ಅಪರಾಧ ಸುದ್ದಿ

ಭ್ರೂಣ ಲಿಂಗ ಪತ್ತೆ, ಆಸ್ಪತ್ರೆಗೆ ಕಂಟಕ

Share It

ತುಮಕೂರು : ಪ್ರಸವ ಪೂರ್ವ ಮತ್ತು ಗರ್ಭ ಪೂರ್ವ ಭ್ರೂಣ ಲಿಂಗ ಪತ್ತೆ (ಪಿಸಿ ಅಂಡ್ ಪಿಎನ್ ಡಿಟಿ ) ಕಾಯ್ದೆ ಉಲ್ಲಂಘನೆಯಡಿ ಜಿಲ್ಲೆಯ ತುರುವೇಕೆರೆ ತಾಲೂಕಿನ ಓಂಕಾರ್ ಆಸ್ಪತ್ರೆ ಮೇಲೆ ನ್ಯಾಯಾಲಯ ದಾವೆ ಹೂಡಲು ಸಮಿತಿ ನಿರ್ಧರಿಸಿತು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಕಚೇರಿಯಲ್ಲಿ  ಜರುಗಿದ ಪಿಸಿ ಅಂಡ್ ಪಿಎನ್ ಡಿಟಿ ಜಿಲ್ಲಾ ಮಟ್ಟದ ಸಲಹಾ ಸಮಿತಿ ತುರ್ತು ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು. 

ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳ ದೂರಿನ ಅನ್ವಯ ಕಳೆದ ಜೂನ್ 26 ರಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಆಡಿ. ಡಿ.ಎನ್. ಮಂಜುನಾಥ್, ಜಿಲ್ಲಾ ತಪಾಸಣಾ ಮತ್ತು ಸಮಿತಿ ಸದಸ್ಯರು ಓಂಕಾರ್ ಆಸ್ಪತ್ರೆಗೆ ಭೇಟಿ ನೀಡಿದಾಗ ಪಿಸಿ ಅಂಡ್ ಪಿಎನ್ ಡಿಟಿ ಕಾಯ್ದೆ ಉಲ್ಲಂಘನೆ ಆಗಿರುವುದನ್ನು ಪರಿಶೀಲಿಸಿ ಸ್ಕ್ಯಾನಿಂಗ್
ಯಂತ್ರವನ್ನು ಸೀಜ್ ಮಾಡಲಾಗಿತ್ತು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಮಂಜುನಾಥ್ ಮಾತನಾಡಿ ಸ್ಕ್ಯಾನಿಂಗ್ ಕೇಂದ್ರಗಳಲ್ಲಿ ರೆಫೆರಲ್ ಸ್ಲಿಪ್ ಹಾಗೂ ವೈದ್ಯರ ಹೆಸರು ಇಲ್ಲದಿದ್ದರೆ ಪಿಸಿ ಅಂಡ್ ಪಿಎನ್ ಡಿಟಿ ಕಾಯ್ದೆಯ ಉಲ್ಲಂಘನೆ ಎಂದು ಪರಿಗಣಿಸಲಾಗುವುದು. ಎಲ್ಲಾ ಸ್ಕ್ಯಾನಿಂಗ್ ಕೇಂದ್ರಗಳಲ್ಲಿ ರೆಫೆರಲ್ ಸ್ಲಿಪ್ ಹಾಗೂ ವೈದ್ಯರ ಹೆಸರು ಹೊಂದಿರುವುದು ಕಡ್ಡಾಯವಾಗಿರುತ್ತದೆ.

ಈ ದಾಖಲೆಗಳನ್ನು ಪರಿಶೀಲನ ಸಮಯದಲ್ಲಿ ಒದಗಿಸದ ಓಂಕಾರ್ ಆಸ್ಪತ್ರೆ ಮೇಲೆ ಪಿಸಿ ಅಂಡ್ ಪಿ ಎನ್ ಡಿಟಿ ಕಾಯ್ದೆ ಉಲ್ಲಂಘನೆಯಡಿ ಕಾನೂನು ರೀತ್ಯ ಕ್ರಮ ಕೈಗೊಳ್ಳಲು ನ್ಯಾಯಾಲಯ ದಾವೆ ಹೂಡಲಾಗುವುದು ಎಂದು ಹೇಳಿದರು.

ಜಿಲ್ಲಾ ಆಸ್ಪತ್ರೆಯ ಡಾ. ಲೋಕೇಶ್ ರೆಡ್ಡಿ, ಸದಸ್ಯರಾದ ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ: ರೇಖಾ, ಸಮಾಜ ಸೇವಕಿ ಮಲ್ಲಿಕಾ ಜಿ., ವಕೀಲ ಎಂ ಎನ್ ಕುಮಾರಸ್ವಾಮಿ, ವಾರ್ತಾ ಇಲಾಖೆಯ ರೂಪಕಲಾ, ರಾಣಿ ಚಂದ್ರಶೇಖರ್ ಸೇರಿದಂತೆ ಮತ್ತಿತರರು ಹಾಜರಿದ್ದರು.


Share It

You cannot copy content of this page