ಗದಗ: ಲಕ್ಕುಂಡಿಯಲ್ಲಿ ನಡೆಯುತ್ತಿರುವ ಉತ್ಖನನ ವೇಳೆ ನಾಗರ ಕಲ್ಲು ಪತ್ತೆಯಾಗಿದ್ದು, ಗ್ರಾಮಸ್ಥರಲ್ಲಿ ಮತ್ತಷ್ಟು ಕುತೂಹಲಗಳನ್ನು ಮೂಡಿಸಿದೆ.
ಚಾಲುಕ್ಯರ ಕಾಲದ ಏಳು ಹೆಡೆಯ ಸರ್ಪದ ಕಲ್ಲು ಪತ್ತೆಯಾಗಿದ್ದು, ಈ ಹಿಂದೆ ನಿಧಿಯನ್ನು ಸರ್ಪಗಳು ಕಾವಲು ಕಾಯುತ್ತಿವೆ ಎಂಬ ಗ್ರಾಮಸ್ಥರ ನಂಬಿಕೆಗೆ ಇಂಬು ಸಿಕ್ಕಿದೆ. ಅದೇ ರೀತಿಯ ಮತ್ತಿತರ ಕೆಲವು ಕುತೂಹಲಕಾರಿ ವಸ್ತುಗಳು ಸಿಕ್ಕಿದ್ದು, ಸಂಶೋಧನೆ ನಡೆಯಬೇಕಿದೆ.
ಲಕ್ಕುಂಡಿಯಲ್ಲಿ ಮನೆಯೊಂದರ ಪಾಯ ತೆಗೆಯುವಾಗ ಚಿನ್ನ ಸಿಕ್ಕಿದ ಹಿನ್ನೆಲೆಯಲ್ಲಿ ಉತ್ಖನನ ನಡೆಸಲಾಗುತ್ತಿದೆ. ಅಂದಿನಿAದ ಒಂದಲ್ಲ ಒಂದು ಪುರಾತನ ವಸ್ತುಗಳು ಸಿಗುತ್ತಿದ್ದು, ಮುಂದೆ ಮತ್ತಷ್ಟು ಮಹತ್ವದ ಸಂಗತಿಗಳು ಪತ್ತೆಯಾಗಲಿವೆ ಎಂದು ಇತಿಹಾಸ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

