ಮತದಾನದ ನಡುವೆ ಕೆಟ್ಟ ಇವಿಎಂ, ಸಿಬ್ಬಂದಿಗೆ ಅನಾರೋಗ್ಯ

Oplus_131072

Oplus_131072

Share It

ನವದೆಹಲಿ: ಪೌರಿ-ಗಢವಾಲ್, ತೆಹ್ರಿ, ಅಲ್ಮೋರಾ, ಹರಿದ್ವಾರ ಮತ್ತು ನೈನಿತಾಲ್ ಸೇರಿದಂತೆ ಉತ್ತರಾಖಂಡ ರಾಜ್ಯದ 5 ಲೋಕಸಭಾ ಕ್ಷೇತ್ರಗಳಿಗೆ ಇಂದು ಮತದಾನ ನಡೆಯುತ್ತಿದೆ. ಆದರೆ, ಮತದಾನ ಆರಂಭವಾಗುತ್ತಿದ್ದಂತೆಯೇ ವಿವಿಧ ಬೂತ್‌ಗಳಿಂದ ಸಮಸ್ಯೆಗಳು ಬೆಳಕಿಗೆ ಬರಲಾರಂಭಿಸಿದವು. ಈ ಮಧ್ಯೆ ರಾಮನಗರ ಜಿಲ್ಲೆಯ ಶಿವಪುರ ಬೈಲಜುಡಿಯಲ್ಲಿ 3 ಮತಗಟ್ಟೆ ಅಧಿಕಾರಿಗಳ ಆರೋಗ್ಯ ಹಠಾತ್ ಹದಗೆಟ್ಟಿತ್ತು.

ಇದಾದ ಬಳಿಕ ಅವರ ಜಾಗಕ್ಕೆ 3 ಹೊಸ ಅಧಿಕಾರಿಗಳನ್ನು ಕರೆಸಲಾಗಿತ್ತು. ಏತನ್ಮಧ್ಯೆ, ಅಲ್ಮೋರಾ ಲೋಕಸಭಾ ಕ್ಷೇತ್ರದ ಬೂತ್ ಸಂಖ್ಯೆ 107 ಖಾತ್ಯಾರಿಯಲ್ಲಿ ಇವಿಎಂ ಯಂತ್ರದ ದೋಷದಿಂದಾಗಿ ಮತದಾನ ತಡವಾಗಿ ಪ್ರಾರಂಭವಾಯಿತು. ಸಲ್ಟ್​ ತಹಸೀಲ್​ನ 3 ಬೂತ್​ಗಳಲ್ಲೂ ಇದೇ ಪರಿಸ್ಥಿತಿ ನಿರ್ಮಾಣವಾಗಿತ್ತು.

ಬಾಲಿವುಡ್ ನಟಿ ಊರ್ವಶಿ ರೌಟೇಲಾ ಅವರು ತಮ್ಮ ಕುಟುಂಬದೊಂದಿಗೆ ಕೋಟ್‌ದ್ವಾರದ ಸಿತಾಬ್‌ಪುರ ಶಾಲೆಯ ಮತಗಟ್ಟೆಗೆ ಮತ ಚಲಾಯಿಸಲು ಆಗಮಿಸಿದರು. ಇದೇ ವೇಳೆ ಅಭಿವೃದ್ಧಿ ಹೆಸರಲ್ಲಿ ಮತ ನೀಡಿ ಎಂದು ಮನವಿ ಮಾಡಿದರು. ಲೋಕಸಭೆಯ ಗರ್ವಾಲ್ ಸಂಸದೀಯ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗಣೇಶ್ ಗೋಡಿಯಾಲ್ ಅವರು ಸರ್ಕಾರಿ ಪ್ರಾಥಮಿಕ ಶಾಲೆ ಭಟ್ಕೋಟ್‌ನಲ್ಲಿರುವ ತಮ್ಮ ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸಿದರು.

ಲೋಕಸಭೆ ಚುನಾವಣೆಯ ಮೊದಲ ಹಂತದಲ್ಲಿ ಉತ್ತರ ಪ್ರದೇಶದಲ್ಲಿ 8, ಪಶ್ಚಿಮ ಬಂಗಾಳದಲ್ಲಿ 3, ಮಹಾರಾಷ್ಟ್ರದಲ್ಲಿ 5, ಛತ್ತೀಸ್‌ಗಢದಲ್ಲಿ ಒಂದು ಮತ್ತು ಮಣಿಪುರದಲ್ಲಿ 2 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ. ತಮಿಳುನಾಡಿನಲ್ಲಿ 39 ಲೋಕಸಭಾ ಸ್ಥಾನಗಳಿದ್ದು, ಇಲ್ಲಿನ ಎಲ್ಲ ಸ್ಥಾನಗಳಿಗೂ ಏಕಕಾಲಕ್ಕೆ ಚುನಾವಣೆ ನಡೆಯುತ್ತಿದೆ. ಇದಲ್ಲದೆ, ಉತ್ತರಾಖಂಡದ ಐದು, ಅರುಣಾಚಲ ಪ್ರದೇಶದ ಎರಡು, ಅಂಡಮಾನ್‌ನ ಒಂದು ಮತ್ತು ಲಕ್ಷದ್ವೀಪದ ಒಂದು ಕ್ಷೇತ್ರಕ್ಕೆ ಮತದಾನ ನಡೆಯುತ್ತಿದೆ.


Share It

You cannot copy content of this page