ಬೆಂಗಳೂರು: ಅಹಿಂದ ಪರ ಎಂದುಕೊಂಡೇ ದಲಿತ ವಿರೋಧಿ ನಡೆ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿ, ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜಭವನಕ್ಕೆ ಚಲೋ ನಡೆಸಲು ಚಾಮರಾಜನಗರ ಜಿಲ್ಲೆಯ ದಲಿತ ಸಂಘಟನೆಗಳು ತೀರ್ಮಾನಿಸಿವೆ.
ಎಸ್ ಸಿ /ಎಸ್ ಟಿಪಿ ಅನುದಾನವನ್ನು ಬೇರೆ ಯೋಜನೆಗಳಿಗೆ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಆ ಮೂಲಕ ದಲಿತರ ಪರ ಎಂದು ಕರೆದುಕೊಳ್ಳುವ ಸಿದ್ದರಾಮಯ್ಯ ಅವರು, ದಲಿತರಿಗೆ ಮೋಸ ಮಾಡುತ್ತಿದ್ದಾರೆ. ಹೀಗಾಗಿ, ರಾಜಭವನ ಚಲೋ ಮೂಲಕ ದಲಿತರಿಗೆ ನ್ಯಾಯ ಒದಗಿಸಲು ಮನವಿ ಸಲ್ಲಿಸಲು ತೀರ್ಮಾನಿಸಿರುವುದಾಗಿ ತಿಳಿಸಿದ್ದಾರೆ.
ನೆನ್ನೆ ಚಾಮರಾಜನಗರ ಆಲೂರಿಗೆ ಸಿಎಂ ಸಿದ್ದರಾಮಯ್ಯ ಭೇಟಿ ನೀಡಿದ್ದರು. ಈ ವೇಳೆ ಇದೇ ವಿಚಾರವಾಗಿ ಚರ್ಚಿಸಲು ದಲಿತ ಮುಖಂಡರು ಕಾಯ್ದು ಕುಳಿತಿದ್ದರು. ಆದರೆ, ಸಿದ್ದರಾಮಯ್ಯ ಕಾರು ನಿಲ್ಲಸದೆ, ಆ ಕಡೆಗೆ ತಿರುಗಿಯೂ ನೋಡದೆ ಹೋದರು. ಇದರಿಂದ ಆಕ್ರೋಶಗೊಂಡ ದಲಿತ ನಾಯಕರು ಸಿಎಂ ವಿರುದ್ಧ ಇಂತಹದ್ದೊಂದು ತೀರ್ಮಾನಕ್ಕೆ ಬಂದಿದ್ದಾರೆ.
ಸಿದ್ದರಾಮಯ್ಯ ಭೇಟಿ ಸಂಬಂಧ ದಲಿತ ನಾಯಕರು ಎಸ್ ಪಿ ಮತ್ತು ಜಿಲ್ಲಾಧಿಕಾರಿಗೆ ಮಾಹಿತಿ ನೀಡಿದ್ದರು. ಅಧಿಕಾರಿಗಳು ವಿಷಯವನ್ನು ಸಿದ್ದರಾಮಯ್ಯ ಅವರಿಗೂ ತಿಳಿಸಿದ್ದರು. ಆದರೂ, ದಲಿತ ಸಂಘಟನೆಗಳ ಮನವಿ ಪಡೆಯದೆ ಸಿಎಂ ಉಡಾಫೆಯಿಂದ ಹೋದರು ಎಂದು ಆರೋಪಿ ಮಾಡಲಾಗಿದೆ.
ಈ ಹಿನ್ನೆಲೆಯಲ್ಲಿ ರೊಚ್ಚಿಗೆದ್ದ ಸಂಘಟನೆಗಳ ಮುಖಂಡರು, ಚಾಮರಾಜನಗರದಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ಕಪ್ಪುಪಟ್ಟಿ ಪ್ರದರ್ಶನದ ಮೂಲಕ ಆಕ್ರೋಶ ಹೊರಹಾಕಿದ್ದರು. ಇದೀಗ ಜಿಲ್ಲೆಯ ದಲಿತ ಸಂಘಟನೆಗಳ ಒಕ್ಕೂಟದಿಂದ ಪಾದಯಾತ್ರೆ ನಡೆಲು ತೀರ್ಮಾನಿಸಲಾಗಿದೆ.
