ಗದಗ : ಜಿಲ್ಲೆಯ ಕಪ್ಪತ್ತಗುಡ್ಡದಲ್ಲಿ ನಿಗೂಢ ಗುಹೆಗಳು ಇವೆ. ಗದಗ ಜಿಲ್ಲೆಯ ಮಹಾಲಿಂಗಾವಳಿಪುರದ ಕಪ್ಪತ್ತಗುಡ್ಡದಲ್ಲಿ ಅದ್ಭುತ ಗುಹೆಗಳು ಎಲ್ಲರ ಗಮನಸೆಳೆಯುತ್ತಿದ್ದು, ಚಿನ್ನದ ನಿಕ್ಷೇಪ ಆಗಿರುವ ಸಾಧ್ಯತೆಯಿದೆ ಎಂದೂ ಅಂದಾಜಿಸಲಾಗಿದೆ. ಬೃಹತ್ ಆಕಾರದಲ್ಲಿ ಇರುವ ಗುಹೆಗಳ ರಹಸ್ಯ ಇನ್ನೂ ಬಯಲಾಗಿಲ್ಲ.
ಗುಹೆಯ ಒಳಗೆ ಮತ್ತೊಂದು ಗುಹೆಗಳು ಇರುವುದು ಪತ್ತೆಯಾಗಿತ್ತು. ಹಿಂದೆ ಚಿನ್ನದ ನಿಕ್ಷೇಪಕ್ಕಾಗಿ ಸಾಂಗಲಿ ಸಂಸ್ಥಾನದ ಆಡಳಿತದಲ್ಲಿ ಗಣಿಗಾರಿಕೆಗೆ ಬಳಸಿರುವ ಕುರುಹುಗಳು ಇಲ್ಲಿವೆ.
ಮಹಾಲಿಂಗ ಗ್ರಾಮದ ಸ್ಥಳೀಕರು ಮಾತನಾಡಿ, ಇಲ್ಲಿಂದ ಸಾಕಷ್ಟು ಬಂಗಾರ ಕೊಂಡ ಹೋಗಿರುವ ಉಲ್ಲೇಖಗಳು ಇತಿಹಾಸದಲ್ಲಿ ಇವೆ. ಬ್ರಿಟೀಷರು ಈ ಗುಹೆಗಳನ್ನು ಮಾಡಿದ್ದರು. ನಂತರ ಬರಗಾಲದಲ್ಲಿಯೂ ಸುತ್ತಲಿನ ಗ್ರಾಮಗಳಾದ ಮಹಾಲಿಂಗಪುರ, ಅತ್ತಿಕಟ್ಟಿ, ಕಬುಲಾಯದಕಟ್ಟಿಯ ಸ್ಥಳೀಯರು ಇಲ್ಲಿನ ಚಿನ್ನ ಬಳಸಿಯೇ ಬದುಕಿದ್ದರು.
ಸ್ಥಳೀಯರೊಬ್ಬರು ಮಾತನಾಡಿ, ಇಲ್ಲಿನ ಬಂಗಾರವನ್ನು ತೆಗೆದೇ ಜೀವನ ನಡೆಸಿದ್ದೇವೆ. ಆದರೆ ಚಿಮಣಿಯಿಂದ ಬರುವ ಹೊಗೆ, ಕಾರ್ಬನ್ ಜಾಸ್ತಿಯಾಗಿ, ಕೆಮ್ಮಿ ಕೆಮ್ಮಿ 20 ಜನಕ್ಕೂ ಹೆಚ್ಚು ಜನ ಈ ಗ್ರಾಮದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ ಎನ್ನುತ್ತಾರೆ.
ಈ ಗ್ರಾಮದಲ್ಲಿ 1 ಗ್ರಾಂ ಚಿನ್ನ 11 ರೂಪಾಯಿಗೆ ಮಾರಾಟ ಮಾಡಿದ ಉಲ್ಲೇಖವೂ ಇದೆ. ಮಳೆಗಾಲದಲ್ಲಿ ಚಿನ್ನವು ಹೊಳೆಯುತ್ತಿತ್ತು ಎಂದು ನೆನಪಿಸಿಕೊಳ್ಳುತ್ತಾರೆ. ಕಪ್ಪತ್ತಗುಡ್ಡದಲ್ಲಿ ಹಟ್ಟಿ ಚಿನ್ನದ ಕಂಪನಿಯಿಂದಲೂ ಗಣಿಗಾರಿಕೆ ನಡೆದಿತ್ತು ಎನ್ನುತ್ತಾರೆ ಸ್ಥಳೀಯರು.

