ಸುದ್ದಿ

ಯುವ ರಾಜ್‌ಕುಮಾರ್- ಶ್ರೀದೇವಿ ವಿಚ್ಛೇದನ ಅರ್ಜಿ ವಿಚಾರಣೆ ಮುಂದೂಡಿಕೆ

Share It

ಬೆಂಗಳೂರು: ದೊಡ್ಮನೆ ಕುಡಿ ಯುವರಾಜ್ ಕುಮಾರ್ ವಿವಾಹ ವಿಚ್ಛೇದನ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ನ್ಯಾಯಾಲಯ ಜೂನ್. 24 ಕ್ಕೆ ಮುಂದೂಡಿದೆ.

ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯ ಇಂದು ಯುವರಾಜ್ ಕುಮಾರ್ ಮತ್ತು ಶ್ರೀದೇವಿ ಅವರ ವಿಚ್ಛೇದನ ಅರ್ಜಿಯನ್ನು ಕೈಗೆತ್ತಿಕೊಂಡಿತ್ತು. ವಕೀಲರು ಕೆಲ ತಾಂತ್ರಿಕ ಕಾರಣಗಳನ್ನು ನೀಡಿ ವಿಚಾರಣೆಗೆ ಕಾಲಾವಕಾಶ ಕೋರಿದರು. ಈ ಹಿನ್ನೆಲೆಯಲ್ಲಿ ನ್ಯಾಯಾಲಯ ಜೂನ್. 24 ಕ್ಕೆ ವಿಚಾರಣೆ ಮುಂದೂಡಿಕೆ ಮಾಡಿ ಆದೇಶಿಸಿದೆ.

ಯುವ ಮತ್ತು ಶ್ರೀದೇವಿ ನಡುವೆ ವೈಮನಸ್ಸು ಮೂಡಿದ್ದು, ವಿವಾಹ ವಿಚ್ಛೇದನ ಪಡೆಯಲು ತೀರ್ಮಾನಿಸಿದ್ದಾರೆ. ಈ ನಡುವೆ ವಿಚ್ಛೇದನ ಪಡೆಯಲು ಸಪ್ತಮಿ ಗೌಡ ಜತೆಗಿನ ಸಂಬಂಧ ಕಾರಣ ಎಂಬ ಆರೋಪ ಮಾಡಿದ್ದ ಶ್ರೀದೇವಿ ವಿವಾದ ಸೃಷ್ಟಿಸಿದ್ದರು. ಜತೆಗೆ ಸಪ್ತಮಿ ಗೌಡ ಮಾತನ್ನಾಡಿದ್ದಾರೆ ಎಂಬ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿ ಸಂಚಲನ ಮೂಡಿಸಿತ್ತು.

ಧನ್ಯವಾದ ತಿಳಿಸಿದ ಶ್ರೀದೇವಿ: ಈ ನಡುವೆ ವಿದೇಶದಲ್ಲಿ ನೆಲೆಸಿದ್ದ, ಶ್ರೀದೇವಿ ವಿಚ್ಛೇದನ ಕ್ಕೆ ಸಂಬಂಧಿಸಿದ ಪ್ರಕ್ರಿಯೆಗಳಿಗೆ ಬೆಂಗಳೂರಿಗೆ ಆಗಮಿಸಿದ್ದರು ಎನ್ನಲಾಗಿದೆ. ಆದರೆ, ಯಾರಿಗೂ ಮಾಹಿತಿ ಇರಲಿಲ್ಲ. ಇದೀಗ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ನನ್ನ ಖಾಸಗಿತನ ಗೌರವಿಸಿದ ಮಾಧ್ಯಮ ಹಾಗೂ ದೊಡ್ಮನೆ ಅಭಿಮಾನಿಗಳಿಗೆ ಧನ್ಯವಾದಗಳು ಎಂದು


Share It

You cannot copy content of this page