ಬೆಂಗಳೂರಲ್ಲಿ ಕುಡಿಯುವ ನೀರು ದುಬಾರಿ: ಜಲಮಂಡಳಿ ಆದೇಶ

Drinking water is expensive in Bengaluru: Water Board order
Share It

ಬೆಂಗಳೂರು: ಬೆಂಗಳೂರು ಜನರಿಗೆ 2014ರ ನಂತರ ಕುಡಿಯುವ ಕಾವೇರಿ ನೀರಿನ ದರ ಏರಿಕೆ ಮಾಡಿ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಇಂದು ಅಧಿಕೃತ ಆದೇಶ ಹೊರಡಿಸಿದೆ. ಸಾರ್ವಜನಿಕರಿಗೆ ಹೊರೆ ಆಗದಂತೆ ನೀರಿನ ದರ ಏರಿಕೆ ಮಾಡಿದ್ದೇವೆ. ನೀರಿನ ಸಮರ್ಪಕ ಬಳಕೆಗೆ ಆದ್ಯತೆ ನೀಡಲಾಗುತ್ತಿದೆ ಎಂದಿರುವ ಮಂಡಳಿ ಅಧ್ಯಕ್ಷ ಡಾ.ರಾಮ್ ಪ್ರಸಾತ್ ಮನೋಹರ್ ಅವರು, ವಿವಿಧ ಸ್ಲಾಬ್‌ಗಳಲ್ಲಿ ನೀರಿನ ದರ ಏರಿಕೆಯ ಪಟ್ಟಿಯನ್ನು ವಿವರಿಸಿದ್ದಾರೆ.
ಬೆಂಗಳೂರು ಜಲಮಂಡಳಿಯು 11 ವರ್ಷಗಳಲ್ಲಿ ಬೆಂಗಳೂರು ನಗರ ಕೇವಲ ವ್ಯಾಪ್ತಿಯಷ್ಟೇ ಅಲ್ಲ ಜನಸಂಖ್ಯೆಯಲ್ಲೂ ಅಗಾಧ ಬೆಳವಣಿಗೆಯನ್ನು ಕಂಡಿದೆ. ರಾಜ್ಯ ಸರ್ಕಾರದಿಂದ ಹಣಕಾಸಿನ ಸಹಾಯವಿಲ್ಲದೇ ಸ್ವಾಯತ್ತ ಸಂಸ್ಥೆಯಾದ ಮಂಡಳಿಗೆ ನೀರಿನ ಶುಲ್ಕವೇ ಪ್ರಮುಖ ಆದಾಯ ಮೂಲವಾಗಿದೆ. ಈ ಅವಧಿಯಲ್ಲಿ ವಿದ್ಯುತ್ ವೆಚ್ಚವು ಶೇಕಡಾ 107 ರಷ್ಟು ಹೆಚ್ಚಾದರೆ, ನಿರ್ವಹಣೆ ವೆಚ್ಚ ಶೇ. 122.5 ರಷ್ಟು ಏರಿಕೆ ಕಂಡಿದೆ ಎಂದು ಬೆಲೆ ಏರಿಕೆಗೆ ಅವರು ಕಾರಣ ತಿಳಿಸಿದರು.
ಮಾಸಿಕವಾಗಿ 200 ಕೋಟಿ ರೂ. ವೆಚ್ಚ ನಿರ್ವಹಿಸಲಾಗುತ್ತಿದೆ. ಮಾಸಿಕ ಸಂಗ್ರಹಣೆ ಆಗುತ್ತಿರುವುದು ಕೇವಲ 120 ಕೋಟಿ ರೂ. ಇದರಿಂದ ಪ್ರತಿ ತಿಂಗಳು 80 ಕೋಟಿ ರೂ. ಆರ್ಥಿಕ ಕೊರತೆಯನ್ನು ನಾವು ಎದುರಿಸುತ್ತಿದ್ದೇವೆ. ಹೀಗಾಗಿ ಮಂಡಳಿಗೆ ದರ ಏರಿಕೆ ಅನಿವಾರ್ಯವಾಗಿದೆ ಎಂದು ಅವರು ಹೇಳಿದರು.
ಪರಿಷ್ಕೃತ ನೀರಿನ ಸ್ಲಾಬ್‌ವೈಸ್ ದರ ಪಟ್ಟಿ ಗೃಹ ಬಳಕೆ ದರ ವಿವರ * 0-8000 ಸಾವಿರ ಲೀಟರ್ ನೀರು ಬಳಕೆಯ ಸ್ಲಾಬ್: ಪ್ರತಿ ಲೀಟರ್ ಗೆ 0.15 ಪೈಸೆ ಹೆಚ್ಚಳ (1ಪೈಸೆಗಿಂತ ಕಡಿಮೆ) ಉದಾಹರಣೆಗೆ ಈ ಸ್ಲ್ಯಾಬ್ ನಡಿಯಲ್ಲಿ ಪ್ರತಿ 1 ಸಾವಿರ ಲೀಟರ್ ಗೆ ಪ್ರಸ್ತುತ ದರ ರೂ.7ರಿಂದ ರೂ.8.50 ಪೈಸೆ (ಅಂದರೇ ರೂ.1.50) ಹೆಚ್ಚಳವಾಗಲಿದೆ.

  • 8001- 25000 ಲೀಟರ್ ಬಳಕೆಯ ಸ್ಲಾಬ್: ಪ್ರತಿ ಲೀಟರ್ ಗೆ 0.30 ಪೈಸೆ ಹೆಚ್ಚಳ(1ಪೈಸೆಗಿಂತ ಕಡಿಮೆ) ಉದಾಹರಣೆಗೆ ಈ ಸ್ಲ್ಯಾಬ್ ನಡಿಯಲ್ಲಿ ಪ್ರತಿ 1 ಸಾವಿರ ಲೀಟರ್ ಗೆ ಪ್ರಸ್ತುತ ದರ ರೂ.11ರಿಂದ ರೂ.14ಕ್ಕೆ (ಅಂದರೇ ರೂ.3) ಹೆಚ್ಚಳ ಮಾಡಲಾಗಿದೆ. 25001- 50000 ಲೀಟರ್ ಬಳಕೆಯ ಸ್ಲಾಬ್: ಪ್ರತಿ ಲೀಟರ್ ಗೆ 0.80 ಪೈಸೆ ಹೆಚ್ಚಳ (1ಪೈಸೆಗಿಂತ ಕಡಿಮೆ) 50001 – 100000 ಲೀಟರ್ ಬಳಕೆಯ ಸ್ಲಾಬ್: ಪ್ರತಿ ಲೀಟರ್ ಗೆ 1.00 ಪೈಸೆ ಹೆಚ್ಚಳ 100001 ರಿಂದ ಹೆಚ್ಚು ಲೀಟರ್ ಬಳಕೆಯ ಸ್ಲಾಬ್: ಪ್ರತಿ ಲೀಟರ್ ಗೆ 1.00 ಪೈಸೆ ಹೆಚ್ಚಳ.
    ಡೊಮೆಸ್ಟಿಕ್ ಹೈ-ರೈಸ್ ವಿವರ 0-2,00,000 ಸಾವಿರ ಲೀಟರ್ ಬಳಕೆಯ ಸ್ಲಾಬ್: ಪ್ರತಿ ಲೀಟರ್ ಗೆ 0.30 ಪೈಸೆ ಹೆಚ್ಚಳ (1ಪೈಸೆಗಿಂತ ಕಡಿಮೆ) 2,00,001-5,00,000 ಸಾವಿರ ಲೀಟರ್ ಬಳಕೆಯ ಸ್ಲಾಬ್: ಪ್ರತಿ ಲೀಟರ್ ಗೆ 0.60 ಪೈಸೆ ಹೆಚ್ಚಳ (1ಪೈಸೆಗಿಂತ ಕಡಿಮೆ) 5,00,001-10,00,000 ಸಾವಿರ ಲೀಟರ್ ಬಳಕೆಯ ಸ್ಲಾಬ್: ಪ್ರತಿ ಲೀಟರ್ ಗೆ 1.00 ಪೈಸೆ ಹೆಚ್ಚಳವಾಗಿದೆ.
    ನಾನ್ ಡೊಮೆಸ್ಟಿಕ್ -ಗೃಹೇತರ ಬಳಕೆ ದರಪಟ್ಟಿ ಕೈಗಾರಿಕೆಗಳಿಗೆ/ಬಲ್ಕ್ ಸಪ್ಲೇ ಬಳಕೆಯ ಸ್ಲಾಬ್: ಪ್ರತಿ ಲೀಟರ್ ಗೆ 0.90 ಪೈಸೆ ಹೆಚ್ಚಳ(1ಪೈಸೆಗಿಂತ ಕಡಿಮೆ) 0 – 10,000 ಸಾವಿರ ಲೀಟರ್ ಬಳಕೆಯ ಸ್ಲಾಬ್: ಪ್ರತಿ ಲೀಟರ್ ಗೆ 1.00 ಪೈಸೆ ಏರಿಕೆ ಮಾಡಲಾಗಿದೆ. 10,001 – 25,000 ಸಾವಿರ ಲೀಟರ್ ಬಳಕೆಯ ಸ್ಲಾಬ್: ಪ್ರತಿ ಲೀಟರ್‌ ನೀರಿಗೆ 1.30 ಪೈಸೆ ಹೆಚ್ಚಳ 25,001 – 50,000 ಸಾವಿರ ಲೀಟರ್ ಬಳಕೆಯ ಸ್ಲಾಬ್: ಪ್ರತಿ ಲೀಟರ್‌ಗೆ 1.50 ಪೈಸೆ ಏರಿಸಲಾಗಿದೆ. 50,001 – 75,000 ಸಾವಿರ ಲೀಟರ್ ಬಳಕೆಯ ಸ್ಲಾಬ್: ಪ್ರತಿ ಲೀಟರ್‌ಗೆ 1.90 ಪೈಸೆ ಹೆಚ್ಚಿಸಲಾಗಿದೆ. 760001 – 1 ಲಕ್ಷ ಸಾವಿರ ಲೀಟರ್ ಬಳಕೆಯ ಸ್ಲಾಬ್: ಪ್ರತಿ ಲೀಟರ್‌ಗೆ 1.10 ಪೈಸೆ ಹೆಚ್ಚಳ 1 ಲಕ್ಷ ಮತ್ತು ಅದಕ್ಕೂ ಹೆಚ್ಚು ಬಳಕೆ ಸ್ಲಾಬ್: ಪ್ರತಿ ಲೀಟರ್‌ ನೀರಿಗೆ 1.20 ಪೈಸೆ ಹೆಚ್ಚಳವಾಗಿದೆ. ಇಂದಿನಿಂದ ಬೆಂಗಳೂರಿನ ನೀರಿನ ದರ ಶೇ.3ರಷ್ಟು ಏರಿಕೆ ಒಮ್ಮೆಲೆ ದರ ಹೆಚ್ಚಳದ ಮೂಲಕ ಜನರಿಗೆ ಹೊರೆಯಾಗುವದನ್ನು ಕಡಿಮೆ ಮಾಡುವ ಉದ್ದೇಶದಿಂದ ಹಾಗೂ ಕರ್ನಾಟಕ ರಾಜ್ಯ ಆಡಳಿತ ಸುಧಾರಣಾ ಆಯೋಗದ ಶಿಫಾರಸ್ಸಿನಂತೆ ಪ್ರತಿ ವರ್ಷ ಏಪ್ರಿಲ್ ತಿಂಗಳ ಒಂದರಂದು ನೀರಿನ ದರವನ್ನು ಶೇಕಡಾ 3 ರಷ್ಟು ಹೆಚ್ಚು ಮಾಡಲಾಗಿದೆ ಎಂದು ಜಲಮಂಡಳಿ ಅಧ್ಯಕ್ಷರು ಮಾಹಿತಿ ನೀಡಿದ್ದಾರೆ.

Share It

You May Have Missed

You cannot copy content of this page