ಅಪರಾಧ ಸುದ್ದಿ

ಗ್ರಾಮ ಪಂಚಾಯತ್ ಸದಸ್ಯನಿಂದ ಹಲ್ಲೆ: ರೈತ ಆತ್ಮಹತ್ಯೆ

Share It

ಹುಬ್ಬಳ್ಳಿ: ಗ್ರಾಮ ಪಂಚಾಯತಿ ಸದಸ್ಯರು ರೈತನ ಮೇಲೆ ಹಲ್ಲೆ ನಡೆಸಿದ ಕಾರಣಕ್ಕೆ ಆತ ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟ ಘಟನೆ ಹುಬ್ಬಳ್ಳಿಯ ಉಮಚಗಿಯಲ್ಲಿ ನಡೆದಿದೆ.

ಮೃತ ರೈತರನ್ನು ಬೀರಪ್ಪ ಅಂಗಡಿ ಎಂದು ಗುರುತಿಸಲಾಗಿದೆ. ಆತನ ಮೇಲೆ ಹಲ್ಲೆ ನಡೆಸಿದ ಗ್ರಾಮ ಪಂಚಾಯತಿ ಸದಸ್ಯರು, ಅನಂತರ ರೈತನ ವಿರುದ್ದವೇ ದೂರು ನೀಡಿದ್ದರು ಎನ್ನಲಾಗಿದೆ. ಪೊಲೀಸರು ಕರೆ ಮಾಡಿ, ಪೊಲೀಸ್ ಠಾಣೆಗೆ ಬರುವಂತೆ ಸೂಚನೆ ನೀಡಿದ್ದರು.

ಇದರಿಂದ ಭಯಗೊಂಡ ರೈತ ಬೀರಪ್ಪ ತನ್ನ ಹೊಲದಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಕುರಿತು ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದು, ಗ್ರಾಮ ಪಂಚಾಯತಿ ಸದಸ್ಯನ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.


Share It

You cannot copy content of this page