ಕ್ರೀಡೆ ಸುದ್ದಿ

ಕ್ರಿಕೆಟ್ ಪ್ರಿಯರಿಗೆ ಗುಡ್‌ನ್ಯೂಸ್: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯ ಆಯೋಜನೆಗೆ ಗ್ರೀನ್ ಸಿಗ್ನಲ್

Share It

ಬೆಂಗಳೂರು: ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಐಪಿಎಲ್ ಮತ್ತು ಅಂತರರಾಷ್ಟ್ರೀಯ ಪಂದ್ಯಗಳ ಆಯೋಜನೆಗೆ ಕೊನೆಗೂ ಅನುಮತಿ ಸಿಕ್ಕಿದ್ದು, ಇನ್ಮುಂದೆ ಪಂದ್ಯ ನಡೆಸಲು ಅವಕಾಶ ನೀಡಲಾಗಿದೆ.

ಈ ಕುರಿತು ರಾಜ್ಯ ಗೃಹ ಇಲಾಖೆ ತೀರ್ಮಾನ ಪ್ರಕಟಿಸಿದ್ದು, ಅಂತಾರಾಷ್ಟಿçÃಯ ಮತ್ತು ಐಪಿಎಲ್ ಪಂದ್ಯಗಳನ್ನು ನಡೆಸಲು ಅನುಮತಿಸಿದೆ. ಕೆಎಸ್‌ಸಿಎ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಪಂದ್ಯಗಳ ಆಯೋಜನೆಗೆ ಸರಕಾರಕ್ಕೆ ಮನವಿ ಮಾಡಿಕೊಂಡಿತ್ತು.

ಸರಕಾರ ಸಮಿತಿ ರಚನೆ ಮಾಡಿ, ಅನುಮತಿ ನೀಡುವ ಕುರಿತು ಪರಿಶೀಲನೆ ನಡೆಸುವಂತೆ ಸೂಚನೆ ನೀಡಿತ್ತು. ಆ ಸಮಿತಿ ವಿಧಿಸಿದ ಷರತ್ತುಗಳನ್ನು ಕೆಎಸ್‌ಸಿಎ ಪೂರೈಸಿದ ಹಿನ್ನೆಲೆಯಲ್ಲಿ ಪಂದ್ಯ ಆಯೋಜನೆಗೆ ಸರಕಾರ ಅನುಮತಿ ನೀಡಿದೆ.

ಆರ್‌ಸಿಬಿ ಕಪ್ ಗೆದ್ದ ಸಂಭ್ರಮವನ್ನು ಆಚರಿಸಲು ಸೇರಿದ್ದ ಭಾರಿ ಜನಸ್ತೋಮದಲ್ಲಿ ಕಾಲ್ತುಳಿತ ಉಂಟಾಗಿ ೧೧ ಜನರು ಮೃತಪಟ್ಟಿದ್ದರು. ಇದು ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಇದ್ದ ಬಹುದೊಡ್ಡ ಹೆಸರಿಗೆ ಕಳಂಕ ತರುವ ಪರಿಸ್ಥಿತಿಯನ್ನು ನಿರ್ಮಿಸಿತ್ತು. ಈ ಹಿನ್ನೆಲೆಯಲ್ಲಿ ಸರಕಾರ ಪಂದ್ಯಗಳ ಆಯೋಜನೆಗೆ ತಡೆಯೊಡ್ಡಿತ್ತು.

Updating….


Share It

You cannot copy content of this page