ಬೆಂಗಳೂರು: ಲಂಚ ಸ್ವೀಕಾರ ಮಾಡುವಾಗ ಅಬಕಾರಿ ಡಿಸಿಯೊಬ್ಬರನ್ನು ಲೋಕಾಯುಕ್ತ ಪೊಲೀಸರು ಬಂಧನ ಮಾಡಿದ್ದಾರೆ.
ಬೆಂಗಳೂರು ಬ್ಯಾಟರಾಯನಪುರ ಅಬಕಾರಿ ಕಚೇರಿಯಲ್ಲಿ ನಡೆದ ದಾಳಿಯ ವೇಳೆ 25 ಲಕ್ಷ ರು. ಲಂಚ ಸ್ವೀಕಾರ ಮಾಡುವಾಗ ಅಬಕಾರಿ ಡಿಸಿ ಜಗದೀಶ್ ನಾಯಕ್ ಅವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.
ಮೈಕ್ರೋ ಬ್ರೇವರಿ, ಸಿಎಲ್ 7 ಲೈಸೆನ್ಸ್ ನೀಡಲು ಸುಮಾರು 75 ಲಕ್ಷ ರು.ಗೆ ಬೇಡಿಕೆಯಿಟ್ಟಿದ್ದರು ಎಂಬ ಆರೋಪ ಕೇಳಿಬಂದಿದೆ. ಅದರ ಮೊದಲ ಕಂತಾಗಿ 25 ಲಕ್ಷ ರು. ಗಳನ್ನು ಇಂದು ಪಡೆಯುವಾಗ ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.
Updating….

