ರಾಜಕೀಯ ಸುದ್ದಿ

ಎಚ್‌ಡಿಕೆ-ಪ್ರೀತಂ ಗೌಡ ಜಟಾಪಟಿ: ಜೆಡಿಎಸ್ ಅಂತ್ಯಕ್ಕೆ ಬಿಜೆಪಿ ಹೈಕಮಾಂಡ್ ಹೂಡಿರುವ ಹೊಸ ಆಟ

Share It

ಬೆಂಗಳೂರು: ಮಂಡ್ಯ ತಲುಪುತ್ತಿದ್ದಂತೆ ಜೆಡಿಎಸ್ ಮತ್ತು ಬಿಜೆಪಿಯ ಪ್ರೀತಂ ಗೌಡ ಬೆಂಬಲಿಗರ ನಡುವೆ ಕುಸ್ತಿ ತಾರಕಕ್ಕೇರಿದೆ. ಇದು ಜೆಡಿಎಸ್ ಅಳಿವಿಗೆ ಉರುಳಿಸಿರುವ ದಾಳ ಎಂಬ ಮಾತು ರಾಜಕೀಯ ರಂಗದ್ದು.

ತಮ್ಮ ಕುಟುಂಬದ ಸರ್ವನಾಶಕ್ಕೆ ಸ್ಕೆಚ್ ಹಾಕಿದವರ ಜತೆ ನಾನ್ ವೇದಿಕೆ ಹಂಚಿಕೋಬೇಕಾ ಎಂಬ ಕಾರಣ ನೀಡಿ ಕೇಂದ್ರ ಮಂತ್ರಿ ಕುಮಾರಸ್ವಾಮಿ ಮೈತ್ರಿ ಪಾದಯಾತ್ರೆಗೆ ಮೊದಲು ವಿರೋಧ ವ್ಯಕ್ತಪಡಿಸಿದ್ದರು. ಆದರೆ, ಅದೇನು ಅನಿವಾರ್ಯವೋ ಏನೋ ಮತ್ತೇ, ಅವರು ಪಾದಯಾತ್ರೆಯ ಭಾಗವಾಗಿದ್ದಾರೆ.

ಮೊದಮೊದಲಿಗೆ ಎಲ್ಲವೂ ಚೆನ್ನಾಗಿಯೇ ನಡೆದು ಪಾದಯಾತ್ರೆ ಮಂಡ್ಯ ತಲುಪುತ್ತಿದ್ದಂತೆ, ಎಚ್.ಡಿ.ಕೆ. ವಿರುದ್ಧ ಪ್ರೀತಂ ಗೌಡ ಬೆಂಬಲಿಗರು ಎಂದುಕೊಂಡ ಬಿಜೆಪಿಯ ಕಾರ್ಯಕರ್ತರು ಖ್ಯಾತೆ ತೆಗೆದಿದಿದ್ದಾರೆ. ಬ್ಯಾನರ್ ಕೀಳುವ, ಬೆಂಕಿ ಹಚ್ಚುವ ನಾಟಕಗಳು ಜೋರಾಗಿ ನಡೆದಿದೆ. ಇದು ಮುಂದೆ ಮತ್ತಷ್ಟು ಹೆಚ್ಚಾಗುತ್ತಲೇ ಹೋಗುವ ಸಾಧ್ಯತೆಗಳಿವೆ.

ಬಿಜೆಪಿ ಒಕ್ಕಲಿಗ ನಾಯಕತ್ವಕ್ಕೆ ಪರ್ಯಾಯ ನಾಯಕತ್ವ ಹುಡುಕುವ ಕೆಲಸವನ್ನು ಬಲುದಿನದಿಂದಲೇ ಮಾಡುತ್ತಿದೆ. ಅದರ ಭಾಗವಾಗಿ ಅಶೋಕ್, ಅಶ್ವತ್ಥ ನಾರಾಯಣ್, ಸಿ.ಟಿ.ರವಿ ಆಗಾಗ ಗೌಡರ ಕುಟುಂಬದ ಮೇಲೆ ಸದ್ದು ಮಾಡುತ್ತಿದ್ದರು. ಆದರೆ ಗೆದ್ದು ತೋರುವ ತಾಕತ್ತು ಕಾಣಿಸಲಿಲ್ಲ. ಹೀಗಾಗಿ, ಆ ಆಟದಲ್ಲಿ ಅವರು ಸೋತು, ತೆರೆಗೆ ಸರಿದಿದ್ದಾರೆ.

ಆದರೆ, ಪ್ರೀತಂ ಗೌಡ ಗೌಡರ ಕೋಟೆಯಲ್ಲಿ ಅವರ ವಿರುದ್ಧ ಸೆಡ್ಡು ಹೊಡೆದು ಗೆದ್ದು ಬಂದವರು. ಹಾಸನದಲ್ಲಿ ಮೊದಲ ಬಾರಿಗೆ ಬಿಜೆಪಿ ಬಾವುಟ ಹಾರಿಸಿದವರು. ಜತೆಗೆ, ಹಂತಹಂತವಾಗಿ ಹಾಸನದಲ್ಲಿ ದೇವೇಗೌಡರ ಕುಟುಂಬಕ್ಕೆ ಹಳ್ಳ ತೋಡಿದವರು. ಪೆನ್ ಡ್ರೈವ್ ಪ್ರಕರಣದ ಮೂಲಕ ರೇವಣ್ಣ ಕುಟುಂಬದ ರಾಜಕೀಯ ಜೀವನ ಮುಗಿಸಿದವರು‌. ಹೀಗಾಗಿ, ಜೆಡಿಎಸ್ ಸರ್ವಮಾಶಕ್ಕೆ ಈತನೇ ಸರಿಯಾದ ದಾಳ ಎಂದು ಹೈಕಮಾಂಡ್ ತೀರ್ಮಾನಿಸಿದೆ.

ಹೀಗಾಗಿಯೇ, ಕೇಂದ್ರದಲ್ಲಿ ಅಧಿಕಾರ ಕೊಟ್ಟು ಮೈತ್ರಿ ಪಕ್ಷವಾಗಿ ಮಾಡಿಕೊಂಡಿದ್ದರೂ ಸಹ ಪ್ರೀತಂ ಗೌಡಗೆ ಪಾದಯಾತ್ರೆಯಲ್ಲಿ ಪ್ರಮುಖ ಪಾತ್ರ ನೀಡಲಾಗಿದೆ. ಕುಮಾರಸ್ವಾಮಿ ವಿರೋಧದ ನಡುವೆಯೂ ಪ್ರೀತಂ ಗೌಡ ಮೂಡ ಯಾತ್ರೆಯ ಮಾಡೆಲ್ ಆಗಿದ್ದಾರೆ. ಹೀಗಾಗಿಯೇ, ಕಾರ್ಯಕರ್ತರು, ಬೆಂಬಲಿಗರ ಮೂಲಕ ಕಿತ್ತಾಟ ಹೆಚ್ಚಿಸುವ ಆ ಮೂಲಕ ಮಂಡ್ಯದಲ್ಲಿಯೂ ಗೌಡರ ಕುಟುಂಬದ ಗತ್ತು ಕುಂದಿಸುವ ಪ್ರಯತ್ನ ನಡೆಯುತ್ತಿದೆ.

ಬಿಜೆಪಿ ದೇಶದಲ್ಲಿ ಮೈತ್ರಿ ಮಾಡಿಕೊಂಡ ಬಹುತೇಕ ಸಣ್ಣ ಪಕ್ಷಗಳು ಸರ್ವನಾಶವಾಗಿದ್ದು ಇದೇ ರೀತಿ. ಪಕ್ಷ ವಿರೋಧ ಬಿಟ್ಟು, ವ್ಯಕ್ತಿ ವಿರೋಧಕ್ಕೆ ಅಂಟಿಕೊಂಡು ಅಸ್ತಿತ್ವ ಕಳೆದುಕೊಂಡ ಅನೇಕ ಪ್ರಾದೇಶಿಕ ಪಕ್ಷಗಳಿವೆ. ಅದೇ ಸಾಲಿಗೆ ಜೆಡಿಎಸ್ ಅನ್ನು ಸೇರಿಸುವುದು ಬಿಜೆಪಿಯ ತಂತ್ರಗಾರಿಕೆ. ಅದರ ಅರಿವಾಗಿಯೇ ಮೊದಲಿಗೆ ಕುಮಾರಸ್ವಾಮಿ ಇದೆಲ್ಲ ಬೇ ಎಂದಿದ್ದು.

ಜೆಡಿಎಸ್ ಪ್ರಾಬಲ್ಯದ ಜಿಲ್ಲೆಗಳಲ್ಲಿ ನಡೆಯುತ್ತಿರುವ ಪಾದಯಾತ್ರೆಗೆ ಬಿಜೆಪಿಗೆ ಏಕೆ ಫೋಕಸ್ ಕೊಡಬೇಕು ಎಂಬ ಆಸೆ ಅವರಿಗಿತ್ತು. ಆದರೆ, ಹೈಕಮಾಂಡ್ ಒತ್ತಾಸೆ, ಒತ್ತಡ ಅವರನ್ನು ಮತ್ತೇ ಮಂಡಿಯೂರುವಂತೆ ಮಾಡಿದೆ.

ಹೀಗಾಗಿ, ಪ್ರೀತಂ ಗೌಡ ಎಂಬ ನೆನ್ನೆ ಮೊನ್ನೆ ರಾಜಕೀಯಕ್ಕೆ ಬಂದ ನಾಯಕನೊಡನೆ ಹೋರಾಡುವ ಅನಿವಾರ್ಯತೆಯನ್ನು ಸೃಷ್ಟಿ ಮಾಡಲಾಗಿದೆ. ಇದು ಗೌಡರ ಕುಟುಂಬದ ರಾಜಕಾರಣದ ಅಂತ್ಯಕ್ಕೆ ಬಿಜೆಪಿ ಹೈಕಮಾಂಡ್ ಹೂಡಿರುವ ಹೊಸ ಆಟ ಎನ್ನಬಹುದು.


Share It

You cannot copy content of this page