ಬೆಂಗಳೂರು: ಕನ್ನಡದ ಬಿಗ್ ಬಾಸ್ 12 ಕ್ಕೆ ತೆರೆಬಿದ್ದಿದ್ದು, ನಿರೀಕ್ಷೆಯಂತೆಯೇ ಗಿಲ್ಲಿ ನಟ ಬಿಗ್ ಬಾಸ್ ವಿನ್ನರ್ ಪಟ್ಟವನ್ನು ಅಲಂಕರಿಸಿದ್ದಾರೆ.
112 ದಿನಗಳ ಬಿಗ್ ಬಾಸ್ ಪಯಣದಲ್ಲಿ ಜನಮನ್ನಣೆ ಗಳಿಸಿದ ಗಿಲ್ಲಿ ನಟ ಅತಿಹೆಚ್ಚು ವೋಟ್ ಪಡೆದು, ಪ್ರೇಕ್ಷಕರ ಮನ ಗೆದ್ದಿದ್ದಾರೆ. ಭಾನುವಾರ ನಡೆದ ಗ್ರ್ಯಾಂಡ್ ಫಿನಾಲೆಯಲ್ಲಿ ನಟ ಸುದೀಪ್, ಅಂತಿಮವಾಗಿ ಗಿಲ್ಲಿ ನಟನ ಕೈ ಮೇಲೆತ್ತುವ ಮೂಲಕ ವಿನ್ನರ್ ಘೋಷಣೆ ಮಾಡಿದರು.
ಮಂಗಳೂರು ಮೂಲದ ರಕ್ಷಿತಾ ಎರಡನೇ ಸ್ಥಾನ ಪಡೆದುಕೊಂಡರೆ, ನಟಿ ಹಾಗೂ ಕನ್ನಡ ರಕ್ಷಣಾ ವೇದಿಕೆಯ ಅಶ್ವಿನಿ ಅವರು ಮೂರನೇ ಸ್ಥಾನ ಪಡೆದರು. ಕಾವ್ಯಾ ಹಾಗೂ ರಘು ನಾಲ್ಕು ಹಾಗೂ ಐದನೇ ಸ್ಥಾನದಲ್ಲಿ ಬಿಗ್ ಬಾಸ್ ಮನೆಯಿಂದ ಹೊರಬಂದರು.
ವಿನ್ನರ್ ಗೆ 50 ಲಕ್ಷ ರು.ಗಳ ಬಹುಮಾನ ಹಾಗೂ ಒಂದು ಕಾರು ನೀಡಲಾಗುತ್ತಿದೆ ಎಂದು ಕಾರ್ಯಕ್ರಮದ ಆಯೋಜಕರು ಘೋಷಣೆ ಮಾಡಿದರು. ಎರಡನೇ ಸ್ಥಾನ ಪಡೆದ ರಕ್ಷಿತಾ ಕೂಡ ಸುಮಾರು 30 ಲಕ್ಣ ರು.ವರೆಗೆ ಬಹುಮಾನಗಳನ್ನು ತಮ್ಮದಾಗಿಸಿಕೊಂಡರು.

