ಹಾಸನ: ಮೊಬೈಲ್ ಕದ್ದ ಆರೋಪದಲ್ಲಿ ಅಪರಿಚಿತ ಯುವಕನ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿದ ಆರೋಪದಲ್ಲಿ ಹಾಸನದ ಪೊಲೀಸ್ ಪೇದೆ ಸೇರಿ ಮೂವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಶನಿವಾರ ರಾತ್ರಿ ಮೆಡಿಕಲ್ ಕಾಲೇಜಿನ ಯುವಕನೊಬ್ಬನ ಮೇಲೆ ಮೊಬೈಲ್ ಕದ್ದ ಆರೋಪದಲ್ಲಿ ನಡೆಸಿದ್ದರು. ಕೋಲು ಮತ್ತು ಕಾಲುಗಳಿಂದ ಒದ್ದು ಅಮಾನುಷವಾಗಿ ಥಳಿಸಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ಹಾಸನ ಪೊಲೀಸರು, ಪೊಲೀಸ್ ಪೇದೆ ವಟಗಿ, ಸೆಕ್ಯೂರಿಟಿ ಸೂಪರ್‌ವೈಸರ್ ಮತ್ತು ಸೆಕ್ಯುರಿಟಿ ಗಾರ್ಡ್ ಪ್ರಕಾಶ್ ಎಂಬುವವರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.
Updating…