು ಪ್ರಾಣಿ ಪಕ್ಷಿಗಳಿಗೂ ರಕ್ಷಣೆಯನ್ನು ನೀಡುತ್ತಿದೆ. ಸಂವಿಧಾನ ಸಮಾನತೆ ಹಕ್ಕನ್ನ ಮತ್ತು ಮಹಿಳೆಯರ ಹಕ್ಕನ್ನು ವೋಟಿನ ಹಕ್ಕನ್ನು ಕೊಟ್ಟಿದ್ದಾರೆ. ಸಮಾನತೆ ಬ್ರಾತೃತ್ವ ಸೋದರತೆ ಬೆಸಯುವಂತಹ ಸಂವಿಧಾನ ನೀಡಿದ್ದಾರೆ. ಅಂತಹ ಸಂವಿಧಾನ ಪಡೆದಿದ್ದಕ್ಕೆ ನಾವು ಪುಣ್ಯವಂತರು. ಹಾಗಾಗಿ ಅಂತಹ ಮಹಾ ನಾಯಕ ಅಂಬೇಡ್ಕರ್ ಅವರನ್ನು ನೆನೆಸಿಕೊಂಡು ಆಚರಣೆ ಮಾಡಿದ್ದು ಖುಷಿ ವಿಚಾರ ಎಂದರು.
ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷ ಪದ್ಮನಾಭ, ಕಾಂಗ್ರೆಸ್ ಮುಖಂಡ ದೊಡ್ಡಾಗಡೆ ಹರೀಶ್ ಗೌಡ, ಬಿ.ಪಿ. ರಮೇಶ್ ಪ್ರಗತಿಪರ ಒಕ್ಕೂಟದ ಅಧ್ಯಕ್ಷ ರಾವಣ ವೆಂಕಟೇಶ್ ಮೂರ್ತಿ, ಪಟಪಟ ನಾಗರಾಜು, ವಕೀಲ ಆನಂದ್ ಚಕ್ರವರ್ತಿ ಗೋವಿಂದ ಮೌರ್ಯ, ನಂದಕುಮಾರ್, ವಸಂತ್ ಕುಮಾರ್, ಆನೇಕಲ್ ಕುಮಾರ್, ಮಿಥುನ್ ರಾಜ್, ಹರೀಶ್, ಗೋತಮಾನಂದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.