ಉಪಯುಕ್ತ ಸುದ್ದಿ

ನವಲಗುಂದ: ಬಸಾಪೂರ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಪರದಾಟ

Share It

ನವಲಗುಂದ : ಗ್ರಾಮೀಣ ಪ್ರದೇಶ ಇವತ್ತಿಗೂ ಏನಾದರೂ ಒಂದು ತೊಂದರೆ ಜನರು ಕಾಲ ಕಳೆಯುತ್ತಿದ್ದಾರೆ. ಅಂತಹ ಒಂದು ತಾಜ ಉದಾಹರಣೆ ಕುಡಿಯವ ನೀರಿನ ಶುದ್ದಿಕರಣ ಘಟಕಗಳು ಕಾಯ೯ನಿವ೯ಹಿಸದೆ ಇರುವುದರಿಂದ ನಾಲ್ಕೈದು ಕಿ.ಮೀ ದೂರದ ಚನ್ನಮ್ಮ ಜಲಾಶಯದಿಂದ ಕುಡಿಯುವ ನೀರು ತೆಗೆದುಕೊಂಡು ಬಂದು ನೀರಿನ ದಾಹವನ್ನು ನೀಗಿಸುತ್ತಿದ್ದಾರೆ ಬಸಾಪೂರ ಗ್ರಾಮಸ್ಥರು.

ಬಸಾಪೂರ ಗ್ರಾಮಸ್ಥರು ಅಣ್ಣಿಗೇರಿ ಶಾಶ್ವತ ಕುಡಿಯುವ ನೀರಿನ ಯೋಜನೆಗೆ ಜಮೀನು ನೀಡಿದ್ದರು ಶುದ್ದ ನೀರು ಗ್ರಾಮಕ್ಕೆ ಸಿಗದೆ ಇರುವುದು ವಿಪಯಾ೯ಸವಾಗಿದೆ. ಇದ್ದ ಬಸಾಪೂರ ಗ್ರಾಮದ ಕೆರೆ ಅಭಿವೃದ್ದಿ ಇಲ್ಲದೆ ಪರದಾಡುತ್ತಿದೆ. ಇನ್ನು ಬೋರ್‌ ಇದ್ದರು ಬಳಕೆಗಕೆಕ ಮಾತ್ರ ಇತ್ತೀಚಿಗೆ ಮಳೆಯ ನೀರು ರಾಡಿ ಇರುವುದರಿಂದ ಕುಡಿಯಲು ಯೋಗ್ಯವಿಲ್ಲ

ಇದರಿಂದ ಬಸಾಪೂರ ಗ್ರಾಮ ಹಾಗೂ ನವ ಗ್ರಾಮದ ಜನರು ನಾಲ್ಕೈದು ಕಿ.ಮೀ ದೂರದ ಚನ್ನಮ್ಮನ ಕೆರೆಗೆ ಬಂದು ಶುದ್ದ ಕುಡಿಯುವ ನೀರನ್ನು ತೆಗೆದುಕೊಂಡು ಹೋಗುತ್ತಾರೆ. ಇದಕ್ಕೆ ಶಾಶ್ವತ ಪರಿಹಾರ ಸಿಗುವುದಾದರು ಯಾವಾಗ ಎಂಬುದು ಈ ಭಾಗದ ಜನರ ವಾದವಾಗಿದೆ.

ಸಮೀಪ ಅಣ್ಣಿಗೇರಿ ಶಾಶ್ವತ ಕುಡಿಯುವ ನೀರಿನ ಘಟಕ ಇದ್ದರು ಅಲ್ಲಿ ಬಸಾಪೂರ ಗ್ರಾಮಸ್ಥರು ಕುಡಿಯುವ ನೀರು ತೆಗೆದುಕೊಂಡು ಹೋಗಲು ವ್ಯವಸ್ಥೆಯು ಇಲ್ಲದ ಕಾರಣ ದ್ವಿಚಕ್ರವಾಹನ, ಕೈಗಾಡಿಯಿಂದ ಪ್ರತಿದಿನವು ಕುಡಿಯುವ ನೀರು ತೆಗೆದುಕೊಂಡು ಹೋಗುವುದು ಈ ಬಸಾಪೂರ ಗ್ರಾಮಸ್ಥರ ಗೋಲಾಗಿದೆ.

ಗ್ರಾಮೀಣ ಪ್ರದೇಶದಲ್ಲಿ ಗ್ರಾಮ ಪಂಚಾಯತಿ ಅಧಿಕಾರಿಗಳು ಜವಾಬ್ದಾರಿಯಿಂದ ಕಾಯ೯ನಿವ೯ಹಿಸಿ ಶುದ್ದಿಕರಣ ಘಟಕದಿಂದ ಶುದ್ದ ಕುಡಿಯುವ ನೀರು ಸರಬರಾಜು ಮಾಡಿ ಸಾ‍ವ೯ಜನಿಕರ ತೊಂದರೆಗೆ ಸ್ಪಂದಿಸಬೇಕಾಗಿದೆ. ಇದೇ ರೀತಿ ಮುಂದುವರಿದರೆ ಗ್ರಾಮಸ್ಥರು ಬೀದಿಗೆ ಬಿದ್ದು ಹೋರಾಟ ಮಾಡುವುದರಲ್ಲಿ ಸಂಶಯವಿಲ್ಲ.


Share It

You cannot copy content of this page