ವಿದ್ಯುತ್ ಸ್ಪರ್ಶದಿಂದ ಚಿರತೆ ಒಂದು ಮೃತಪಟ್ಟಿರುವ ಘಟನೆ ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ ತಾಲೂಕು ಬಂಡಿಹೊಳೆ ಗ್ರಾಮದ ಜಮೀನು ಒಂದರಲ್ಲಿ ನಡೆದಿದೆ.
ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ ತಾಲೂಕು ಬಂಡಿಹೊಳೆ ಗ್ರಾಮದ ರಾಘು ದೇವಸೇಗೌಡ್ರು ಜಮೀನಿನಲ್ಲಿ ಮರ ಹತ್ತುವ ವೇಳೆಯಲ್ಲಿ ಮೋಟಾರ್ ಲೈನ್ ತಂತಿಯು ತಗಲಿ ಮೃತಪಟ್ಟಿದೆ.
ವಿಷಯ ತಿಳಿದ ನಂತರ ಅಕ್ಕಪಕ್ಕ ಗ್ರಾಮಸ್ಥರು ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಭೇಟಿ ನೀಡಿ ಅರಣ್ಯ ಅಧಿಕಾರಿಗಳು ಪರಿಶೀಲಿನೆ ನಡೆಸಿದ್ದಾರೆ.
