ರಾಜಕೀಯ ಸುದ್ದಿ

ಅಂತಿಮ ಸುತ್ತಿನ ಲೋಕಸಭಾ ಚುನಾವಣೆ: ಬೆಳಗ್ಗೆ 11 ಗಂಟೆಯವರೆಗೆ ಶೇ.26.30 ರಷ್ಟು ಮತದಾನ

Share It

ನವದೆಹಲಿ: ದೇಶದ 2024 ರ ಲೋಕಸಭಾ ಚುನಾವಣೆಯ 7ನೇ ಹಾಗೂ ಕೊನೆಯ ಹಂತದ ಮತದಾನದಲ್ಲಿ ಬೆಳಗ್ಗೆ 11 ಗಂಟೆಯವರೆಗೆ ಶೇ.26.30 ರಷ್ಟು ಮತದಾನ ನಡೆದಿದೆ ಎಂದು ಕೇಂದ್ರ ಚುನಾವಣಾ ಆಯೋಗ ಮಾಹಿತಿ ನೀಡಿದೆ.

ಉತ್ತರ ಪ್ರದೇಶದ 13, ಪಂಜಾಬ್ ನ 13, ಪಶ್ಚಿಮ ಬಂಗಾಳದ 9, ಬಿಹಾರದ 8, ಒಡಿಶಾದ 6, ಹಿಮಾಚಲ ಪ್ರದೇಶದ 4, ಜಾರ್ಖಂಡ್ ನ 3 ಹಾಗೂ ಚಂಡೀಗಡದ 1 ಲೋಕಸಭಾ ಕ್ಷೇತ್ರದಲ್ಲಿ ಮತದಾನ ಬಿರುಸಿನಿಂದ ಸಾಗಿದೆ. ಇಂದು ಸಂಜೆ 6 ಗಂಟೆಗೆ 57 ಲೋಕಸಭಾ ಕ್ಷೇತ್ರಗಳ ಚುನಾವಣೆಗೆ ಮತದಾನ ಅಂತ್ಯವಾಗಲಿದೆ.

ಈ ಮೂಲಕ ದೇಶದ 543 ಲೋಕಸಭಾ ಕ್ಷೇತ್ರಗಳ ಚುನಾವಣೆಗೆ ಇಂದು ಸಂಜೆ ಮತದಾನ ಕಾರ್ಯ ಮುಕ್ತವಾಗಲಿದೆ. ಜೂನ್ 4 ರಂದು 543 ಕ್ಷೇತ್ರಗಳ ಚುನಾವಣಾ ಫಲಿತಾಂಶ ಪ್ರಕಟಿಸಲು ಮತ ಎಣಿಕೆ ನಡೆಯಲಿದೆ.


Share It

You cannot copy content of this page