ಬೆಂಗಳೂರು : ಭಾರತದಲ್ಲಿ ನಿಧಾನಗತಿಯಲ್ಲಿ ಸಾಕ್ಷರತೆ ಪ್ರಮಾಣ ಹೆಚ್ಚಾಗುತ್ತ ಸಾಗುತ್ತಿದೆ. ಅನೇಕ ಮಂದಿ ಶ್ರೀಮಂತರು ತಮ್ಮ ಮಕ್ಕಳನ್ನು ಮೆಡಿಕಲ್, ಇಂಜಿನಿಯರಿಂಗ್ ಹೀಗೆ ಅನೇಕ ಕೋರ್ಸುಗಳಿಗೆ ಸೇರಿಸುತ್ತಾರೆ. ಆದ್ರೆ ಬಡವರ ಮಕ್ಕಳು ಆರ್ಥಿಕತೆಯ ಕೊರತೆಯಿಂದ ಉನ್ನತ ಶಿಕ್ಷಣದಿಂದ ವಂಚಿತರಾಗಿದ್ದರು.
ಹೀಗ ಸರ್ಕಾರ ಹಾಗೂ ಅನೇಕ ಖಾಸಗಿ ಸಂಸ್ಥೆಗಳು , ಬ್ಯಾಂಕುಗಳು ಸ್ಕಾಲರ್ ಶಿಪ್ ನೀಡಲು ಅವಕಾಶ ನೀಡಿವೆ. ಐಡಿಎಫ್ಸಿ ಬ್ಯಾಂಕ್ ಎಂಬಿಎ ವಿದ್ಯಾರ್ಥಿಗಳಿಗೆ 2 ವರ್ಷಕ್ಕೆ 2 ಲಕ್ಷ ನೀಡುತ್ತದೆ. ಯಾರೆಲ್ಲ ಇದಕ್ಕೆ ಅರ್ಜಿಯನ್ನು ಸಲ್ಲಿಸಬಹುದು ಎಂದು ನೋಡೋಣ ಬನ್ನಿ.
ಈ ಯೋಜನೆಯನ್ನು 2018 ರಲ್ಲಿ ಆರಂಭಿಸಲಾಯಿತು. ಈ ವರೆಗೆ 152 ಕಾಲೇಜಿನ ಸುಮಾರು 1154 ವಿದ್ಯಾರ್ಥಿಗಳು ಈ ಯೋಜನೆಯ ಅನುಕೂಲವನ್ನು ಪಡೆದಿದ್ದಾರೆ.
ಅರ್ಹತೆಗಳು
ಭಾರತೀಯ ಪ್ರಜೆಯಾಗಿರಬೇಕು.
ಕುಟುಂಬದ ಆದಾಯ 6 ಲಕ್ಷಕ್ಕಿಂತ ಕಡಿಮೆ ಇರಬೇಕು.
ಕೆಳಗೆ ನೀಡಲಾದ ಪಟ್ಟಿಯ ಕಾಲೇಜಿನಲ್ಲಿ ಓದುತ್ತಿರಬೇಕು.
2 ವರ್ಷಗಳ ಪೂರ್ಣ ಅವಧಿಯ ಮೊದಲನೇ ವರ್ಷದಲ್ಲಿ ಓದುತ್ತಿರಬೇಕು.
ಮೊಬೈಲ್ ನಂಬರ್ ಆಧಾರ ನೊಂದಿಗೆ ಲಿಂಕ್ ಆಗಿರಬೇಕು.
ಸಲ್ಲಿಸಬೇಕಾದ ದಾಖಲೆಗಳು
ಕಾಲೇಜಿನಲ್ಲಿ ಅಡ್ಮಿಷನ್ ಪಡೆದಿರುವುದಕ್ಕೆ ದಾಖಲೆಯನ್ನು ಒದಗಿಸಬೇಕು.
ಕಾಲೇಜಿಗೆ ಶುಲ್ಕ ಪಾವತಿ ಮಾಡಿದ ರಸೀದಿ.
ಪದವಿಯ ಅಂಕ ಪಟ್ಟಿ
ಆದಾಯ ಪ್ರಮಾಣ ಪತ್ರ
ಕಾಲೇಜಿನ ಪಟ್ಟಿ (https://d2w7l1p59qkl0r.cloudfront.net/static/files/list-of-institutions-idfc-first-bank-mba-scholarship-2024-26.pdf)
ಅರ್ಜಿ ಸಲ್ಲಿಸುವ ವಿಧಾನ
ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ (https://www.buddy4study.com/page/#scholarships)
ಮೊದಲಿಗೆ ಹೆಸರನ್ನು ನೋಂದಣಿ ಮಾಡಿ. ನಂತರ ವೆಬ್ ಸೈಟ್ ನಲ್ಲಿ IDFC FIRST Bank MBA Scholarship 2024-26 ನಲ್ಲಿ ಕ್ಲಿಕ್ ಮಾಡಿ. ಮೊಬೈಲ್ ನಂಬರ್ ಅನ್ನು ಹಾಕಿ. ಪಾಸ್ವರ್ಡ್ ಅನ್ನು ಹಾಕಿ. ಬಳಿಕ ಅದನ್ನು ಪಾಸ್ವರ್ಡ್ ಹಾಕಿ ಲಾಗಿನ್ ಆಗಿ ಅರ್ಜಿಯನ್ನು ಸಲ್ಲಿಸಿ.

