ಹುಬ್ಬಳ್ಳಿ: ಮಹಿಳೆಯೊಬ್ಬರಳನ್ನು ಮೂವರು ಯುವಕರು ಅತ್ಯಾಚಾರ ಮಾಡಿದ್ದು, ಆ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊAಡಿರುವ ಅಮಾನವೀಯ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮೂವರು ಯುವಕರು ಮಹಿಳೆಯನ್ನು ಅಸಭ್ಯವಾಗಿ ಬಟ್ಟೆ ಬಿಚ್ಚಿ, ವಿಕೃತವಾಗಿ ವರ್ತಿಸಿ, ವಿಡಿಯೋ ಮಾಡಿದ್ದು, ಅದನ್ನು ಸೋಷಿಯಲ್ ಮೀಡಯಾದಲ್ಲಿ ಹಂಚಿಕೊAಡಿದ್ದಾರೆ. ಈ ಸಂಬAಧ ಪೊಲೀಸರು, ಸುಮೋಟೋ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ವಿಡಿಯೋ ಆಧರಿಸಿ, ಮಹಿಳೆಯನ್ನು ಪತ್ತೆ ಮಾಡಿರುವ ಪೊಲೀಸರು ಆಕೆಯಿಂದ ದೂರು ಪಡೆದು, ಮೂವರು ಆರೋಪಿಗಳ ವಿರುದ್ಧ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಶಿವಾನಂದ, ಗಣೇಶ ಮತ್ತು ಪ್ರದೀಪ್ ಎಂಬ ಮೂವರನ್ನು ಬಂಧಿಸಿದ್ದಾರೆ.
ಕೆಲ ದಿನಗಳಿಂದ ಹುಬ್ಬಳ್ಳಿಯ ಸಿದ್ಧರೂಢ ಮಠದಲ್ಲಿ ಊಟ ಮಾಡಿಕೊಂಡು, ವಿವಿಧ ಸ್ಥಳದಲ್ಲಿ ತಂಗುತ್ತಿದ್ದ ಮಹಿಳೆಯ ಮೇಲೆ ಅತ್ಯಾಚಾರ ನಡೆದಿದೆ ಎನ್ನಲಾಗಿದೆ. ಈ ಮಹಿಳೆ ಶಿವಮೊಗ್ಗ ಮೂಲದವರು ಎನ್ನಲಾಗಿದ್ದು, ಗಂಡನೊAದಿಗೆ ಜಗಳ ಮಾಡಿಕೊಂಡು ಹುಬ್ಬಳ್ಳಿಗೆ ಬಂದಿದ್ದು, ಹೀಗೆ ಬೀದಿಯಲ್ಲಿ ವಾಸಿಸುತ್ತಿದ್ದಾರೆ ಎನ್ನಲಾಗಿದೆ.
ಆದರೆ, ಆಕೆ ಮಾನಸಿಕವಾಗಿ ಹಾಗೂ ದೈಹಿಕವಾಗಿ ಆರೋಗ್ಯವಾಗಿಯೇ ಇದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ನಡುವೆ ವಿಡಿಯೋ ವೈರಲ್ ಮಾಡಿದ ಯುವಕರನ್ನು ಸ್ಥಳಿಯರೇ ಸೇರಿ ಥಳಿಸಿದ್ದು, ಪೊಲೀಸರಿಗೆ ಒಪ್ಪಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

