ಬೆಂಗಳೂರು: ಬೆಂಗಳೂರು ವ್ಯಾಪ್ತಿಯ ಅನಧಿಕೃತ ಬ್ಯಾನರ್?ಗಳ ಮಟ್ಟಹಾಕಲು ಬಿಬಿಎಂಪಿ ಹಾಗೂ ಬೆಂಗಳೂರು ಪೊಲೀಸ್ ಇಲಾಖೆ ಜಂಟಿ ಕಾರ್ಯಾಚರಣೆಗೆ ಮುಂದಾಗಿತ್ತು. ಈ ಬಗ್ಗೆ ಇತ್ತೀಚೆಗೆ ಸಭೆ ನಡೆಸಿ ಕ್ರಮಕ್ಕೆ ಮುಂದಾಗಿತ್ತು. ಆದರೆ ಈಗ ಪೊಲೀಸ್ ಇಲಾಖೆ ನಿರ್ವಹಿಸುವ ಗೃಹ ಸಚಿವರ ಮನೆ ಸುತ್ತಮುತ್ತಲೇ ಫ್ಲೆಕ್ಸ್, ಬ್ಯಾನರ್?ಗಳು ರಾರಾಜಿಸುತ್ತಿದ್ದು ಗೃಹ ಸಚಿವ ಪರಮೇಶ್ವರ್ ಅವರ ಹುಟ್ಟುಹಬ್ಬದ ಹಿನ್ನೆಲೆ ಸದಾಶಿವನಗರದ ನಿವಾಸದ ಸುತ್ತಮುತ್ತ ಫ್ಲೆಕ್ಸ, ಬ್ಯಾನರ್ ಹಾಕಲಾಗಿದೆ.
ಫ್ಲೆಕ್ಸ್ ಕಂಟ್ರೋಲ್ ಗೆ ರಾತ್ರಿ ವೇಳೆ ಗಸ್ತು ತಿರುಗಲು ಪಾಲಿಕೆ ಜೊತೆ ಕೆಲ ದಿನಗಳ ಹಿಂದೆ ಖಾಕಿ ಪಡೆ ಸಹ ಕೈ ಜೋಡಿಸಿತ್ತು. ಆದರೆ ಇದೀಗ ಅದೇ ಪೊಲೀಸ್ ಇಲಾಖೆ ನಿರ್ವಹಿಸುವ ಗೃಹ ಸಚಿವರಿಂದಲೇ ರೂಲ್ಸ್ ಬ್ರೇಕ್ ಮಾಡಲಾಗಿದೆ.
ಇತ್ತ ಇದನ್ನು ನೋಡಿದ ಸಾರ್ವಜನಿಕರು ಸೇರಿ ರಾಜಕಾರಣಿಗಳಿಗೆ ಒಂದು ನ್ಯಾಯ, ಜನರಿಗೆ ಮತ್ತೊಂದು ನ್ಯಾಯನಾ? ಎಂದು ಜನಪ್ರತಿನಿಧಿಗಳ ನಡೆಗೆ ಸಾರ್ವಜನಿಕರು ಆಕ್ರೋಶವನ್ನ ವ್ಯಕ್ತಪಡಿಸಿದ್ದಾರೆ.