ಬೆಂಗಳೂರು: ದೇಶದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಗಣನೀಯ ಏರಿಕೆಯಾಗಿದೆ. ೧೦ ಗ್ರಾಂ ಚಿನ್ನದ ಬೆಲೆ ರು. ಬುಧವಾರ ೯೧,೩೬೦ ಇತ್ತು. ಆದರೆ ಗುರುವಾರದ ವೇಳೆಗೆ ಸುಮಾರು ರು. ೧,೩೯೦ ಏರಿಕೆ ಆಗುವ ಮೂಲಕ ಬಂಗಾರ ಮತ್ತೆ ೯೨,೭೫೦. ರುಗೆ ತಲುಪಿದೆ. ಪ್ರತಿ ಕೆಜಿ ಬೆಳ್ಳಿ ಬೆಲೆ ರು. ಬುಧವಾರ ೯೧,೯೩೮ ರು. ಆಗಿತ್ತು. ಅದು ಇಂದು ೨,೭೦೮ ರುಗಳಷ್ಟು ಏರಿಕೆ ಕಾಣುವ ಮೂಲಕ ಗುರುವಾರ ೯೪,೬೪೬ಕ್ಕೆ ಬೆಲೆ ಏರಿಕೆಯಾಗದೆ
ಕಳೆದ ಕೆಲ ದಿನಗಳಿಂದ ತುಸು ಕೆಳಗ್ಗೆ ಬರುತ್ತಿದೆ ಎನ್ನುವಾಗಲೇ ಜಾಗತಿಕ ಆರ್ಥಿಕ ಪರಿಸ್ಥಿತಿಗಳು ಹಾಗೂ ಟ್ರಂಪ್ ಟಾರಿಫ್ ಘೋಷಣೆ ಹಿನ್ನೆಲೆ ಚಿನ್ನ ಬೆಳ್ಳಿ ದರ ಮತ್ತೆ ಏರುಮುಖವಾಗುತ್ತಿದೆ.
ಬೆಂಗಳೂರಿನಲ್ಲಿ ಬಂಗಾರದ ದರ: ಬೆಂಗಳೂರಿನಲ್ಲಿ ೯೯.೯ ಪ್ಯೂರಿಟಿಯ ೧೦ ಗ್ರಾಂ ಚಿನ್ನದ ನಾಣ್ಯದ ದರ ೯೪,೫೦೦ ರು. ಇದೆ. ಇನ್ನು ಬೆಳ್ಳಿ ಕೆಜಿ ೯೫,೨೦೦ ರು. ಇದೆ. ೨೨ ಕ್ಯಾರೆಟ್‌ನ ಒಂದು ಗ್ರಾಂ ಬಂಗಾರ ಸುಮಾರು ೨೭೦ ರು. ಏರಿಕೆ ಆಗುವ ಮೂಲಕ ೮೫೬೦ ರು.ಗೆ ಮಾರಾಟವಾಗುತ್ತಿದೆ. ಅದೇ ೧೦ ಗ್ರಾಂ ಬಂಗಾರಕ್ಕೆ ಸುಮಾರು ೨೭೦೦ ರುಗಿಂತ ಹೆಚ್ಚಾಗಿದೆ. ಅಂದರೆ ಸುಮಾರು ೮೫,೬೦೦ ರು.
೧೮ ಕ್ಯಾರೆಟ್‌ನ ೧ ಗ್ರಾಂ ಬಂಗಾರಕ್ಕೆ ಇಂದಿನ ದರ ೭೦೦೪ ರು. ಇದ್ದು ಸುಮಾರು ೨೨೧ ರೂಪಾಯಿ ಏರಿಕೆ ಆಗಿದೆ. ಅದೇ ೧೦ ಗ್ರಾಂಗೆ ೭೦೦೪೦ ರು. ದರ ಇದೆ. ಇನ್ನು ಹೈದರಾಬಾದ್‌ನಲ್ಲಿ ಹತ್ತು ಗ್ರಾಂ ಚಿನ್ನದ ಬೆಲೆ ರು. ೯೨,೭೫೦ ರು. ಇದ್ದರೆ, ಒಂದು ಕಿಲೋ ಬೆಳ್ಳಿಯ ಬೆಲೆ ರು. ೯೪,೬೪೬. ಇದೆ.
ಸ್ಪಾಟ್ ಚಿನ್ನದ ಬೆಲೆ: ಸ್ಪಾಟ್ ಚಿನ್ನದ ಬೆಲೆ ಏಪ್ರಿಲ್ ೧೦, ೨೦೨೫: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ದರಗಳು ಗಣನೀಯವಾಗಿ ಹೆಚ್ಚಿವೆ. ಒಂದು ಔನ್ಸ್ ಚಿನ್ನದ ಬೆಲೆ ಬುಧವಾರ $೩,೦೦೭, ಆದರೆ ಗುರುವಾರ $೩,೧೨೮ ಗೆ $೧೨೧ ಏರಿಕೆಯಾಗಿದೆ. ಪ್ರತಿ ಔನ್ಸ್ ಬೆಳ್ಳಿಯ ಪ್ರಸ್ತುತ ಬೆಲೆ ೩೧.೦೮ ಆಗಿದೆ.