ಉಪಯುಕ್ತ ಫ್ಯಾಷನ್ ಸುದ್ದಿ

ಬಂಗಾರ ಪ್ರಿಯರಿಗೆ ಬಂಗಾರದಂತಹ ಸುದ್ದಿ

Share It

ಬೆಂಗಳೂರು: ಬಂಗಾರಪ್ರಿಯರಿಗೆ ಬಂಗಾರ ಬಂಗಾರದಂತಹ ಸುದ್ದಿಯೊಂದು ಸಿಕ್ಕಿದ್ದು, 10 ಗ್ರಾಂ ಚಿನ್ನದ ಮೇಲೆ 1 ಸಾವಿರಕ್ಕೂ ಅಧಿಕ ಬೆಲೆ ಕಡಿಮೆಯಾಗಿದೆ.

ಕಳೆದ ಎರಡು ಮೂರು ತಿಂಗಳಲ್ಲಿ ವಿವಾಹ ಕಾರ್ಯಕ್ರಮ ಮತ್ತು ಅತಿ ಹೆಚ್ಚು ಖರೀದಿಯಿಂದ ದೇಶದಲ್ಲಿ ಚಿನ್ನ ಮತ್ತು ಬೆಳ್ಳಿಯ ದರ ಭಾರೀ ಪ್ರಮಾಣದಲ್ಲಿ ಏರಿಕೆ ಕಂಡಿತ್ತು. ಇದೀಗ ಹಳದಿ ಲೋಹದ ಬೆಲೆಯಲ್ಲಿ ಭಾರೀ ಇಳಿಕೆ ಕಂಡಿದೆ.

10 ಗ್ರಾಂ ಚಿನ್ನದ ಬೆಲೆ 1 ಸಾವಿರ ರೂಪಾಯಿ ಇಳಿಕೆಯಾಗಿದ್ದು, ಪ್ರಸ್ತುತ ರಾಜ್ಯದಲ್ಲಿ 73,490 ರೂಪಾಯಿಗೆ ಚಿನ್ನ ಮಾರಾಟವಾಗುತ್ತಿದೆ. ಪ್ರತಿ ಕೆಜಿ ಬೆಳ್ಳಿ ಬೆಲೆಯಲ್ಲಿ ಯಾವುದೇ ಇಳಿಕೆಯಾಗದೇ ಸದ್ಯ 100 ರೂ. ಹೆಚ್ಚಳದೊಂದಿಗೆ ಅದು 95,600 ರೂಪಾಯಿಗೆ ವಹಿವಾಟು ನಡೆಸುತ್ತಿದೆ.

ಬೆಂಗಳೂರಿನಲ್ಲಿ 24 ಕ್ಯಾರೆಟ್‌ನ ಚಿನ್ನದ ದರ 73,420 ರೂ., ಬೆಳ್ಳಿ 95,600 ರೂಪಾಯಿ, 22 ಕ್ಯಾರೆಟ್‌ನ 10 ಗ್ರಾಂ ಆಭರಣ ಚಿನ್ನದ ದರ 67,300 ರೂಪಾಯಿ, ಇದೇ ನಿನ್ನೆ 68,300ಕ್ಕೂ ಹೆಚ್ಚಿತ್ತು, ಬೆಳಗಾವಿಯಲ್ಲಿ 24 ಕ್ಯಾರೆಟ್ ಚಿನ್ನದ ದರ 73,420 ರೂ., ಬೆಳ್ಳಿ 95,600 ರೂಪಾಯಿ, ಬಳ್ಳಾರಿಯಲ್ಲಿ 24 ಕ್ಯಾರೆಟ್‌ನ ಚಿನ್ನದ ದರ 73,420 ರೂ., ಬೆಳ್ಳಿ 95,600 ರೂಪಾಯಿ, ಮಂಗಳೂರಿನಲ್ಲಿ 24 ಕ್ಯಾರೆಟ್ ಚಿನ್ನದ ದರ 73,420 ರೂ., ಬೆಳ್ಳಿ 95,600 ರೂಪಾಯಿ, ಮೈಸೂರಿನಲ್ಲಿ 24 ಕ್ಯಾರೆಟ್ ಚಿನ್ನದ ದರ 73,420 ರೂ., ಬೆಳ್ಳಿ 95,600 ರೂಪಾಯಿ ಇದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲೂ ಚಿನ್ನ ಮತ್ತು ಬೆಳ್ಳಿಯ ದರಗಳು ಕಡಿಮೆಯಾಗಿವೆ. ಒಂದು ಔನ್ಸ್ ಚಿನ್ನದ ಬೆಲೆ 40 ಡಾಲರ್‌ಗಳಷ್ಟು ಇಳಿಕೆಯಾಗಿ 2,369 ಡಾಲರ್‌ಗಳಿಗೆ ತಲುಪಿದೆ. ಒಂದು ಔನ್ಸ್ ಬೆಳ್ಳಿಯ ಬೆಲೆ 30.74 ಡಾಲರ್ ಇದೆ.


Share It

You cannot copy content of this page