ಇಂದಿನಿಂದ ಗ್ಯಾಸ್, ಪೆಟ್ರೊಲ್, ಡೀಸೆಲ್ ದರದಲ್ಲಿ ಬದಲಾವಣೆ!!
ನವದೆಹಲಿ : ಪ್ರತಿ ತಿಂಗಳು ಮುಗಿದು ಹೊಸ ತಿಂಗಳು ಬರುವಾಗ ಕೆಲವೊಂದು ನಿಯಮಗಳು ಬದಲಾಗುತ್ತವೆ ಅಥವಾ ಇನ್ನಷ್ಟು ಹೊಸ ನಿಯಮಗಳು ಸೇರಿಕೊಳ್ಳುತ್ತವೆ. ಆಗಸ್ಟ್ 1 ರಿಂದ ಎಚ್‌ಡಿಎಫ್‌ಸಿ ಬ್ಯಾಂಕ್ ತನ್ನ ಕ್ರೆಡಿಟ್ ಕಾರ್ಡ್ ನಿಯಮಗಳನ್ನು ಬದಲಾಯಿಸಲಿದೆ. ಹಾಗೂ ಇನ್ನಷ್ಟು ನಿಯಮಗಳನ್ನು ಸೇರಿಸಲಿದೆ. ಭಾರತದಲ್ಲಿ ಗೂಗಲ್ ನಕ್ಷೆಗಳ ದರ ಕೂಡ ಬದಲಾಗಲಿದೆ. ಈ ಕುರಿತ ಹೊಸ ನಿಯಮಗಳ ಮಾಹಿತಿಯನ್ನು ತಿಳಿಯೋಣ.
ಸಿಲಿಂಡರ್ ದರ
ಪ್ರತಿ ತಿಂಗಳ ಆರಂಭದ ದಿನದಂದು ಸಿಲಿಂಡರ್ ನ ಶುಲ್ಕವನ್ನು ನಿಗದಿ ಪಡಿಸಲಾಗುತ್ತದೆ. ಇಂದಿನ ತಿಂಗಳು ಗ್ಯಾಸ್ ನ ದರ ಕಡಿಮೆ ಮಾಡಲಾಗಿತ್ತು. ಈ ತಿಂಗಳು ಕಡಿಮೆಯಾಗಲಿದೆ ಎಂದು ಹೇಳಲಾಗಿದೆ.
ಗೂಗಲ್ ಮ್ಯಾಪ್ ಶುಲ್ಕದಲ್ಲಿ ಹೆಚ್ಚಳ
ಈ ಕಂಪನಿಯು ತನ್ನ ಗೂಗಲ್ ಮ್ಯಾಪ್ ನ ನಿಯಮಾವಳಿಗಳು ಸಾಕಷ್ಟು ಬದಲಾವಣೆ ಮಾಡಿದೆ. ಶೇಕಡಾ 70 ರಷ್ಟು ತನ್ನ ಸೇವ ಶುಲ್ಕವನ್ನು ಕಡಿಮೆ ಮಾಡಿದೆ. ಡಾಲರ್ ಬದಲಾಗಿ ಭಾರತೀಯ ರೂಪಾಯಿಗಳಲ್ಲೇ ಶುಲ್ಕವನ್ನು ವಿಧಿಸಿಲು ಸಿದ್ಧತೆ ನಡೆಸಿದೆ. ಇದರಿಂದ ಸಾಮಾನ್ಯ ಬಳಕೆದಾರರ ಮೇಲೆ ಯಾವುದೇ ತೀವ್ರ ಪರಿಣಾಮ ಬೀರುವುದಿಲ್ಲ.
HDFC ಬ್ಯಾಂಕ್ ಕ್ರೆಡಿಟ್ ಕಾರ್ಡ್ ನಿಯಮ
ಮನೆಯ ಬಾಡಿಗೆ, ಫ್ರೀಚಾರ್ಜ್ ಹಾಗೂ ಇತರ ಸೇವೆಗಳ ವಹಿವಾಟಿಗೆ ಶೇಕಡಾ 1 ರಷ್ಟು ಶುಲ್ಕ ದರವನ್ನು ವಿಧಿಸಿದೆ. ಇದನ್ನು ಪ್ರತಿ 3000 ರೂ ಗೆ ನಿರ್ಬಂಧಿಸಲಾಗಿದೆ. ಜೊತೆಗೆ ಪೆಟ್ರೋಲ್ ಹಾಗೂ ಡೀಸೆಲ್ ಅನ್ನು ಒಂದೇ ವೇಳೆಗೆ 5000 ರೂಪಾಯಿಗಿಂದ ಹೆಚ್ಚು ದರದಲ್ಲಿ ಹಾಕಿಸಿದರೆ ಶೇಕಡಾ 1 ರಷ್ಟು ಶುಲ್ಕ ವಿಧಿಸಲಾಗುತ್ತದೆ.
ಯುಟಿಲಿಟಿ ಶುಲ್ಕ
50,000 ಕ್ಕೂ ಹೆಚ್ಚಿನ ಪ್ರಮಾಣದ ಯುಟಿಲಿಟಿ ಶುಲ್ಕದ ಮೇಲೆ ಶೇಕಡಾ 1 ರಷ್ಟು ಜೊತೆಗೆ ಇದು ಗರಿಷ್ಠ 3 ಸಾವಿರಕ್ಕೆ ಹೆಚ್ಚಿರಬೇಕಾಗುತ್ತದೆ. ವಿಮಾ ಮತ್ತು ಶಾಲಾ ಕಾಲೇಜುಗೆ ಇದು ಅನ್ವಯವಾಗುವುದಿಲ್ಲ. ಇಎಂಐ ಶುಲ್ಕ ಸಹ ಹೆಚ್ಚಲಿದೆ.
ಫಾಸ್ಟ್‌ಟ್ಯಾಗ್ ಕೆವೈಸಿ ನಿಯಮ ಬದಲು
ಫಾಸ್ಟ್‌ಟ್ಯಾಗ್ ಗೆ kyc ಮಾಡಿಸಬೇಕು. ನಾಳೆಯಿಂದ ಇದಕ್ಕೆ ಕೆಲವು ಹೊಸ ನಿಯಮಗಳು ಸೆರಲಿವೆ. ಅಕ್ಟೋಬರ್ 31 ರ ಒಳಗೆ kyc ಮಾಡಿಸುವುದು ಕಡ್ಡಾಯ ವಾಗಿದೆ.


