ಉಪಯುಕ್ತ ಸುದ್ದಿ

ಇರಾನ್ ಯುದ್ಧ ಭೀತಿ: ಪ್ರವಾಸಿಗರ ನೆರವಿಗೆ ಧಾವಿಸಿದ ಕರ್ನಾಟಕ ಸರ್ಕಾರ

Share It

ಬೆಂಗಳೂರು: ಯುದ್ಧದ ಸನ್ನಿವೇಶದಲ್ಲಿ ಭಾರತದಿಂದ ವಾಪಸ್ಸಾಗಲು ತೊಂದರೆ ಅನುಭವಿಸುತ್ತಿರುವ ವಿದೇಶಿ ಪ್ರವಾಸಿಗರ ಅನುಕೂಲಕ್ಕಾಗಿ ಕರ್ನಾಟಕ ಸರಕಾರ ಸಹಾಯವಾಣಿಯನ್ನು ತೆರೆದಿದೆ.

ಯುದ್ಧದ ಸನ್ನಿವೇಶದಿಂದಾಗಿ ಅಂತರರಾಷ್ಟ್ರೀಯ ಪ್ರಯಾಣದಲ್ಲಿ ಅನಿಶ್ಚಿತತೆ ಉಂಟಾಗಿದ್ದು ಹಾಗೂ ಈ ಕಾರಣದಿಂದಾಗಿ ಪ್ರಯಾಣದ ಅಡಚಣೆ ಎದುರಿಸುತ್ತಿರುವ ಮತ್ತು ಪ್ರಸ್ತುತ ಕರ್ನಾಟಕದಲ್ಲಿರುವ ವಿದೇಶಿ ಪ್ರವಾಸಿಗರು ಯಾವುದೇ ನೆರವಿಗಾಗಿ ಅಥವಾ ವೀಸಾ ಸಂಬಂಧಿತ ಸಮಸ್ಯೆಗಳಿಗಾಗಿ ಇಲಾಖೆನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ನೀಡಿದೆ.

ಇಂತಹ ಸಂಕಷ್ಟದಲ್ಲಿರುವ ವಿದೇಶಿ ಅತಿಥಿಗಳಿಗೆ ವೀಸಾಗಳ ನಿರ್ವಹಣೆ ಮತ್ತು ಅಗತ್ಯ ಸಹಾಯವನ್ನು ಒದಗಿಸಲು ಪ್ರವಾಸೋದ್ಯಮ ಇಲಾಖೆಯು ಸನ್ನದ್ಧವಾಗಿದೆ,” ಎಂದು ರಾಜ್ಯ ಪ್ರವಾಸೋದ್ಯಮ ಸಚಿವರು ಎಚ್.ಕೆ. ಪಾಟೀಲ್ ಅವರು ತಿಳಿಸಿದ್ದಾರೆ.

ವಿದೇಶಿ ಪ್ರವಾಸಿಗರು ಅಥವಾ ಅಂಥವರ ಸಂಪರ್ಕಕ್ಕೆ ಬಂದವರು ಸಂಪರ್ಕಿಸಬೇಕಾದ ಮಾಹಿತಿಯ ವಿವರಗಳು ಇಂತಿದ್ದು, ಕಚೇರಿ ಕಾರ್ಯನಿರ್ವಹಿಸುವ ಸಮಯ: ಬೆಳಿಗ್ಗೆ 5:30 ರಿಂದ ರಾತ್ರಿ 10:00 ಗಂಟೆಯವರೆಗೆ ದೂರವಾಣಿ ಸಂಖ್ಯೆ: 89706 50021 ಕ್ಕೆ ಸಂಪರ್ಕಿಸಬಹುದು. ಅಥವಾ ಎಚ್.ಪಿ. ಜನಾರ್ಧನ, ಜಂಟಿ ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಕರ್ನಾಟಕ ಸರ್ಕಾರ, ಮೊಬೈಲ್ ಸಂಖ್ಯೆ: +91 96119 21927 ಇವರನ್ನು ಸಂಪರ್ಕಿಸಬಹುದು.


Share It

You cannot copy content of this page