ಬೆಂಗಳೂರು: ಮಲೇಶಿಯಾದ ಲಿಂಕನ್ ಯೂನಿವರ್ಸಿಟಿಯಲ್ಲಿ ಮೇ 15 ರಂದು ಏರ್ಪಡಿಸಿದ್ದ 5 ನೇ ಅಂತರರಾಷ್ಟ್ರೀಯ ಮಟ್ಟದ 41 ರಿಂದ 50 ವರ್ಷ ವಿಭಾಗದ ಯೋಗಾಸನ ಸ್ಪರ್ಧೆಯಲ್ಲಿ ವರ್ಷಿಣಿ ಯೋಗ, ಶಿಕ್ಷಣ, ಸಾಂಸ್ಕೃತಿಕ, ಕ್ರೀಡಾ ಟ್ರಸ್ಟ್‌ನಿಂದ ಎನ್.ಪಿ.ವೆಂಕಟೇಶ್ ಆಚಾರ್ಯ ಭಾರತದಿಂದ ಪ್ರತಿನಿಧಿಸಿ ಪ್ರಥಮ ಸ್ಥಾನದೊಂದಿಗೆ ಬಂಗಾರದ ಪದಕ ಪಡೆದಿದ್ದಾರೆ. ಇವರಿಗೆ ಸ್ನೇಹಿತರು, ಅಧಿಕಾರಿಗಳು ಟ್ರಸ್ಟ್‌ನ ಪದಾಧಿಕಾರಿಗಳು ಅಭಿನಂದನೆ ಸಲ್ಲಿಸಿದ್ದಾರೆ.

