ಬೆಂಗಳೂರು : ಸ್ಯಾಂಡಲ್ ವುಡ್ ಗೆ ಭರ್ಜರಿ ಸಿನಿಮಗಳಾದ “ಗಾಳಿಪಟ 2 , ಉಳಿ ಉಪ್ಪು ಖಾರ, 100 , ಪಡ್ಡೆ ಹುಲಿ, 45′ ಚಿತ್ರಗಳನ್ನು ನೀಡಿರುವ “ರಮೇಶ್ ರೆಡ್ಡಿ’ ಬಾಲಿವುಡ್ ನಲ್ಲಿ “ಘುಸ್ಪೈಥಿಯಾ” ಎಂಬ ಸಿನಿಮಾಗೆ ಬಜೆಟ್ ಹಾಕಿದ್ದಾರೆ. ರಮೇಶ್ ರೆಡ್ಡಿ ಒಳಗೊಂಡಂತೆ “ಜ್ಯೋತಿಕ ಶೆಣೈ”, ಮಂಜರಿ “ಸುಸಿ ಗಣೇಶನ್” ಒಟ್ಟಾಗಿ ಚಿತ್ರ ನಿರ್ಮಾಣದಲ್ಲಿ ಕಾಣಿಸಿಕೊಂಡಿದ್ದಾರೆ. “ಸುಸಿ ಗಣೇಶನ್ “ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.
ಚಿತ್ರದ ಟ್ರೈಲರ್ ಇತ್ತೀಚೆಗೆ ಮುಂಬೈ ನಲ್ಲಿ ಬಿಡುಗಡೆ ಗೊಂಡಿತು. ಚಿತ್ರವು ಸೈಬರ್ ಕ್ರೈಂ ಕತೆಯನ್ನು ಒಳಗೊಂಡಿದೆ. ಈ ವೇಳೆ ಮಾತನಾಡಿದ ರಮೇಶ್ ರೆಡ್ಡಿ ” ನಿಮ್ಮ ಸಹಕಾರ ಸದಾ ಇರಲಿ. ಮುಂದಿನ ದಿನಗಳಲ್ಲಿ ಇನ್ನಷ್ಟು ಹಿಂದಿ ಚಿತ್ರಗಳನ್ನು ನಿರ್ಮಾಣ ಮಾಡುವುದಾಗಿ ತಿಳಿಸಿದರು.”
ಆಗಸ್ಟ್ 9 ರಂದು ಈ ಚಿತ್ರವು AA ಫಿಲಂಸ್ ನಲ್ಲಿ ಬಿಡುಗಡೆಯಾಗತ್ತಿದೆ. “ಊರ್ವಶಿ ರೌಟೇಲ, ನೀತ್ ಕುಮಾರ್ ಸಿಂಗ್, ಅಕ್ಷಯ್ ಒಬೆರಾಯ್ವಿ” ಮುಂತಾದವರು ಚಿತ್ರದ ತಾರಾಗಣದಲ್ಲಿ ತಮ್ಮ ಕೈ ಚಳಕ ತೋರಿಸಿದ್ದಾರೆ.
