ಆರೋಗ್ಯ ಸುದ್ದಿ

ಉತ್ತಮ ಆರೋಗ್ಯಕ್ಕಾಗಿ ಬಾದಾಮಿ ತಿನ್ನಿ

Share It

ಆಧುನಿಕ ಜಗತ್ತಿನೊಂದಿಗೆ ಓಡುತ್ತಿರುವ ನಮಗೆಲ್ಲ ಯಾವುದಕ್ಕೂ ಸಮಯವೇ ಇಲ್ಲವಾಗಿದೆ. ಜಗತ್ತು ಆಧುನಿಕತೆಯೊಂದಿಗೆ ಬಹಳ ವೇಗವಾಗಿ ಓಡುತ್ತಿದೆ, ಈ ಕಾರಣಕ್ಕೆ ನಾವೇಲ್ಲರೂ ಕೂಡ ವೇಗಕ್ಕೆ ತಕ್ಕಂತೆ ಓಡಲೆಬೇಕಾಗಿದೆ. ಇದು ಅನಿವಾರ್ಯ ಕೂಡ.

ಆದರೆ ಈ ದಾವಂತದ ಜೀವನದಲ್ಲಿ ನಮ್ಮನ್ನು ನಾವು ಅಂದರೆ ನಮ್ಮ ಕಾಳಜಿ ಬಗ್ಗೆ ಕೂಡ ಮರೆಯಬಾರುದು ಮರೆತರೆ ಜೀವನವೇ ಕಷ್ಟವಾಗುತ್ತದೆ.

ಈ ಓಟದ ಜೀವನದಲ್ಲಿ ಒಂದಷ್ಟು ಒಳ್ಳೆಯ ಅಭ್ಯಾಸಗಳನ್ನು ಇಟ್ಟುಕೊಳ್ಳುವುದು ಒಳ್ಳೆಯದು ,ಆಹಾರದ ವಿಚಾರದಲ್ಲಿ ದೇಹ ಮೇಲಿನ ನಿಂಯAತ್ರಣದಲ್ಲಿ ಎಲ್ಲವುದನ್ನು ಸರಿದೂಗಿಸಿಕೊಂಡು ಹೋಗಬೇಕು. ಆರೋಗ್ಯಯುತ ಬದುಕಿಗೆ ಬಾದಾಮಿಯನ್ನು ತಿನ್ನುವುದನ್ನು ಅಳವಡಿಸಿಕೊಂಡೆ ಇನ್ನೂ ಉತ್ತಮ.

ಪ್ರತಿದಿನದ ಚಟುವಟಿಕೆಯಲ್ಲಿ ಪ್ರತಿದಿನ ಬಾದಾಮಿಯನ್ನು ಸೇವಿಸಿ ನೋಡಿ ಆರೋಗ್ಯದಲ್ಲಿಎಂತಹ ಬದಲಾವಣೆಯಾಗುತ್ತದೆ ಎಂದು ತಿಳಿಯಬಹುದು. ಯಾವ ಯಾವ ಕುರುಕುಲು ತಿಂಡಿ ತಿನ್ನುವ ಅಭ್ಯಾಸ ಬಿಟ್ಟು ಬಾದಾಮಿಯನ್ನು ತಿಂದರೆ ಆರೋಗ್ಯಕ್ಕೆ ಬಹಳ ಉತ್ತಮ.

ಬಾದಾಮಿ ರುಚಿಕರ ಮಾತ್ರವಲ್ಲದೆ, ಚರ್ಮ, ಕೂದಲು ಆರೈಕೆಗೆ ಸೂಕ್ತವಾದುದದ್ದಾಗಿದೆ. ಪ್ರತಿದಿನ ರಾತ್ರಿ ಬಾದಾಮಿಯನ್ನು ನೆನೆಸಿಟ್ಟು ಬೆಳಗ್ಗೆ ಸಿಪ್ಪೆ ತೆಗೆದು ತಿಂದರೆ ಇನ್ನು ಉತ್ತಮ, ಇಲ್ಲ ಪ್ರತಿದಿನ ದಿನಕ್ಕೆ ಒಂದು ಮುಷ್ಟಿಯಷ್ಟು ಬಾದಾಮಿಗಳನ್ನು ತಿನ್ನುವ ಅಭ್ಯಾಸ ಮಾಡಿಕೊಂಡರೆ ಒಳ್ಳೆಯದು. ಸಮಯ ಸಿಕ್ಕಾಗ ಏನನ್ನಾದರು ತಿನ್ನಬೇಕು ಎಂದು ಎನ್ನಿಸಿದಾಗ ಬಾದಾಮಿ ತಿನ್ನುವ ಅಭ್ಯಾಸ ಮಾಡಿಕೊಂಡರೆ ಒಳ್ಳೆಯದು.

ಬಾದಾಮಿ ಮಧುಮೇಹಿಗಳು ಹಸಿವು ಹೆಚ್ಚಾದಾಗ ತಿನ್ನಬಹುದು ಮಧುಮೇಹ ಸಮಸ್ಯೆಗೆ ಬಾದಾಮಿ ತುಂಬಾ ಒಳ್ಳೆಯದು.

ಬಾದಾಮಿ ಉಪಯೋಗಗಳು ಹಲವು
ಹೃದಯದ ಆರೋಗ್ಯಕ್ಕೆ ಸೂಕ್ತವಾಗಿದೆ, ಬಾದಾಮಿಯಲ್ಲಿ ಹೇರಳವಾಗಿ ವಿಟಮಿನ್ ಇ ಇದೆ. ರಕ್ತದ ಒತ್ತಡವನ್ನು ಕಡಿಮೆ ಮಾಡುತ್ತದೆ, ರಕ್ತದಲ್ಲಿ ಸಕ್ಕರೆ ಅಂಶವನ್ನು ನಿಯಂತ್ರಣದಲ್ಲಿ ಇಡುತ್ತದೆ. ಮುಖದ ನೆರಿಗೆಯನ್ನು ನಿಯಂತ್ರಿಸುತ್ತದೆ. ನೆನೆಪಿನ ಶಕ್ತಿ ಹೆಚ್ಚಾಗಿಸುತ್ತದೆ. ಏಕಾಗ್ರತೆ ಹೆಚ್ಚಾಗುತ್ತದೆ. ಋತುಚಕ್ರದ ಸಮಯದ ಮೂಡ್ ಸ್ವಿಂಗ್ ಕಡಿಮೆ ಮಾಡುತ್ತದೆ.


Share It

You cannot copy content of this page