ರಾಮನಗರ: ಸರಕಾರಕ್ಕೆ ಕೋಟ್ಯಂತರ ರುಪಾಯಿ ತೆರಿಗೆ ವಂಚನೆ ಮಾಡುತ್ತಿದ್ದ ಆರೋಪದಲ್ಲಿ ರಾಮನಗರ ಆರ್‌ಟಿಒ ಅಧಿಕಾರಿಯನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.
ರಾಮನಗರ ಪ್ರಾದೇಶಿಕ ಸಾರಿಗೆ ಆಯುಕ್ತ ಶಿವಕುಮಾರ್, ಸಹಾಯಕ ಪ್ರಾದೇಶಿಕ ಸಾರಿಗೆ ಆಯುಕ್ತ ರಚಿತ್ ರಾಮ್ ಮತ್ತು ಬ್ರೋಕರ್ ಸತೀಶ್ ಎಂಬುವವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.
ಸೀಜ್ ಮಾಡಿರುವ ವಾಹನಗಳ ದಾಖಲೆಯನ್ನು ಮರುಸೃಷ್ಟಿ ಮಾಡಿ, ಸರಕಾರಕ್ಕೆ ಕೋಟ್ಯಂತರ ರು. ನಷ್ಟ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಬಗ್ಗೆ ಅನೇಕ ದೂರುಗಳು ಬಂದ ಹಿನ್ನೆಲೆಯಲ್ಲಿ ದಾಳಿ ನಡೆಸಿದ ಲೀಕಾಯುಕ್ತರು, ಮೂವರನ್ನು ಬಂಧಿಸಿದ್ದಾರೆ.
ಬ್ರೋಕರ್ ಸತೀಶ್ ಮನೆಯಲ್ಲಿ ಟ್ಯಾಕ್ಟರ್‌ಗಳಿಗೆ ಸಂಬಂಧಿಸಿದಂತೆ ದಾಖಲೆಗಳನ್ನು ವಶಪಡಿಸಿಕೊಂಡಿರುವ ಲೋಕಾಯುಕ್ತ ಪೊಲೀಸರು, ಪರಿಶೀಲನೆ ನಡೆಸುತ್ತಿದ್ದಾರೆ. ಎರಡು ಸಾವಿರ ಟ್ರಾö್ಯಕ್ಟರ್‌ಗಳ ದಾಖಲೆಗಳನ್ನು ನಕಲಿ ಮಾಡಿ, ವಂಚನೆ ಮಾಡಲಾಗಿದೆ ಎಂಬ ಆರೋಪ ಇವರ ಮೇಲೆ ಕೇಳಿಬಂದಿದೆ.