ಜಗತ್ತು ಕಂಡ ದೈತ್ಯ ಆಲ್ ರೌಂಡರ್ ಬಿಗ್ ಶೋ ಎಂದೇ ಖ್ಯಾತಿಯಾಗಿರುವ ಗ್ಲೇನ್ ಮ್ಯಾಕ್ಸ್ ವೆಲ್ ಈಗ 2025 ರ ಐಪಿಎಲ್ ಗೆ ಆರ್ ಸಿ ಬಿ ತಂಡದಿಂದ ಹೊರಗುಳಿಯುವುದು ಬಹುತೇಕ ಖಚಿತ ಎಂದು ಹೇಳಲಾಗುತ್ತಿದೆ.
2024ರ ಐಪಿಎಲ್ ನಲ್ಲಿ ಗ್ಲೇನ್ ಮ್ಯಾಕ್ಸ್ ವೆಲ್ ಉತ್ತಮ ಪ್ರದರ್ಶನ ನೀಡಲು ವಿಫಲವಾದ್ದರಿಂದ ಸಂಭಾವ್ಯ ಪ್ಲೇಯಿಂಗ್ 11 ಇಂದಲೂ ಸಹ ಹೊರಗಿಡಲಾಗಿತ್ತು.
2021 ರ ಐಪಿಎಲ್ ಹರಾಜಿನಲ್ಲಿ ಆರ್ ಸಿ ಬಿ ಗ್ಲೇನ್ ಮ್ಯಾಕ್ಸ್ ವೆಲ್ ರನ್ನು ಬರೋಬ್ಬರಿ 14.25 ಕೋಟಿ ಕೊಟ್ಟು ಖರೀದಿ ಮಾಡಿತ್ತು. ಆ ವರ್ಷ ಮ್ಯಾಕ್ಸ್ ವೆಲ್ 15 ಪಂದ್ಯಗಳಲ್ಲಿ 6 ಅರ್ಧ ಶತಕಗಳೊಂದಿಗೆ ತನ್ನ ಬ್ಯಾಟ್ ಯಿಂದ ಸಿಡಿಸಿದ್ದು ಬರೋಬ್ಬರಿ 513 ರನ್ ಗಳು. ಈ ಕಾರಣದಿಂದ ಗ್ಲೇನ್ ಮ್ಯಾಕ್ಸ್ ವೆಲ್ ರನ್ನು ಆರ್ ಸಿ ಬಿ ಮೂರು ವರ್ಷಗಳಿಂದ ತಂಡದಲ್ಲೇ ಉಳಿಸಿಕೊಂಡಿದ್ದರು.
2024ರ ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಪರ ಬ್ಯಾಟ್ ಬೀಸಿದ ಗ್ಲೇನ್ ಮ್ಯಾಕ್ಸ್ ವೆಲ್ ಆಡಿದ 10 ಪಂದ್ಯಗಳಲ್ಲಿ ಗಳಿಸಿದ್ದು ಕೇವಲ 52 ರನ್ ಗಳು ಮಾತ್ರ. ಇಂತಹ ಪ್ರದರ್ಶರ್ನ ಕಂಡ ಮ್ಯಾನೇಜ್ಮೆಂಟ್ 11 ಜನರ ತಂಡದಿಂದಲೂ ಸಹ ಹೊರಗಿದಲಾಗಿತ್ತು.
ಈದೀಗ ಗ್ಲೇನ್ ಮ್ಯಾಕ್ಸ್ ವೆಲ್ ಸೋಶಿಯಲ್ ಮೀಡಿಯಾವಾದ ಇನ್ಸ್ಟಾಗ್ರಾಮ್ ನಲ್ಲಿ ರಾಯಲ್ ಚಾಲೆಂಜೆರ್ಸ್ ಬೆಂಗಳೂರಿನ ಅಧಿಕೃತ ಖಾತೆಯನ್ನು ಅನ್ ಫಾಲೋ ಮಾಡಿದ್ದಾರೆ. ಇದನ್ನು ಕಂಡ ಆರ್ ಸಿ ಬಿ ಅಭಿಮಾನಿಗಳು 2025ರ ಮೆಗಾ ಹರಾಜಿಗೂ ಮುನ್ನ ಗ್ಲೇನ್ ಮ್ಯಾಕ್ಸ್ ವೆಲ್ ರನ್ನು ಆರ್ ಸಿ ಬಿ ಕೈಬಿಡುವುದು ಬಹುತೇಕ ಖಚಿತ ಎನ್ನುತ್ತಿದ್ದಾರೆ.