ಬೆಂಗಳೂರು: ಕೇಂದ್ರ ಸರಕಾರದ ನರೇಗಾ ಕಾಯ್ದೆಯ ಹೆಸರು ಬಡಲಾವಣೆ ವಿರೋಧಿಸಿ ನಡೆಯುತ್ತಿರುವ ಅಧಿವೇಶನದಲ್ಲಿ ರಾಜ್ಯಪಾಲರು ಮತ್ತು ಸರಕಾರದ ನಡುವಿನ ಹಗ್ಗಜಗ್ಗಾಟ ಸದನದಲ್ಲಿ ಮುಂದುವರಿಯುವ ಸಾಧ್ಯತೆಯಿದೆ.
ರಾಜ್ಯಪಾಲರು ಅಧಿವೇಶನದಲ್ಲಿ ಭಾಗವಹಿಸಲು ನಿರಾಕರಿಸುವ ಸಾಧ್ಯತೆಯಿದೆ ಎಂದು ಹೇಳಲಾಗಿತ್ತು. ಆದರೆ, ಭಾಷಣದ ಕೆಲವು ಪ್ಯಾರಗಳನ್ನು ತೆಗೆದು ಭಾಷಣ ಸಿದ್ಧಪಡಿಸುವಂತೆ ಸೂಚನೆ ನೀಡಿದ ಬೆನ್ನಲ್ಲೇ ಅವರ ಭಾಗವಹಿಸುವಿಕೆ ಬಹುತೇಕ ಖಚಿತವಾಗಿದೆ.
ರಾಜ್ಯಪಾಲರು ಭಾಷಣ ಮಾಡಲು ಹಿಂದೇಟು ಹಾಕಿದರೆ ಕಾನೂನು ಮೊರೆ ಹೋಗಲು ಸರಕಾರ ತೀರ್ಮಾನಿಸಿತ್ತು. ಆದರೆ, ರಾಜ್ಯಪಾಲರ ನಿರ್ಣಯದಿಂದ ಅದಕ್ಕೆ ಹಿನ್ನಡೆಯಾಗಿದೆ. ಆದರೆ, ರಾಜ್ಯಪಾಲರು ತಮ್ಮದೇ ಆದ ಭಾಷಣ ಓದಲು ಸಿದ್ಧತೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಇದು ಸರಕಾರಕ್ಕೆ ಮುಜುಗರ ತರುವ ಸಾಧ್ಯತೆಯಿದೆ.
ಹೀಗಾಗಿ, ರಾಜ್ಯಪಾಲರ ಆಗಮನಕ್ಕೆ ಕ್ಷಣಗಣನೆ ಶೂರುವಾಗಿದ್ದರೂ, ಅವರ ಭಾಷಣವೇನು? ಎಂಬುದರ ಮೇಲೆ ಸದನದಲ್ಲಿ ಪರಿಸ್ಥಿತಿ ನಿರ್ಣಯವಾಗಲಿದೆ. ಬಿಜೆಪಿ ಸರಕಾರದ ನಿರ್ಧಾರವನ್ನೇ ವಿರೋಧಿಸುತ್ತಿದ್ದರೆ, ಸರಕಾರ ಕೇಂದ್ರದ ನಿರ್ಧಾರವನ್ನು ವಿರೋಧಿಸುತ್ತಿದೆ. ಇದು ಸಮಸ್ಯೆಗೆ ಕಾರಣವಾಗಲಿದೆ.

